'ಎಚ್ಐವಿ ಸೋಂಕಿತರಿಗೆ ಸಹಕಾರ ನೀಡಬೇಕು'
ಹೊಳೆನರಸೀಪುರ: ಹೆಚ್.ಐ.ವಿ ಮತ್ತು ಏಡ್ಸ್ನಂತಹ ಮಾರಕ ರೋಗಗಳು ಬರದಂತೆ ತಡೆಯುವುದು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಹೆಚ್ಐವಿ ಹಾಗೂ ಏಡ್ಸ್ ಸೋಂಕಿತರನ್ನು ಸಮಾಜದಲ್ಲಿ ಯಾವುದೇ ರೀತಿಯಿಂದ ಬಹಿಷ್ಕರಿಸದೇ, ಅವರೊಡನೆ ಮಾನವೀಯ ಒಡನಾಟದ ಸಹಕಾರವನ್ನು ನೀಡುವುದು ಕೂಡ ಬಹುಮುಖ್ಯ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಈ. ಮಧುಸೂದನ್ ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜಿನ ರೆಡ್ರಿಬ್ಬನ್ ಕ್ಲಬ್ ಮತ್ತು ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೆಚ್.ಐ.ವಿ ಹಾಗೂ ಏಡ್ಸ್ ಬಗೆಗಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಹಕಾರ ನೀಡಬೇಕು: ಹೆಚ್.ಐ.ವಿ- ಏಡ್ಸ್ ಸೋಂಕಿನ ಲಕ್ಷಣಗಳು ವ್ಯಕ್ತಿಯಲ್ಲಿ ಕಂಡುಬಂದ ಮಾತ್ರಕ್ಕೆ ಹೆಚ್.ಐ.ವಿ- ಏಡ್ಸ್ ಬಂದಿದೆ ಎಂದು ಕಲ್ಪಿಸಿಕೊಳ್ಳದೇ ಒಂದರಿಂದ ಮೂರು ಬಾರಿ ರಕ್ತ ಪರೀಕ್ಷೆ ಮಾಡಿಸಿ ದೃಢಪಡಿಸಿಕೊಂಡು ಸೂಕ್ತ ಚಿಕಿತ್ಸೆ ಮತ್ತು ನೆರವು ದೊರಕಲು ಅಂತಹ ವ್ಯಕ್ತಿಗೆ ಸಹಕಾರ ನೀಡುವಂತೆ ಕೋರಿದರು.
1986 ರಲ್ಲಿ ಕೇವಲ ಒಬ್ಬರಿಗಿದ್ದ ಹೆಚ್.ಐ.ವಿ ಸೋಂಕು 2011 ರ ವೇಳೆಗೆ 24 ಲಕ್ಷ ಜನರಿಗೆ ಹೆಚ್.ಐ.ವಿ ಸೋಂಕು ಹರಡಿರುವುದನ್ನು ಅಂಕಿ ಅಂಶಗಳ ವರದಿಗಳು ಹೇಳುತ್ತವೆ ಈ ರೋಗ ಇದೇ ರೀತಿ ಉಳಿದ ಹತ್ತು ವರ್ಷಗಳಲ್ಲಿ ಈ ವರೆಗೆ ಈವರೆಗೆ ಇನ್ನಷ್ಟು ಹೆಚ್ಚಿರಬಹುದೆಂದು ಅಭಿಪ್ರಾಯಪಟ್ಟರು. ೈಯುವಜನತೆ ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದು ಶೇ. 85ರಷ್ಟು ಹೆಚ್.ಐ.ವಿ ಸೋಂಕು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹಾಗೂ ಉಳಿದ ಶೇ.15ರಷ್ಟು ಹೆಚ್.ಐ.ವಿ ಸೋಂಕಿತ ತಾಯಿಯಿಂದ ಮಗುವಿಗೆ, ಸಂಸ್ಕರಿಸದ ಸೂಜಿಯಿಂದ, ಪರೀಕ್ಷೆಗೊಳಪಡಿಸದ ರಕ್ತ ಪಡೆಯುವುದರಿಂದ ಹರಡುತ್ತದೆ. ಆದ್ದರಿಂದ ಯುವಕರು ಹೆಚ್ಚು ಜಾಗ್ರತೆ ವಹಿಸಲು ಮಧುಸೂದನ್ ತಿಳಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಮತ್ತು ಯುವ ರೆಡ್ಕ್ರಾಸ್ ಘಟಕದ ಸಂಚಾಲಕರಾದ ಕೆ. ಶಿವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಹೆಚ್.ಐ.ವಿ- ಏಡ್ಸ್ ಬಗ್ಗೆ ಸಂಪೂರ್ಣ ಜ್ಞಾನ ಪಡೆದು ತಮ್ಮ ಬದುಕಿನಲ್ಲಿ ಅಳವಡಿಕೊಂಡಾಗ ಮಾತ್ರ ಕಾರ್ಯಕ್ರಮದ ಸದುದ್ದೇಶ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎಂ.ಎಸ್. ಸಂಪತ್ ಕುಮಾರ್ ವಹಿಸಿದ್ದರು.
ಹೆಚ್.ಐ.ವಿ ಜಾಗೃತಿಗೆ ಸಂಬಂಧಿಸಿದಂತೆ ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ, ಭಿತ್ತಿಚಿತ್ರ, ಕಿರು ನಾಟಕ, ಘೋಷಣೆ ಸ್ಪರ್ಧೆಗಳನ್ನು ಏರ್ಪಡಿಸಿ, ಇವುಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕರಾದ ಎಂ.ಎಸ್. ಮಂಜುನಾಥ್, ಎಂ.ಸಿ. ವಿನೋದ್ ಕುಮಾರ್, ಎಚ್.ಟಿ. ರವಿಕುಮಾರ್, ವಸಂತ್ ಕುಮಾರ್ ಹಾಜರಿದ್ದರು. ವನಜಾಕ್ಷಿ ಪ್ರಾರ್ಥಿಸಿ, ಉಪನ್ಯಾಸಕ ಎಚ್.ಜೆ. ಬೋರಯ್ಯ ವಂದಿಸಿದರು. ನಿಶ್ಚಿತ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

