ಜನರ ಟೀಕೆಗೆ ಬಗ್ಗಿದ ವಿದ್ಯಾರ್ಥಿ ಸಮೂಹ
ಆಲೂರು: ಅಂದು ಹಾರಾಟ, ಇಂದು ಹೋರಾಟ ! ಇದು ಪಟ್ಟಣದ ಪದವಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ನಡೆದುಕೊಂಡ ರೀತಿ. ಪ್ರಾಧ್ಯಾಪಕರನ್ನೇ ಕಾಲೇಜಿನಲ್ಲಿ ಕೂಡಿಹಾಕಿ, ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿ ಸಮೂಹವನ್ನು ಸಾರ್ವಜನಿಕರು ಟೀಕಿಸಿದ ಹಿನ್ನೆಲೆಯಲ್ಲಿ, ಬುಧವಾರದ ಪ್ರತಿಭಟನೆಗೆ ಹಠಾತ್ ಶಾಂತಿಯ ಸ್ವರೂಪ ಬಂದುಬಿಟ್ಟಿತ್ತು. ಎಲ್ಲಾ ಸೌಜನ್ಯಗಳನ್ನೂ ಗಾಳಿಗೆ ತೂರಿ ವಿದ್ಯಾರ್ಥಿ ಸಮೂಹವೇ ನಾಚುವಂಥ ಕೆಲಸ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳು ಕೊನೆಗೂ ತಣ್ಣಗಾಗಿ ತಮ್ಮ ಬೇಡಿಕೆಗಳನ್ನು ಶಾಂತ ರೀತಿಯಲ್ಲೇ ನಿವೇದಿಸಿಕೊಂಡರು.
ಫೆ. 4ರಂದು ಬೆಳಗ್ಗೆ ಪ್ರಾಧ್ಯಾಪಕರನ್ನು ಹೊರ ಹಾಕಿ ಕಾಲೇಜಿಗೆ ಬೀಗ ಹಾಕಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆಗೆ ಸ್ಥಳಕ್ಕಾಗಮಿಸಿದ್ದ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದ ಶಾಸಕರ ಮಾತನ್ನು ಕೇಳದೇ ಮಧ್ಯಾಹ್ನದ ನಂತರ ಕೊಠಡಿಗಳಲ್ಲಿ ಪ್ರಾಧ್ಯಾಪಕರನ್ನು ಕೂಡಿ ಹಾಕಿ ಪ್ರತಿಭಟನೆ ನಡೆಸಿದ್ದರು. ಪ್ರಾಧ್ಯಾಪಕರನ್ನೇ ಕೂಡಿ ಹಾಕಿ ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆ ನಡೆಸಿದ್ದರು.
ವಿದ್ಯಾರ್ಥಿಗಳ ಈ ನಡೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ, ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರತಿಯಾಗಿ ಮತ್ತೊಂದು ಪ್ರತಿಭಟನೆ ನಡೆಸುವ ಬಗ್ಗೆ ಜನ ಎಚ್ಚರಿಸಿದ್ದರು.
ಕ್ಷಮೆ ಕೋರಿದರು: ಜನರ ಬಯ್ಗುಳಗಳಿಂದ ಎಚ್ಚೆತ್ತ ವಿದ್ಯಾರ್ಥಿಗಳು ಬೆಳಗ್ಗೆ ಕಾಲೇಜಿಗೆ ಬಂದು ಪ್ರಾಧ್ಯಾಪಕರ ಕ್ಷಮೆಯಾಚಿಸಿ, ತರಗತಿಗಳನ್ನು ಬಹಿಷ್ಕರಿಸಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಮಧ್ಯಾಹ್ನ ಪ್ರಾಂಶುಪಾಲರು, ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಶಾಸಕರು ಹೆಚ್ಚುವರಿ ಕೊಠಡಿ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಬೇಡಿಕೆಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯ, ಪೀಠೋಪಕರಣಗಳು, ಗ್ರಂಥಾಲಯ ಹಾಗೂ ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸುವ ಭರವಸೆ ನೀಡಿದರು.
ಬೇಡಿಕೆಗಳ ಪೂರೈಕೆಗೆ 10 ದಿನಗಳ ಗಡವು ನೀಡಿದ್ದು, ಅಷ್ಟರೊಳಗೆ ಬೇಡಿಕೆಗಳು ಈಡೇರದಿದ್ದಲ್ಲಿ ಪುನಃ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

