ಕಾಲಭೈರವೇಶ್ವರಸ್ವಾಮಿ ಕುಂಭಾಭಿಷೇಕ 9ರಂದು
ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿಗೆ ಸೇರಿದ ಚಾಕೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಾಲಯದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿಯ ಪ್ರತಿಷ್ಠಾಪನೆ ಹಾಗೂ, ಕುಂಬಾಭಿಷೇಕ ಮಹೋತ್ಸವವನ್ನು ಫೆ. 9ರ ಭಾನುವಾರದಂದು ಶೃಂಗೇರಿ ಶಾರದಾಪೀಠಾಧ್ಯಕ್ಷ ಶ್ರೀ ಭಾರತೀತೀರ್ಥ ಮಹಾಸ್ವಾಮಿ ನೆರವೇರಿಸಲಿದ್ದಾರೆ ಎಂದು ಮಹೋತ್ಸವದ ಆಯೋಜಕ ದ ಎಚ್.ಎಸ್. ಸುಬ್ರಹ್ಮಣ್ಯ ಹಾಗೂ ಕೃಷ್ಣಮೂರ್ತಿಭಟ್ಟರು ತಿಳಿಸಿದ್ದಾರೆ.
ಫೆ. 8ರಿಂದ ಫೆ.10ರವರೆಗೆ ಮೂರು ದಿನಗಳ ಕಾಲ ಮಹೋತ್ಸವ ನಡೆಯಲಿದ್ದು, ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ಅವರು ನೀಡಿದರು.ಸಭಾ ಕಾರ್ಯಕ್ರಮ: ಫೆ. 8ರಂದು ಹರಿಹರಪುರಕ್ಕೆ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಆಗಮಿಸಲಿದ್ದು, ಗ್ರಾಮಸ್ಥರಿಂದ ಪೂರ್ಣಕುಂಭ ಸ್ವಾಗತ ನೆರವೇರಲಿದೆ. ನಂತರ ಹರಿಹರಪುರದ ಶ್ರೀ ಮಾಧವಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮ ವಿವರ: ದೇವಾಲಯದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಫೆ. 8ರಂದು ಪುಣ್ಯಾಹ, ಸ್ವಸ್ತಿವಾಚನ, ಶ್ರೀ ಮಹಾಗಣಪತಿ-ಸದ್ಗುರು ಪ್ರಾರ್ಥನೆ, ಗೋಪೂಜೆ, ಪಂಚಗವ್ಯ, ಯಾಗಶಾಲಾ ಶುದ್ಧಿ, ರಕ್ಷಾಬಂಧನ, ಮಣತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, ಋತ್ವಿಗ್ವರಣ, ಕಲಶಾರಾಧನೆ, ಮಹಾಗಣಪತಿ ಹೋಮ, ಸುಬ್ರಹ್ಮಣ್ಯ ಹೋಮ, ಕಲಾ ಹೋಮ, ನಿತ್ಯ ಹೋಮ, ವಾಸ್ತು ಹೋಮ ಬಲಿ ಪ್ರಧಾನ ಮೊದಲಾದ ದೇವತಾ ಪ್ರತಿಷ್ಠಾಂಗ ಪ್ರಧಾನ ಹೋಮಗಳು ನಡೆಯಲಿದೆ ಎಂದು ಕೃಷ್ಣಮೂರ್ತಿ ಭಟ್ಟರು ತಿಳಿಸಿದ್ದಾರೆ.
ಫೆ. 9ರ ಭಾನುವಾರದಂದು ಜಗದ್ಗುರು ಮಹಾಸ್ವಾಮಿಗಳು ಹರಿಹರಪುರದಿಂದ ಚಾಕೇನಹಳ್ಳಿ ಗ್ರಾಮಕ್ಕೆ ತೆರಳಲಿದ್ದು, ಅಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ, ರುದ್ರ ಹೋಮದ ಪೂರ್ಣಾಹುತಿಯ ನಂತರ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಅಮೃತಹಸ್ತದಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರತಿಷ್ಠಾಪನೆ, ಪೂಜೆ ಹಾಗೂ ಕುಂಬಾಭಿಷೇಕ ಮತ್ತು ಸಾರ್ವಜನಿಕ ಧಾರ್ಮಿಕ ಸಭೆ ನಡೆಯಲಿದೆ.
ಗಣ್ಯರು ಭಾಗಿ: ಮಹೋತ್ಸವದ ಕಾರ್ಯಕ್ರಮಗಳ ವಿದ್ಯುಕ್ತ ಉದ್ಘಾಟನೆ ಫೆ. 8ರ ಬೆಳಗ್ಗೆ ನೆರವೇರಲಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳು ಹಾಗೂ ಹಾಸನ ಜಿಲ್ಲಾ ಸಂಸದರಾದ ಎಚ್.ಡಿ.ದೇವೇಗೌಡ ಅವರು ಪಾಲ್ಗೊಳ್ಳಿದ್ದಾರೆ. ಹೈಕೋರ್ಟ್ನ ನ್ಯಾಯಾಧೀಶ ಅರವಿಂದಕುಮಾರ್, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಭಾಗವಹಿಸಲಿರುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

