'ಯುವಕರಲ್ಲಿ ಧಾರ್ಮಿಕ ಶ್ರದ್ಧೆ ಕಡಿಮೆ'
ಬೇಲೂರು: ಯುವಕರಲ್ಲಿ ಧಾರ್ಮಿಕ ಶ್ರದ್ಧೆ ಕಡಿಮೆಯಾಗುತ್ತಿದ್ದು, ಇದರಿಂದ ಮನಶಾಂತಿ ಇಲ್ಲದೆ ಅತ್ಮಹತ್ಯೆಯಂತಹ ಘಟನೆಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿವೆ ಎಂದು ರಂಭಾಪುರಿ ಶ್ರೀವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅತಂಕ ವ್ಯಕ್ತಪಡಿಸಿದ್ದಾರೆ
ತಾಲೂಕಿನ ಅರೇಹಳ್ಳಿಯಲ್ಲಿ ಇತ್ತೀಚೆಗೆ ಶ್ರೀ ವೀರಭದ್ರೇಶ್ವರ ದೇವಾಲಯದ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಧಾರ್ಮಿಕ ಸಭೆಯಲ್ಲಿ ಆಶೀವರ್ಚನ ನೀಡಿದ ಅವರು, ಯುವಕರಲ್ಲಿ ಆತ್ಮಬಲ ಮೂಡಬೇಕಾದರೆ ಧಾರ್ಮಿಕ ಸಂಸ್ಕತಿಯನ್ನು ಪರಿಪಾಲಿಸಿದಾಗ ಮಾತ್ರ ಜೀವನದಲ್ಲಿ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಮನುಷ್ಯ ತನ್ನ ಬದುಕಿನಲ್ಲಿ ನಡೆ- ನುಡಿಗಳನ್ನು ಸತ್ಯವಾಗಿಸಿಕೊಂಡಾಗ ಮಾತ್ರ ಪರಿವರ್ತನೆಯಾಗಲು ಸಾಧ್ಯ ಎಂದರು.
ಸಮಾಜದಲ್ಲಿ ಮನುಷ್ಯ ಲೌಕಿಕ ಜೀವನದಲ್ಲಿ ಆರ್ಥಿಕವಾಗಿ, ಸದೃಢವಾಗಿದ್ದರೂ ಶಾಂತಿ ನೆಮ್ಮದಿ ಕಾಣದೆ ಕಂಗಾಲಾಗಿದ್ದಾನೆ ಆತ್ಮನೆಮ್ಮದಿಗಾಗಿ ಧಾರ್ಮಿಕ ಅನುಸರಣೆಯೊಂದೇ ಮಾರ್ಗ ಎಂದರು.
ಗುರುಪರಂಪರೆ ಅನುಕರಣೆ: ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಪೀಠಗಳ ಮೂಲ ಗುರುಗಳ ತತ್ವದ ಆಧಾರದಲ್ಲಿ ವೀರಶೈವಾಚರಣೆಯನ್ನು ಆಚರಿಸುತ್ತಾ ಬಂದಿದ್ದು ಜನಾಂಗದವರು ಇನ್ನು ಮುಂದೆ ಲಿಂಗ ಾಯಿತ ಎನ್ನುವ ಬದಲು ವೀರಶೈವರೆಂದು ಗುರುತಿಸಿಕೊಳ್ಳಬೇಕು ಎಂದರಲ್ಲದೇ ಶರಣರು ಸಹ ನಮ್ಮ ಗುರು ಪರಂಪರೆಯ ಮಾರ್ಗ ಅನುಸರಿಸಿದ್ದಾರೆ ಎಂದರು.
ಸಂಘಟಿತರಾಗಲು ಸಾಧ್ಯ: ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ವೀರಶೈವ ಸಮಾಜದಲ್ಲಿ ಅನೇಕ ಒಳ ಪಂಡಗಳಿಂದ ಒಡೆದು ಹೋಗಿದ್ದು, ಇಂಥಹ ಧಾರ್ಮಿಕ ಗುರುಗಳ ಮಾರ್ಗದರ್ಶನದಲ್ಲಿ ಈ ಪಂಗಡಗಳನ್ನು ಒಂದು ಗೂಡಿಸಿದಾಗ ಮಾತ್ರ ವೀರಶೈವರು ಸಂಘಟಿತರಾಗಲು ಸಾದ್ಯ ಎಂದರು.
ಧಾರ್ಮಿಕ ಸಭೆಯಲ್ಲಿ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಅರೇಹಳ್ಳಿ ಹೋಬಳಿ ವೀರಶೈವ ಸಂಘದ ಅಧ್ಯಕ್ಷ ಯು.ಎಂ. ತೇಜ್ಪಾಲ್, ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷ ಐಶಾಮಿಗೌಡ, ಜಿಪಂ ಸದಸ್ಯ ಅಮೀತ್ ಶೆಟ್ಟಿ, ಸಿ.ಡಿ. ಮೋಗಪ್ಪಗೌಡ, ಎ.ಜಿ. ಬಸವರಾಜು, ಎ.ಸಿ. ಸೋಮಶೇಖರಯ್ಯ, ಗುರಪ್ಪಗೌಡ, ಗ್ರಾಪಂ ಅಧ್ಯಕ್ಷ ನಾಗೇಶ್ ಶೆಟ್ಟಿ, ವಿಘ್ನೇಶ್, ಮಹಮ್ಮದ್ ಅಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

