ಐವರು ದರೋಡೆಕೋರರ ಬಂಧನ: ಆಭರಣ ವಶ
ಕ.ಪ್ರ.ವಾರ್ತೆ , ಹಾಸನ , ಫೆ. 6
ಗ್ರಾಮದಲ್ಲಿನ ಒಂಟಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಮನೆಯಲ್ಲಿದ್ದವರನ್ನು ಬೆದರಿಸಿ ಚಿನ್ನ ಹಾಗೂ ಹಣವನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಜಗದೀಶ, ನಂದೀಪ, ಯೋಗೇಶ, ಮಂಜು ಹಾಗೂ ಉಮೇಶ ಬಂಧಿತ ಆರೋಪಿಗಳು.
ದೂರು ದಾಖಲಾಗಿತ್ತು: ತಾಲೂಕಿನ ಹಳೇಕೋಟೆ ಹೋಬಳಿಗೆ ಸೇರಿದ ಕಬ್ಬಿನಹಳ್ಳಿ ಗ್ರಾಮದಲ್ಲಿನ ಏಕಾಂತ್ ಎಂಬುವವರ ಒಂಟಿ ಮನೆಗೆ ಕಳೆದ ಡಿ. 13ರಂದು ನುಗ್ಗಿದ ಆರು ಜನ ತಂಡವು ಮನೆಯಲ್ಲಿದ್ದ ಹೆಂಗಸರು ಮತ್ತು ಮಕ್ಕಳನ್ನು ಮಚ್ಚು ಮತ್ತು ಲಾಂಗುಗಳಿಂದ ಹೆದರಿಸಿ, ಡಕಾಯಿತಿ ಮಾಡಿ 90 ಗ್ರಾಂ. ಗಳಷ್ಟು ಚಿನ್ನದ ಚೈನು, ಬಳೆಗಳು, ಮಾಂಗಲ್ಯದ ಚೈನು ಮತ್ತು ಬೀರುವಿನಲ್ಲಿದ್ದ 5 ಸಾವಿರ ರು. ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಡಕಾಯಿತಿ ಪ್ರಕರಣವು ಇಲ್ಲಿನ ಅಪರಾಧ ವಿಭಾಗದಲ್ಲಿ ದೂರು ದಾಖಲಾಗಿತ್ತು.
ಐವರ ಬಂಧನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ಎ.ಎಸ್ಪಿ ಅವರ ನಿರ್ದೇಶನದಂತೆ ಹೊಳೆನರಸೀಪುರ ಉಪ- ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಪಾಟೀಲ್ ವಿನಾಯಕ್ ವಸಂತರಾವ್ ಅವರ ಮಾರ್ಗದರ್ಶನದಲ್ಲಿ, ಆರಕ್ಷಕ ವೃತ್ತ ನಿರೀಕ್ಷಕರಾದ ಎನ್.ಜಿ. ಕೃಷ್ಣಪ್ಪ ಹಾಗೂ ಅಪರಾಧ ವಿಭಾಗದ ಪಿಎಸ್ಸೈ ಸವಿ ಮತ್ತು ಸಿಬ್ಬಂದಿ ದರೋಡೆ ಕೃತ್ಯದಲ್ಲಿ ಪಾಲ್ಗೊಂಡಿದ್ದ ಆರು ಜನರಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು: ಡಕಾಯಿತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಂಡವನ್ನು ರಚಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಫೆ.4ರ ಮಂಗಳವಾರ ರಾತ್ರಿ ಸಮಯದಲ್ಲಿ ತಾಲೂಕಿನ ಹಂಗರಹಳ್ಳಿ ಬಳಿಯಲ್ಲಿನ ರೈಲ್ವೇ ಗೇಟಟ್ಬಳಿಯಲ್ಲಿ ಅನುಮಾನಾಸ್ಪದವಾಗಿ ಸಿಕ್ಕ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ದರೋಡೆ ಕೃತ್ಯ ಹೊರಬಿದ್ದಿದೆ.
ಬಂಧಿತರಿಂದ ಅಪರಾಧದ ಸಂದರ್ಭದಲ್ಲಿ ಕೃತ್ಯಕ್ಕೆ ಬಳಸಲಾಗಿದ್ದ ಆಟೋ, 3 ಮಚ್ಚುಗಳು, 2 ಲಾಂಗು ಹಾಗೂ ಒಂದು ಜೊತೆ 30 ಗ್ರಾಂ.ನ ಚಿನ್ನದ ಬಳೆಗಳನ್ನು ಇಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸಂಪತ್ತು ಎಂಬಾತನಿಗಾಗಿ ಶೋಧ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

