ಡಾಂಬರೀಕರಣ ವಿಳಂಬಕ್ಕೆ ಶಾಸಕ, ಡಿಸಿ ಆಕ್ರೋಶ
ಕ.ಪ್ರ.ವಾರ್ತೆ , ಹಾಸನ , ಫೆ. 6
ವಿಲ್ಲಿಪುರಂಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿ 234ರ ಬಾಣಾವಾರ ಮತ್ತು ಬೇಲೂರು ನಡುವಿನ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಭಾರೀ ವಿಳಂಬಕ್ಕೆ ಶಾಸಕ ವೈ.ಎನ್. ರುದ್ರೇಶಗೌಡ ಮತ್ತು ಜಿಲ್ಲಾಧಿಕಾರಿ ಅನ್ಬುಕುಮಾರ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಕುರಿತು ಕರೆಯಲಾದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನ್ಬುಕುಮಾರ್, ರಾಷ್ಟ್ರೀಯ ಪ್ರಾಧಿಕಾರದ ಸಹಾಯಕ ಅಭಿಯಂತರರನ್ನು ತೀವ್ರ ತರಾಟೆ ತೆಗೆದುಕೊಂಡರು.
'2 ವರ್ಷದಿಂದ ಕೆಲಸ ಪ್ರಗತಿಯಲ್ಲಿ ಇದ್ದರೂ, ಇನ್ನು ಕಾಮಾಗಾರಿ ಪೂರ್ಣಗೊಂಡಿಲ್ಲ, ಏನು ಮಾಡುತ್ತಿದ್ದೀರಿ?' ಎಂದು ಕೆರಳಿದ ಅವರು, ಕೇವಲ 12 ಮೀಟರ್ಗಳ ದೂರ ಕೆಲಸ ಮುಕ್ತಾಯ ಹಂತದಲ್ಲಿ ಇದ್ದು, ಇನ್ನು 34 ಕೀಮೀ ಕೆಲಸವಾಗಲು ಎಷ್ಟು ಕಾಲ ಬೇಕು ಎಂದು ಪ್ರಶ್ನಿಸಿದರು.ಇವರ ಮಾತಿಗೆ ಧ್ವನಿಗೊಡಿಸಿದ ಶಾಸಕ ವೈ.ಎನ್. ರುದ್ರೇಶಗೌಡ ಅವರು ಮೂರು ವರ್ಷವಾದರೂ ಕಾಮಾಗಾರಿ ಮುಕ್ತಾಯವಾಗುವ ಯಾವ ಲಕ್ಷಣವಿಲ್ಲ, ಬೇಲೂರು ಪಟ್ಟಣದ ಮುಖ್ಯ ರಸ್ತೆ ಮುಂದಿನ ದಿನಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಗಣವಾಗಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಹೇಳಿದರು.
ಮೀಸಲು ಜಾಗಕ್ಕೆ ಸೂಚನೆ: ಈ ಹಿಂದಿನ ಜಿಲ್ಲಾಧಿಕಾರಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಹಾಗೂ ಕೆಂಪು ಬಣ್ಣದಲ್ಲಿ ರಸ್ತೆಯ ಮದ್ಯೆ ಭಾಗದಲ್ಲಿ 15,05 ಮೀಟರ್ ಗುರುತಿಸಿದ್ದು, ಅಂತಯೇ ರಸ್ತೆ ಪಾದಚಾರಿಗಳಿಗೆ ಹಾಗೂ ವಾಹನ ನಿಲುಗಡೆಗೆ, ಯುಜಿಡಿ ಹಾಗೂ ನೀರಿನ ಪೈಪ್ ಲೈನ್, ಕೇಬಲ್ ಅಳವಡಿಕೆಗೆ ತಕ್ಕ ಜಾಗ ಮೀಸಲು ಬಿಟ್ಟು ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೊಳ್ಳಬೇಕೇ ವಿನಃ ಇದ್ಯಾವುದನ್ನೂ ಲೆಕ್ಕಿಸದೆ ಹೈವೇ ಪ್ರಾಧಿಕಾರ, ಇರುವ ಸ್ಥಳದಲ್ಲಿ ರಸ್ತೆಯ ಎರಡೂ ಬದಿಯ ಡಾಂಬರೀಕರಣ ಮಾಡಿದಲ್ಲಿ ಇಂದಿನ ವಾಹನ ದಟ್ಟಣೆಗೆ ರಸ್ತೆ ಕಿರಿದಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಸ್ಪಷ್ಟನೆ: ಹೈವೇ ಪ್ರಾಧಿಕಾರದ ಅಧಿಕಾರಿ ಅನಂತರಾಜ್ ಮಾತನಾಡಿ, ನಮಗೆ ಗುತ್ತಿಗೆದಾರರಿಂದ ಕಾಮಗಾರಿ ವಿಳಂಬವಾಗಿದೆ, ಕ್ರಷರ್ ಜಲ್ಲಿ ಮರಳಿನ ಸರಬಾರಾಜುನಲ್ಲಿ ತೊಂದರೆ ಇದೆ ಎಂದರು. ಮುಂದಿನ ಸೆಪ್ಟಂಬರ್ ಅಂತ್ಯದಲ್ಲಿ ಉಳಿದ ರಸ್ತೆ ಕೆಲಸ ಮುಕ್ತಾಯ ಮಾಡುವುದಾಗಿ ತಿಳಿಸಿದರು.
ಪರಿಹಾರಕ್ಕಾಗಿ ನೋಟಿಸ್: ಪ್ರವಾಸೋದ್ಯೋಮ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್. ಪ್ರಕಾಶ್ ಮಾತನಾಡಿ, ಶ್ರೀಚನ್ನಕೇಶವಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಖರೀದಿಸಿರುವ ಜಾಗದಲ್ಲಿರುವ 8 ಮನೆಗಳಿಗೆ ಸೂಕ್ತ ಪರಿಹಾರ ನೀಡಲು ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಸೌಕರ್ಯಗಳಿಗಾಗಿ ಸೂಚನೆ: ಜಿಲ್ಲಾಧಿಕಾರಿ ಅನ್ಬುಕುಮಾರ್ ಮಾತನಾಡಿ, ದೇವಾಲಯದ ಹಿಂಭಾಗದ ಪ್ರವಾಸೋದ್ಯೊಮ ಇಲಾಖೆ ಖರೀದಿ ಮಾಡಿದ ಸ್ಥಳದಲ್ಲಿ ಇರುವ ಪುರಾತನ ಕಟ್ಟಡಗಳನ್ನು ನೆಲಸಮ ಮಾಡಿ, ಆ ಸ್ಥಳದಲ್ಲಿ ವಾಹನ ನಿಲುಗಡೆ, ಶೌಚಾಲಯ, ಸ್ನಾನ ಗೃಹ, ಕುಡಿಯುವ ನೀರು ಪೂರೈಕೆ ಮುಂತಾದ ಸೌಲಭ್ಯಗಳನ್ನು ಕೈಗೊಳ್ಳಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಕಲೇಶಪುರ ವಿಭಾಗಾಧಿಕಾರಿ ಡಾ.ಮಧುಕೇಶ್ವರ್, ತಹಸೀಲ್ದಾರ್ ಬಿ.ಎನ್. ಜಗದೀಶ್, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

