ಹಾಸನ

ಬ್ಯಾಕ್‌ಲಾಕ್ ಹುದ್ದೆ ಭರ್ತಿಗೆ ದಸಂಸ ಆಗ್ರಹ

Published On :

ಸಕಲೇಶಪುರ: ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಬ್ಯಾಕ್‌ಲಾಕ್ ಹುದ್ದೆಗಳು ಖಾಲಿ ಇವೆ, ಹುದ್ದೆ ಭರ್ತಿ ಮಾಡಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್.ಎನ್. ಮಲ್ಲಪ್ಪ ಹೇಳಿದರು.
ಪಟ್ಟಣದ ಕುಶಾಲನಗರ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ತಾಲ್ಲೂಕು ಕಸಬಾ ಹೋಬಳಿ ಸಮಿತಿಯನ್ನು ಪುನರ್ರಚಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬ್ಯಾಕ್‌ಲಾಕ್ ಹುದ್ದೆ ಭರ್ತಿ ಮಾಡುತ್ತಿಲ್ಲ ಎಂದು ಹೇಳಿದರು.
ಸಮಾಜಿಕವಾಗಿ ಅಧೋಗತಿಗೆ: ಇಂದು ನಮ್ಮ ತಾಲ್ಲೂಕಿನಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಪದವಿ ಪಡೆದು ಸರ್ಕಾರಿ ಉದ್ಯೋಗ ಸಿಗದೇ ನಿರುದ್ಯೋಗಿಗಳಾಗಿ ಮತ್ತೆ ಕೂಲಿಯನ್ನೇ ಅವಲಂಬಿಸುವ ವ್ಯವಸ್ಥೆ ನಿರ್ಮಾಣವಾಗಿದೆ. ಸುಮಾರು ಕೇವಲ ರಾಜಕಾರಣಕ್ಕಾಗಿ ನಮ್ಮ ಯುವಜನತೆಯನ್ನು ಬಳಸಿಕೊಳ್ಳುತ್ತಿರುವುದು ದುರಂತವಾದರೂ 40 ರಿಂದ 50 ವರ್ಷಗಳೇ ಕಳೆದರೂ ದಲಿತರ ಭೂಮಿ ಸಮಸ್ಯೆ ಪರಿಹರಿಸಿಲ್ಲ. ನಾವು  ಸಂಘಟನೆಯ ಮೂಲಕ ಹೋರಾಟ ಮಾಡದಿದ್ದರೇ ನಮ್ಮ ಮುಂದಿನ ಪೀಳಿಗೆ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿ ಸಾಮಾಜಿಕವಾಗಿ ಅಧೋಗತಿಗೆ ತಲುಪುತ್ತದೆ ಎಂದು ಅವರು ಎಚ್ಚರಿಸಿದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಸಂಘಟನಾ ಸಂಚಾಲಕ ಕನಕರಾಜಜ್ವಹಿಸಿದ್ದರು. ಸಭೆಯಲ್ಲಿ ತಾಲೂಕು ಸಂಘಟನಾ ಸಂಚಾಲಕ ಎಸ್.ಬಿ. ನಿಂಗಪ್ಪ, ತಿಮ್ಮಯ್ಯ ಕೌಡಳ್ಳಿ, ಬಿ.ಪಿ. ಲಕ್ಷ್ಮಣ್ ಬನವಾಸೆ, ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ವಿರೂಪಾಕ್ಷ ಸತ್ತಿಗಲ್ ಇದ್ದರು.
ಪದಾಧಿಕಾರಿಗಳ ಆಯ್ಕೆ
ಕಸಬಾ ಹೋಬಳಿಯ ದಸಂಸ ಸಂಚಾಲಕರಾಗಿ ಪಾಪಣ್ಣ ಸತ್ತಿಗಲ್, ಸಂಘಟನ ಸಂಚಾಲಕರಾಗಿ ಹರೀಶ್ ಕೊಣ್ಣೂರು, ಕುಶಾಲ್ ಕೌಡಳ್ಳಿ, ಕುಮಾರ ಇಬಡಿಕೊಣ್ಣೂರು, ಸೋಮಶೇಖರ್ ಸತ್ತಿಗಲ್ ಮಂಜುನಾಥ್ ಕೌಡಳ್ಳಿ ಹಾಗೂ ಖಜಾಂಚಿಯಾಗಿ ಮಲ್ಲೇಶ್ ಅವರನ್ನು ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.