ಹಾಸನ

ಧರ್ಮ, ಜಾತಿ ಹೆಸರಲ್ಲಿ ದೇಶ ವಿಭಜನೆ

Published On :

ಕ.ಪ್ರ.ವಾರ್ತೆ ,  ಹಾಸನ ,  ಫೆ. 7
ಧರ್ಮ ಜಾತಿ ಹೆಸರಿನಲ್ಲಿ ದೇಶವನ್ನು ಹಾಳು ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನ ಎಚ್.ಡಿ. ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ಯುವ ಘಟಕದಿಂದ  ಶುಕ್ರವಾರ ಹಮ್ಮಿಕೊಂಡಿದ್ದ ಕಿಕ್ರೆಟ್ ಪಂದ್ಯಾವಳಿಯನ್ನು ಉದ್ಘಾಟಿಸಲು ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ರಾಜಕೀಯದಲ್ಲಿ ಜಾತಿ, ಧರ್ಮದ ಹೆಸರನ್ನು ಬಳಸಿಕೊಂಡು ಇನ್ನೊಬ್ಬರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ. ದೇವೇಗೌಡ ಲಿಂಗಾಯಿತ ವಿರೋಧಿ ಎಂದು  ರಾಜ್ಯದ ಎಲ್ಲಾ ಭಾಗದಗಲ್ಲಿ ಟಾಂ ಟಾಂ ಹೊಡೆದು ತಮ್ಮ ಮೇಲೆ ದ್ವೇಷ ಕಾರುವಂತೆ ಮಾಡಿದರು ಎಂದು ಹೇಳಿದರು.
ಪ್ರತಿಮೆ ಪ್ರತಿಷ್ಠಾಪನೆ: ಫೆ. 12ರಂದು ಬಿಜಾಪುರದಲ್ಲಿ ತಾವು ನೀರಾವರಿ ಮಂತ್ರಿಯಾಗಿದ್ದಾಗ ಅಲ್ಲಿನ ಮುಳುಗಡೆ ರೈತರ ಕಷ್ಟವನ್ನು ಬಹುತೇಕ ಪರಿಹರಿಸಿದ್ದ ಹಿಗಉಗಘಿಲೆಯಲ್ಲಿ ಅಲ್ಲಿನ ರೈತರು ತಮ್ಮ ಪ್ರತಿಮೆಯನ್ನು ಅನಾವರಣ ಮಾಡಲು ಕಾರ್ಯಕ್ರಮ ರೂಪಿಸಿದ್ದಾರೆ. ಬಹುತೇಕ ಲಿಂಗಾಯಿತ, ಹಾಗೂ ಕುರುಬ ಜನಾಂಗ ಇರುವ ಬಿಜಾಪುರ ಜಿಲ್ಲೆಯ ಜನತೆ ಒಕ್ಕಲಿಗ ಸಮುದಾಯದ ದೇವೇಗೌಡರ ಪ್ರತಿಮೆಯನ್ನು ಚಂದಾ ಹಣ ಎತ್ತಿ ಅನಾವರಣ ಮಾಡಲು ಮುಂದಾಗಿರುವುದು ತಮ್ಮ ನಿಸ್ವಾರ್ಥ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು.
ಬದಲಾವಣೆ ಗಾಳಿ: ದೇಶದ ಸಂಸತ್ ಚುನಾವಣೆಯಲ್ಲಿ ಮಹತ್ತರ ಬದಲಾವಣೆಯ ಗಾಳಿ ಬೀಸಲಿದ್ದು ಈ ಬಾರಿ ತೃತೀಯ ರಂಗ ಅಧಿಕಾರಕ್ಕೆ ಬರಲಿದೆ. ಪ್ರತಿ ರಾಜ್ಯದಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಸೆಟೆದು ನಿಲ್ಲುವ ಪಕ್ಷಗಳಿದ್ದು ಅದರಲ್ಲಿ ಸಮರ್ಥ ನಾಯಕರು ಇದ್ದಾರೆ. ಕಳೆದ ಎರಡು ದಿನದ ಹಿಂದೆಇತರೆ ರಾಜ್ಯದ ಪ್ರಮುಖ ಮುಖಂಡರು ಸಭೆ ಸೇರಿದ್ದು ಚುನಾವಣೆಯ ತಂತ್ರಗಾರಿಕೆ ಬಗ್ಗೆ ಒಂದು ಸುತ್ತಿನ ಮಾತು ಮುಗಿದಿದೆ ಎಂದರು.
ಪ್ರಧಾನಿ ಯಾರಾಗುತ್ತಾರೋ ಗೊತ್ತಿಲ್ಲ: ಎಲ್ಲಾ ರಾಜ್ಯದಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಮಾನ್ಯತೆ ಪಡೆದ ಪಕ್ಷಗಳಿವೆ. ದೇವೇಗೌಡ ಒಬ್ಬರೇ ತೃತೀಯ ರಂಗದ ನಾಯಕ ಎಂದು ಬಿಂಬಿಸುವುದು ಸೂಕ್ತವಲ್ಲ, ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್, ಮಾಯಾವತಿ, ಜಯಲಲಿತಾ, ಚಂದ್ರಬಾಬು ನಾಯ್ಡು, ಪಟ್ನಾಯಕ್ ಅವರಂತಹ ಹಲವಾರು ನಾಯಕರು ತಮ್ಮದೇ ಆದ ಛಾಪನ್ನು ಈ ರಾಜ್ಯಗಳಲ್ಲಿ ಮೂಡಿಸಿದ್ದಾರೆ. ಇವರಲ್ಲಿ ಯಾರು ಪ್ರಧಾನಿ ಆಗುತ್ತಾರೆ ಎಂದು ಈಗಲೇ ತೀರ್ಮಾನ ಕೈಗೊಳ್ಳುವುದು ಕಷ್ಟದ ಮಾತು ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಬೈಪಾಸ್ ನಿರ್ಮಿಸುವಂತೆ ತಾವು ಹೆದ್ದಾರಿ ಇಲಾಖೆಗೆ ಹಾಗೂ ಸಚಿವರಿಗೆ ಪತ್ರ ಬರೆದಿದ್ದು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಹಿಂದೆ, ತಾವು ಪ್ರಧಾನ ಮಂತ್ರಿಯಾಗಿದ್ದಾಗ ಬೆಂಗಳೂರು, ಶ್ರವಣಬಳಗೊಳ ಮಾರ್ಗವಾಗಿ ಹಾಸನ, ಬೇಲೂರು, ಚಿಕ್ಕಮಗಳೂರು, ಶೃಂಗೇರಿ ನಂತರ ಶಿವಮೊಗ್ಗಕ್ಕೆ ರೈಲು ಮಾರ್ಗದ ಸರ್ವೆ ಮಾಡಿಸಲಾಗಿತ್ತು. ಆದರೆ ತಾವು ಪ್ರಧಾನಿ ಹುದ್ದೆಯಿಂದ ಇಳಿದ ತಕ್ಷಣ ಯೋಜನೆ ನೆನೆಗುದಿಗೆ ಬಿತ್ತು. ಈಗಲೂ ತೃತೀಯ ರಂಗ ಅಧಿಕಾರಕ್ಕೆ ಬಂದರೆ ತಮ್ಮ ಮಾತಿಗೆ ತಾವು ಬದ್ಧರಾಗುತ್ತೇವೆ ಎಂದರು.  
ಜೆಡಿಎಸ್ ಜಿಲ್ಲಾಧ್ಯಕ್ಷ ರಾಜಶೇಖರ್, ತಾಲೂಕು ಅಧ್ಯಕ್ಷ ತೊ.ಚ ಅನಂತಸುಬ್ಬರಾಯ, ಮಾಜಿ ತಾಪಂ ಅಧ್ಯಕ್ಷ ಎಂ. ಎ. ನಾಗರಾಜ್, ಜಿ.ಪಂ. ಸದಸ್ಯ ಚಂದ್ರೇಗೌಡ, ಮಾಜಿ  ಜಿಪಂ ಸದಸ್ಯ ಪ್ರಕಾಶ್, ಮುಖಂಡ ನಟರಾಜ್ , ಮಹೇಶ್, ಶ್ರೀನಿಧಿ, ವಿಷ್ಣುಕುಮಾರ್, ಗಣೇಶ್, ಸಿದ್ದೇಗೌಡ, ಕಾಮಾಕ್ಷಿ ರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.