ಮಾ. 4ರಿಂದ ಮಹಾರುದ್ರ ಹೋಮ
ಅರಸೀಕೆರೆ: ಲೋಕಕಲ್ಯಾಣಾರ್ಥವಾಗಿ ಮಾ. 4ರಿಂದ ಮಾ. 10ರವರೆಗೆ 7 ದಿನಗಳ ಕಾಲ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ಮಾರುತಿ ಸಚ್ಚಿದಾನಂದ ಸೇವಾಶ್ರಮದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರದಲ್ಲಿ ಸತೀಶ್ ಶರ್ಮ ಗುರೂಜಿ ಅವರ ಮಾರ್ಗದರ್ಶನದಲ್ಲಿ ಮಹಾರುದ್ರಹೋಮ ನಡೆಸಲಾಗುವುದೆಂದು ಆಡಳಿತಾಧಿಕಾರಿ ಬಿ.ಎಸ್.ಸೇತುರಾಂ ಹಾಗೂ ಸಂಚಾಲಕ ಮುರಳಿ ಮಂದಾರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ: ಪ್ರಕೃತಿ ವಿಕೋಪದಿಂದಾಗಿ ಮಳೆ ಬಾರದೇ ಬರಗಾಲ ಪೀಡಿತವಾಗಿರುವ ಈ ಭಾಗದಲ್ಲಿ ಲೋಕ ಕಲ್ಯಾಣಾರ್ಥಕ್ಕಾಗಿ ಮತ್ತು ಸುವೃಷ್ಟಿ, ಸಸ್ಯ ಸಮೃದ್ಧಿ, ಮಾನವರಲ್ಲಿ ಸಧರ್ಮಾಚರಣೆ ಮತ್ತು ಮನಃಶಾಂತಿ, ಸಕಲ ರೋಗ ನಿರ್ಮೂಲನೆಗಾಗಿ ಸಂಕಲ್ಪಿಸಿ 7 ದಿನಗಳ ಕಾಲ ಶ್ರೀ ಮಹಾರುದ್ರ ಹೋಮ, ಶ್ರೀ ಲಕ್ಷ್ಮೀನರಸಿಂಹ ಮೂಲ ಮಂತ್ರ ಹೋಮ, ಮಹಾನ್ಯಾಸ ಪೂರ್ವಕ ಶ್ರೀರುದ್ರ ಪುನಶ್ಚರಣೆ, ಸಹಸ್ರ ಮೋದಕ ಗಣಪತಿ ಹೋಮ, ದತ್ತಾತ್ರೇಯ ಮೂಲ ಮಂತ್ರ ಹೋಮ, ನವಗ್ರಹ ಪುರಸ್ಸರ ಶನೀಶ್ವರ, ಆಂಜನೇಯ ಮೂಲ ಮಂತ್ರ ಹೋಮ, ಮನ್ಯುಸೂಕ್ತ ಹೋಮ, ಪ್ರತಿದಿನ ವಿಶೇಷ ಪೂಜಾದಿಗಳು ಸಂಜೆ, ಸತ್ಸಂಗ, ಭಜನೆ, ವಿಶೇಷ ಸಂಗೀತ ಕಾರ್ಯಕ್ರಮಗಳೊಂದಿಗೆ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳ ಪ್ರಧಾನ ಆಚಾರ್ಯತ್ವವನ್ನು ನಂಜನಗೂಡಿನ ಮುರಳೀಧರ ಶ್ರೀವತ್ಸ ಶರ್ಮ, ಸೋಮಸುಂದರ ಭಟ್ ಮತ್ತು ಬೆಂಗಳೂರಿನ ವೇದ ವಿದ್ವಾನ್ ಎ.ಕೆ. ವಿದ್ಯಾಶಂಕರ ಭಟ್ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರದ್ಧೆ, ಶ್ರಮದಿಂದ ಯಶಸ್ಸು ಸಾಧ್ಯ: ನಾಗರಾಜ ಉಡುಪ
ಅರಕಲಗೂಡು: ಯಾವುದೇ ಕೆಲಸದಲ್ಲಿ ನಾವು ತೋರುವ ಶ್ರದ್ಧೆ ಮತ್ತು ಶ್ರಮದಿಂದ ಯಶಸ್ಸು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ದೈರ್ಯದಿಂದ ಮುನ್ನಡೆಯು ಕೆಲಸ ಆಗಬೇಕಿದೆ ಎಂದು ಕಾರ್ಪೊರೇಷನ್ ಬ್ಯಾಂಕ್ನ ಡಿ.ಜಿ.ಎಂ. ನಾಗರಾಜ ಉಡುಪ ತಿಳಿಸಿದ್ದಾರೆ.
ಇಲ್ಲಿನ ಚೇತನ ಇಂಡಸ್ಟ್ರೀಸ್ನ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಯಾವುದೇ ಕೈಗಾರಿಕೆಯಾಗಲೀ, ಉದ್ಯಮವಾಗಲೀ ಜನರು ಇಂದು ಹೊಸತನವನ್ನು ಬಯಸುತ್ತಾರೆ. ಜನರ ಅಪೇಕ್ಷೆ ಮತ್ತು ಅಭಿರುಚಿಗೆ ತಕ್ಕಂತೆ ನಮ್ಮ ಉದ್ಯಮ ಮತ್ತು ಪದಾರ್ಥಗಳನ್ನು ನೀಡುವಂತಾಗಬೇಕು. ಆಗ ನಾವು ತಯಾರಿಸಿದ ವಸ್ತುಗಳು ಜನರ ಬಳಿಗೆ ತಲುಪಿಸಲು ಸುಲಭವಾಗುತ್ತದೆ ಎಂದರು.ಗ್ರಾಮೀಣ ಪ್ರದೇಶಗಳಿಂದ ಯುವ ಜನರು ನಗರ ಪ್ರದೇಶಗಳೆಡೆಗೆ ವಲಸೆ ಹೋಗುತ್ತಿದ್ದಾರೆ. ಆದರೆ, ಅಲ್ಲಿಯೂ ಇಂದು ಜೀವನ ನಡೆಸುವ ಬಗೆಗೆ ಪರದಾಡುವುದನ್ನು ನಾವು ಕಾಣುತ್ತೇವೆ. ವಲಸೆ ಹೋಗುವ ಬದಲು ಗ್ರಾಮೀಣ ಪ್ರದೇಶಗಳಲ್ಲೇ ಇದ್ದು ತಾವೂ ಸ್ವಯಂ ಉದ್ಯೋಗ ಆರಂಭಿಸುವ ಜೊತೆಗೆ ಇತರರಿಗೂ ಉದ್ಯೋಗ ಸೃಷ್ಟಿಸುವಂತಾಗಬೇಕು. ಇದು ದೇಶದ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿವೇದಿತಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸುಬ್ಬರಾವ್,ಉದ್ಯಮಿ ಪ್ರಕಾಶ್ ಮಾತನಾಡಿದರು. ಸಮಾರಂಭದಲ್ಲಿ ಮೀನಾಕ್ಷಿ ಪ್ರಕಾಶ್ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

