'ನಾನೆಂದೂ ಕುಟುಂಬ ರಾಜಕೀಯ ಮಾಡಿಲ್ಲ'
ಬೇಲೂರು: ನನ್ನ ರಾಜಕೀಯ ಜೀವನದಲ್ಲಿ ಎಂದೂ ಕುಟುಂಬ ರಾಜಕೀಯ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಯುವ ಜನತಾ ದಳ ಆಯೋಜಿಸಿದ್ದ ರಾಜ್ಯ ಮಟ್ಟದ ಆಹ್ವಾನಿತ ಎಚ್.ಡಿ. ದೇವೇಗೌಡ ಟೆನ್ನಿಸ್‌ಬಾಲ್ ಕ್ರಿಕೆಟಟ್ಪಂದ್ಯಾವಳಿ ಉದ್ಗಾಟಿಸಿ ಮಾತನಾಡಿದರು.
ಜಿಲ್ಲೆಯ ಜನತೆ ನನಗೆ ಗೆಲುವು ಮತ್ತು ಸೋಲನ್ನು ತೋರಿಸಿದ್ದಾರೆ, ನನ್ನ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಏಳು- ಬೀಳುಗಳನ್ನು ಕಂಡಿದ್ದು 18 ತಿಂಗಳು ಮುಖ್ಯಮಂತ್ರಿ, 10 ತಿಂಗಳು ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದು, ರೈತರ ಬಡವರ ಜನಪರ ಕಾರ್ಯಕ್ರಮಗಳನ್ನು ನೀಡಿರುವುದಾಗಿ ತಿಳಿಸಿದರು.
ಕ್ರೀಡಾ ಚುಟುವಟಿಕೆಗಳು ಮನುಷ್ಯ ಮಾನಸಿಕ ನೆಮ್ಮದಿಗೆ ಪೂರಕವಾಗಿದ್ದು ಸೋಲು- ಗೆಲುವನ್ನು ಕ್ರೀಡಾ ಪಟುಗಳು ಸಮಾನತೆಯಿಂದ ಸ್ವೀಕರಿಸಿದಾಗ ಮಾತ್ರ ಕ್ರೀಡಾ ಧರ್ಮವನ್ನು ಎತ್ತಿ ಹಿಡಿದಂತಾಗುತ್ತದೆ ಎಂದರು.
ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ಮಾತನಾಡಿ, ಕ್ರೀಡೆಯಲ್ಲಿ ಯುವಕರು ಎಷ್ಟೋ ವಿಸ್ವಾಶಸದಿಂದ ಪಾಲ್ಗೊಳ್ಳುತ್ತಿರೋ ಅದೇ ರೀತಿ ರಾಜಕೀಯದಲ್ಲೂ ಹೆಚ್ಚಾಗಿ ಭಾಗವಹಿಸಿ ತಮ್ಮ ರಾಜಕೀಯ ಹಿಚ್ಚಾಶಕ್ತಿಯನ್ನು ಪ್ರದರ್ಶಿಸಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ತಾಲ್ಲೂಕಿನಲ್ಲಿ ಸಂಘಟಿಸುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರನ್ನು ಹೆಚ್ಚು ಬಹುಮತದೊಂದಿಗೆ ಗೆಲ್ಲಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಾಜಶೇಖರ್, ತಾಲ್ಲೂಕು ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ, ಮುಖಂಡರಾದ ಎಂ.ಎ. ನಾಗರಾಜು, ಸಿ.ಎಸ್.ಪ್ರಕಾಶ್, ಬಿ.ಸಿ.ಮಂಜುನಾಥ್, ಸಿದ್ದೇಗೌಡ, ಬಿ.ಡಿ.ಚಂದ್ರೇಗೌಡ, ತಜುಮುಲ್ ಪಾಷ, ಗಂಗೇಶ್, ನಟರಾಜು, ಶಿವಪ್ಪಶೆಟ್ಟಿ, ಅಶ್ವತ್, ವಿಷ್ಣುಕುಮಾರ್, ಟಿ.ಎ. ಶ್ರೀನಿಧಿ, ಫಾರುಖ್, ರವಿಅಣ್ಣೇಗೌಡ, ಕರ್ಕಿಹಳ್ಳಿ ರಮೇಶ್, ಚಿದಾನಂದ್, ಚನ್ನಕೇಶವ, ಆಕ್ರಂ ಪಾಷ, ಜಯಣ್ಣ ಹಾಗೂ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

