'ಸುಲಭವಾಗಿ ದಾಖಲೆ ಲಭ್ಯವಾದರೆ ಜನರಿಗೆ ಅನುಕೂಲ'
ಚನ್ನರಾಯಪಟ್ಟಣ: ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಸುಲಭವಾಗಿ ದಾಖಲೆಗಳನ್ನು ಪಡೆಯುವಂತಹ ಪದ್ಧತಿಯನ್ನು ಅಳವಡಿಸಿದರೆ ಸಾಮಾನ್ಯ ಜನತೆ ತಮ್ಮ ಕೆಲಸಗಳನ್ನು ಬಿಟ್ಟು ಪ್ರತಿನಿತ್ಯ ತಾಲೂಕು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕಿನ ಕಂದಾಯ ಇಲಾಖೆಗೆ ಸಂಬಂದಿಸಿದ ದಾಖಲಾತಿಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿರುವ ಗಣಕೀಕೃತ ಅಭಿಲೇಖಾಲಯವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದಾಖಲೆಗಳನ್ನು ಕ್ರಮಬದ್ಧವಾಗಿ ಶೇಖರಿಸಿರುವ ಗಣಕೀಕೃತ ಅಭಿಲೇಖಾಲಯದಲ್ಲಿನ ದಾಖಲಾತಿ ಜೋಡಣೆ ಬಗ್ಗೆ ಸಂಪೂರ್ಣ ವಿವರ ಪಡೆದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು ಹಾಗೂ ಸಿಬ್ಬಂದಿಯನ್ನು ಪ್ರಶಂಸಿದರು.
ಆನಂತರ, ಮಾಜಿ ಪ್ರಧಾನಿ ತಾಲೂಕಿನ ರೈತರು ಹಾಗೂ ಇತರರ ಆಸ್ತಿಯ ಎಲ್ಲಾ ದಾಖಲಾತಿಗಳನ್ನು ಕಂಪ್ಯೂಟರ್‌ನ ಸಹಾಯದೊಂದಿಗೆ ಎಲ್ಲಾ ಮೂಲ ದಾಖಲೆಗಳನ್ನು ಕ್ರಮಬದ್ಧವಾಗಿ ಶೇಖರಿಸಿರುವ ಗಣಕೀಕೃತ ಅಭಿಲೇಖಾಲಯ ಕೊಠಡಿಯನ್ನು ಉದ್ಘಾಟಿಸಿದರು.
ಭ್ರಷ್ಟತೆ ತಡೆಯಬಹುದು: ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವ ತಹಸೀಲ್ದಾರ್ ಡಾ. ಎಚ್.ಎಲ್. ನಾಗರಾಜು ಅವರ ಆಡಳಿತ ವೈಖರಿಯನ್ನು ಪ್ರಶಂಸಿಸಿ ಇಂತಹ ಅಧಿಕಾರಿಗಳು ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದು, ಇವರ ದಾರಿಯಲ್ಲಿಯೇ ಸರ್ಕಾರಿ ಅಧಿಕಾರಿಗಳು ಪಾಲನೆ ಮಾಡಿದರೆ ಭ್ರಷ್ಟತೆಯನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು. ಮಿನಿ ವಿಧಾನ ಸೌಧದ ಮೊದಲ ಅಂತಸ್ತಿನಲ್ಲಿರುವ ಕಟ್ಟಡಕ್ಕೆ 80ರ ದಶಕದ ದೇವೇಗೌಡ ಅವರು ಮೆಟ್ಟಲತ್ತಿ ನಡೆಯಲು ಮುಂದಾದರಾದರೂ ಅವರ ಅನುಯಾಯಿಗಳು ಹೆಗಲು ನೀಡಿ ಅವರನ್ನು ಸುಲಭವಾಗಿ ಕರೆದೊಯ್ಯಲು ಮುಂದಾದರು.
ಶಾಸಕ ಸಿ.ಎನ್. ಬಾಲಕೃಷ್ಣ, ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು, ಗ್ರೇಡ್ ಬಿ ತಹಸೀಲ್ದಾರ್ ಸೋಮಶೇಖರ್, ಪುರಸಭಾ ಸದಸ್ಯ ಶಶಿಧರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

