ಶಾಲಾ ಶಿಕ್ಷಕರ ಬಡ್ತಿ ಪಟ್ಟಿ ಪ್ರಕಟ
ಹಾಸನ: 2013-14ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ವೃಂದಕ್ಕೆ ಬಡ್ತಿಯನ್ನು ನೀಡುವ ಬಗ್ಗೆ ಈಗಾಗಲೇ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಫೆ. 6ರಂದು ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಫೆ. 11ರಂದು ಉಪನಿರ್ದೇಶಕರ ಕಚೇರಿಯಲ್ಲಿ ಬೆಳಿಗ್ಗೆ 11 ಕ್ಕೆ ಕೌನ್ಸಿಲಿಂಗ್ ನಡೆಯಲಿದ್ದು, ಅರ್ಹ ಶಿಕ್ಷಕರು ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಆರ್. ಬಸವರಾಜ ತಿಳಿಸಿದ್ದಾರೆ.
ಬಿಜೆಪಿ ಗ್ರಾಮಾಂತರ ಮಂಡಲ ಸಭೆ
ಹಾಸನ: ಹಾಸನ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಾಸನ ನಗರ ಮಂಡಲ ಹಾಗೂ ಗ್ರಾಮಂತರ ಮಂಡಲದ ಕಾರ್ಯಕಾರಿಣಿ ಸಭೆಯನ್ನು ಏರ್ಪಡಿಲಾಗಿತ್ತು. ಸಭೆಯ ಮುಖ್ಯ ಅತಿಧಿಯಾಗಿ ಮೈಸೂರು ಮೃಗಾಲಯದ ಮಾಜಿ ಅಧ್ಯಕ್ಷ ನಂಜುಡಸ್ವಾಮಿ, ರಾಜ್ಯಕಾರ್ಯಕಾರಿಣಿ ಸದಸ್ಯ ಎಂ.ಎಸ್. ಕೃಷ್ಣೇಗೌಜ, ನಗರ ಅಧ್ಯಕ್ಷ ಶ್ರೀನಿವಾಸ್. ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ತಮ್ಲಾಪುರ ಕೃಷ್ಣೇಗೌಡ ಇದ್ದರು.
ನಮೋ ಬ್ರಿಗೇಡ್ ಬೈಕ್ ರ್ಯಾಲಿ
ಅರಸೀಕೆರೆ: ಪಟ್ಟಣದ ನಾನಾ ಬಡಾವಣೆಗಳಲ್ಲಿ ನಮೋ ಬ್ರಿಗೇಡ್ ಕಾರ್ಯಕರ್ತರು ಬೈಕ್‌ರ್ಯಾಲಿ ನಡೆಸುವುದರ ಮೂಲಕ ತಾಲೂಕು ನೂತನ ಘಟಕಕ್ಕೆ ಶನಿವಾರ ಚಾಲನೆ ನೀಡಿದರು.
ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿತವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬೆಂಬಲಿತ ನಮೋ ಬ್ರಿಗೇಡ್ ಸಂಘಟನೆಯು ವಿದ್ಯುಕ್ತವಾಗಿ ಪಟ್ಟಣದ ಕರಿಯಮ್ಮ ದೇವಾಲಯದಲ್ಲಿ ವೇದಿಕೆ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಖ್ಯಾತ ವಾಗ್ಮಿ ನಿಕೇತ್ ರಾಜ್ ಮಾತನಾಡಿದರು. ಜೆ.ಜೆ. ಟ್ಯೂಟೋರಿಯಲ್‌ನ ನಾರಾಯಣ ಶರ್ಮ, ನಮೋ ಬ್ರಿಗೇಡ್ ತಾಲೂಕು ಸಂಚಾಲಕ ಕೆಂಪುಸಾಗರ ಶಿವರಾಜ್ ಕುಮಾರ್ ಇದ್ದರು.
ಮುಖಂಡರಾದ ರವಿಕುಮಾರ್, ಮಹೇಶ್ ಪರ್ಲೇಹಳ್ಳಿ, ಧನಂಜಯ್ ಕುಮಾರ್, ಪ್ರಜ್ವಲ್ ಕಶ್ಯಪ್, ಟಿ.ವಿ ಅರುಣ ಕುಮಾರ್, ನಾಗರಾಜ್ ಹೆಬ್ಬಾರ್, ಜಿ.ಪಂ ಸದಸ್ಯ ಕೃಷ್ಣನಾಯ್ಕ, ಬಿಜೆಪಿ ತಾ.ಅಧ್ಯಕ್ಷ ಹರಳಕಟ್ಟ ರಮೇಶ್, ಮುಖಂಡರಾದ ಎನ್.ಡಿ ಪ್ರಸಾದ್, ವೈ.ಕೆ .ದೇವರಾಜ್, ಬೋರನಕೊಪ್ಪಲು ರವಿ, ಮನೋಜ್ ಕುಮಾರ್, ಸಂಜೆ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಇದಕ್ಕೂ ಮುನ್ನ ನಮೋ ಬ್ರಿಗೇಡ್ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ಬಸ್ ಅಡ್ಡಗಟ್ಟಿದ ಒಂಟಿ ಸಲಗ
ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಪುರಬೈರವನಹಳ್ಳಿ ಗ್ರಾಮದಲ್ಲಿ ಸಾರಿಗೆ ಬಸ್ಸೊಂದನ್ನು ಒಂಟಿ ಸಲಗ ಅಡ್ಡಗಟ್ಟಿದ ಘಟನೆ ಶನಿವಾರ ನಡೆದಿದೆ.
ಆದರೆ, ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿ ಇದ್ದವರ ಹಾಗೂ ಸಿಬ್ಬಂದಿಯ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಮಗ್ಗೆಯಿಂದ ಪುರಭೈರವನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ಸಾರಿಗೆ ಬಸ್‌ಗೆ ಪುರಭೈರವನಹಳ್ಳಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾದ ಒಂಟಿಸಲಗ ರಸ್ತೆಯಿಂದ ಕದಲದೇ ಭೀತಿ ಉಂಟು ಮಾಡಿತು.
ಥಟ್ಟನೇ ಪ್ರತ್ಯಕ್ಷವಾದ ಆನೆಯನ್ನು ಕಂಡ ಕೂಡಲೇ ಚಾಕಚಕ್ಯತೆಯಿಂದ ಬಸ್ ನಿಲ್ಲಿಸಿದ ಚಾಲಕ, ಆನೆ ನಿಧಾನವಾಗಿ ರಸ್ತೆ ದಾಟುವವರೆಗೂ ಸುಮ್ಮನಿದ್ದು, ಆನಂತರ ಬಸ್ ಚಾಲನೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

