ಸಂಭಾಜಿ ಗಡೀಪಾರಿಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಹಾಸನ, ಫೆ. 8
ಅಕ್ರಮವಾಗಿ ಫಾಪಾರ್ಮ್ಹೌಸ್ನಲ್ಲಿ ಜೂಜಾಡಿಸುತ್ತಿದ್ದ ಎಂಇಎಸ್ ಶಾಸಕ ಸಂಬಾಜಿ ರಾವ್ ಪಾಟೀಲ್ ಅವರನ್ನು ಗಡೀಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ಶಾಸಕನ ಪ್ರತಿಕೃತಿ ದಹಿಸಿ ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಎನ್.ಆರ್. ವೃತ್ತದಲ್ಲಿ ರಸ್ತೆ ತಡೆ ನಡೆಸಿ ಸಂಬಾಜಿ ರಾವ್ ಪಾಟೀಲ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಆಕ್ರೋಶ: ಎಂಇಎಸ್ ಶಾಸಕ ಸಂಬಾಜಿ ರಾವ್ ಪಾಟೀಲ್ರನ್ನ ಪಾರ್ಮ್ ಹೌಸ್ನಲ್ಲಿ ಅಕ್ರಮವಾಗಿ ಜೂಜಾಟವನ್ನು ನಡೆಸುವ ಮೂಲಕ ಜನಪ್ರತಿನಿಧಿಗಳಿಗೆ ಕಳಂಕವನ್ನು ತಂದಿದ್ದಾರೆ. ಜೂಜಾಡಿಸುವ ಮೂಲಕ ಸಮಾಜವನ್ನು ಕೆಟ್ಟ ಹಾದಿಗೆ ದೂಡುವ ಮೂಲಕ ಸಮಾಜ ವಿರೋಧಿ ಕೆಲಸದಲ್ಲಿ ತೊಡಗಿದ್ದಾನೆ. ಸಮಾಜವನ್ನು ತಿದ್ದಬೇಕಾದಂತಹ ಒಬ್ಬ ಜನಪ್ರತಿನಿಧಿ ಈ ರೀತಿ ಸಮಾಜದವನ್ನು ಅಡ್ಡದಾರಿಗೆ ನೂಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇರಬಾರದು: ರಾಜ್ಯದ ಜನತೆಯ ಮತವನ್ನು ಪಡೆದು ಶಾಸಕನಾಗಿ ಆಯ್ಕೆಯಾಗಿರುವ ಸಂಭಾಜಿ ರಾವ್ ಪಾಟೀಲ್ ಕೆಲ ದಿನಗಳ ಹಿಂದಷ್ಟೇ ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುವ ಬದಲು ಮರಾಠಿಯಲ್ಲಿ ಮಾತನಾಡುವಂತಹ ಮೂಲಕ ಕನ್ನಡ ವಿರೋಧಿತನವನ್ನು ತೋರಿದ್ದಾರೆ. ಜೊತೆಗೆ ತಾವು ನಾಲ್ಕು ಮಂದಿ ಶಾಸಕರು ಇದ್ದಿದ್ದರೆ ಸರ್ಕಾರ ರಾಜ್ಯಸರ್ಕಾರದ ಶವಯಾತ್ರೆಯನ್ನು ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಕನ್ನಡ ನಾಡಿನಲ್ಲಿ ಇದ್ದುಕೊಂಡು ಒಬ್ಬ ಶಾಸಕನಾಗಿ ಈ ನಾಡಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವಂತಹ ಎಂಇಎಸ್ ಶಾಸಕನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಅವರ ಶಾಸಕತ್ವವನ್ನು ರದ್ದುಪಡಿಸಬೇಕು. ಈತ ಶಾಸಕನಾಗಲು ಅಕ್ರಮವಾಗಿ ತಮ್ಮ ಪಾರ್ಮ್ಹೌಸ್ನಲ್ಲಿ ಜೂಜಾಟವನ್ನು ನಡೆಸಿ ಹಣವನ್ನು ಸಂಪಾದಿಸಿ ಶಾಸಕನಾಗಿದ್ದಾನೆ. ಇಂತಹ ಜನಪ್ರತಿನಿಧಿ ರಾಜ್ಯದಲ್ಲಿ ಇರಬಾರದು ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಈ ಕೂಡಲೇ ಈ ಎಂಇಎಸ್ನ ಶಾಸಕನ ಶಾಸಕತ್ವವನ್ನು ರದ್ದು ಪಡಿಸಬೇಕು. ಇಲ್ಲವಾದಲ್ಲಿ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಮನು ಕುಮಾರ್, ಲೋಕೇಶ್, ಕುಮಾರ್, ವಸಂತ್ ಕುಮಾರ್, ಗಿರೀಶ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

