ಹಾಸನ

ಪುರಸಭೆ ಅರ್ಜಿ ವಜಾ

Published On :

ಹೊಳೆನರಸೀಪುರ: ಪಟ್ಟಣದಲ್ಲಿನ ಬಸ್ ನಿಲ್ದಾಣ ಮತ್ತು ರೇಲ್ವೆ ನಿಲ್ದಾಣಗಳ ಮದ್ಯದಲ್ಲಿ ಹರಾಜಿನಲ್ಲಿ ಮಾರಾಟ ಮಾಡಲಾಗಿದ್ದ 70 ನಿವೇಶನಗಳನ್ನು ಮಿನಿ ವಿಧಾನಸೌಧ ಮತ್ತು ಮಾರುಕಟ್ಟೆಯ ನಿರ್ಮಾಣದ ಹೆಸರಿನಲ್ಲಿ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿದ್ದ ಪುರಸಭೆಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ನಿವೇಶನದಾರರ ಅರ್ಜಿಯನ್ನು ಪುರಸ್ಕರಿಸಿರುವುದಾಗಿ ನಿವೇಶನದಾರರೂ ಆಗಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ  ಎಸ್.ಎಚ್. ಮೋಹನ್ ಕುಮಾರ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಬಸ್ ನಿಲ್ದಾಣದ ಮುಂಬಾಗದಲ್ಲಿನ ಸುಮಾರು 70 ನಿವೇಶಗಳ ಪೈಕಿ 35 ನಿವೇಶನಗಳನ್ನು ಮಿನಿ ವಿಧಾನಸೌಧ ಕಟ್ಟಡಕ್ಕಾಗಿಯೂ ಇನ್ನುಳಿದ 35ನಿವೇಶನಗಳನ್ನು ಮಾರುಕಟ್ಟೆ ನಿರ್ಮಿಸುವುದಾಗಿ ಇಲ್ಲಿನ ಪುರಸಭೆಯು 2007ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿದ್ದರು. ಆದರೆ ಸದರಿ ಕ್ರಮವನ್ನು ನಿವೇಶನದ ಮಾಲೀಕರು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಸದರಿ ಕ್ರಮವನ್ನು ನ್ಯಾಯಾಲಯವು 2009ರಲ್ಲಿ ತಳ್ಳಿಹಾಕಿತ್ತು ಎಂದು ತಿಳಿಸಿದರು. ಆದರೆ, ನಿವೇಶನದ ಮಾಲೀಕರು ಸದರಿ ನಿವೇಶನಗಳಲ್ಲಿ ಮನೆ ಕಟ್ಟಲು ತಯಾರಿ ನಡೆಸಿದ್ದರಿಂದ ಪುರಸಭೆಯವರು ನಿವೇಶನದ ಮಾಲೀಕರಿಗೆ ಮನೆ ಕಟ್ಟಲು ಪರವಾನಗಿ ಕೊಡುವುದರ ಬದಲಿಗೆ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬೆದರಿಕೆಯ ಸೂಚನಾ ಪತ್ರವನ್ನು 2011ರ ಡಿ.15ರಂದು ನೀಡಿದ್ದರು ಎಂದು ಮಾಹಿತಿ ನೀಡಿದ ವಕೀಲ ಮೋಹನ್ ಕುಮಾರ್ ಅವರು, ಈ ಹಿನ್ನೆಲೆಯಲ್ಲಿ, ನಿವೇಶನದಾರರು ಮರಳಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ನಡುವೆ ಇಲ್ಲಿನ ಪುರಸಭೆಯವರು 2012ರಲ್ಲಿ ಭೂಸ್ವಾಧೀನ ಕ್ರಮವನ್ನು ಜರುಗಿಸಿ 6(1) ಅಧಿಸೂಚನೆ ಹೊರಡಿಸಿದ್ದರು. ಸದರಿ ಪುರಸಭೆಯ ಕ್ರಮವನ್ನು ಪುನ- ಭೂಮಾಲೀಕರುಗಳು ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 49229.12ರಲ್ಲಿ ಪುರಸಭೆಯ ಕ್ರಮವನ್ನು ಪ್ರಶ್ನಿಸಿದ್ದರು. ನಂತರದಲ್ಲಿ ಈ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯವು ನಿವೇಶನದಾರರ ಅರ್ಜಿಯನ್ನು ಪುರಸ್ಕರಿಸಿ ಫೆ.4, 2012ರಂದು ನಿವೇಶನದಾರರ ಪರವಾಗಿ ಆದೇಶ ನೀಡಿರುವುದಾಗಿ ಮೋಹನ್ ಕುಮಾರ್ ತಿಳಿಸಿದರು. ಈ ಸಂದರ್ಭದಲ್ಲಿ ನಿವೇಶನದಾರರಾದ ಕೆ.ಜೆ. ನಂಜೇಗೌಡ, ಸ್ವಾಮಿಗೌಡ, ರತನ್ ಕುಮಾರ್, ರಾಧಾಕೃಷ್ಣಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.