ವೃದ್ಧಾಶ್ರಮ ಸಂಸ್ಕ ೃತಿ ವಿಷಾದನೀಯ: ಶೃಂಗೇರಿ ಶ್ರೀ
ಹಾಸನ: ವಯಸ್ಸಾದವರನ್ನು ವೃದ್ಧಾಶ್ರಮಕ್ಕೆ ಸೇರುವಂತಹ ಪ್ರವೃತ್ತಿಯನ್ನು ಇತ್ತೀಚೆಗೆ ಬೆಳೆಸಿಕೊಂಡಿರುವುದು ವಿಷಾದನೀಯ ಎಂದು ದಕ್ಷಿಣಾಮಾನಾಯ ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾ ಸ್ವಾಮೀಜಿ ಹೇಳಿದರು.
ತಾಲೂಕಿನ ಶಾಂತಿಗ್ರಾಮ ಹೋಬಳಿಯ ಮುತ್ತಿಗೆ ಹಿರೇಹಳ್ಳಿ ಗ್ರಾಮದಲ್ಲಿ ಮುಕ್ಕಣೇಶ್ವರ, ಚೆನ್ನಾಂಬಿಕ, ದೊಡ್ಡಮ್ಮ, ಚಿಕ್ಕಮ್ಮ ಹಾಗೂ ಪರಿವಾರ ದೇವರ ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮಗಳನ್ನು ಸೋಮವಾರ ನೆರವೇರಿಸಿದ ಅವರು, ಆನಂತರ ಆಶೀರ್ವಚನ ನೀಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದರು. ನೂತನವಾಗಿ ನಿರ್ಮಿಸಿರುವ ಮುಕ್ಕಣೇಶ್ವರ, ಚೆನ್ನಾಂಬಿಕ, ದೊಡ್ಡಮ್ಮು, ಚಿಕ್ಕಮ್ಮ ಹಾಗೂ ಪರಿವಾರ ದೇವತೆಗಳಾದ ವಿಘ್ನೇಶ್ವರ, ಮಾರಮ್ಮ, ದುರ್ಗಮ್ಮ ಮತ್ತು ಭೈರವೇಶ್ವರ ದೇವರ ದೇವಾಲಯದ ಬ್ರಹ್ಮ ಕುಂಭಾಭಿಷೇಕ ಮಹೋತ್ಸವವನ್ನು ಸ್ವಾಮೀಜಿ ನಡೆಸಿಕೊಟ್ಟರು.
ಬೇಸರದ ಸಂಗತಿ: ನಂತರ ಶ್ರೀಭಾರತೀತೀರ್ಥ ಮಹಾಸ್ವಾಮಿಜಿ ಮಾತನಾಡಿ, ತಂದೆ, ತಾಯಿ ಹಾಗೂ ಗುರು ಈ ಮೂವರನ್ನು ದೇವರಂತೆ ಕಾಣಬೇಕು. ಯಾವುದೇ ವ್ಯಕ್ತಿ ಜೀವನದಲ್ಲಿ ಎಷ್ಟೇ ಮುಂದೆ ಬಂದರು ಅದಕ್ಕೆ ಈಮೂವರೇ ಕಾರಣರು. ಕೆಲವರು ಉನ್ನತ ಸ್ಥಾನಕ್ಕೆ ಹೋದ ನಂತರ ತಂದೆ- ತಾಯಿಯರನ್ನು ಮರೆತು ಬಿಡುತ್ತಾರೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಂದೆ- ತಾಯಿಗಳು ಅಕ್ಕರೆಯಿಂದ ತಮ್ಮ ಮಕ್ಕಳನ್ನು ಬೆಳೆಸುತ್ತಾರೆ. ಆದರೆ, ಕೆಲವರು ಅವರ ಕೈಬಿಡುತ್ತಾರೆ. ಆದರೆ ಎಚ್.ಡಿ. ರೇವಣ್ಣ ಅವರು ತಮ್ಮ ತಂದೆ- ತಾಯಿ ಮೇಲೆ ಇರುವ ಪ್ರೀತಿಯಿಂದಾಗಿ ಇಬ್ಬರ ಊರಿನಲ್ಲಿ ದೇವಾಲಯಗಳನ್ನು ಶಾಶ್ತ್ರೋಕ್ತವಾಗಿ ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಅದಕ್ಕಾಗಿ ಅವರಿಗೆ ರಾಜಕೀಯದಲ್ಲಿ ನಾನಾ ಉನ್ನತನ ಸ್ಥಾನಗಳು ಸಿಕ್ಕಿದೆ. ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ದೇಶದಲ್ಲಿ ತಂದೆ, ತಾಯಿಗೆ ಗೌರವ ನೀಡಬೇಕು ಎಂದು ಆರ್ಶೀವಚನ ನೀಡಿದರು. ಶಾಶ್ತ್ರೋಕ್ತವಾಗಿ ಪ್ರತಿಷ್ಠಾನೆಗೊಳ್ಳುವಂತಹ ದೇವಾಲಯದಲ್ಲಿ ದೇವರು ಹೆಚ್ಚು ಶಕ್ತಿವಂತನಾಗಿರುತ್ತಾರೆ. ಎಲ್ಲಿ ಶಾಶ್ತ್ರೋಕ್ತವಾಗಿ ದೇವಾಲಯ ನಿರ್ಮಾಣ ನಡೆಯುವುದಿಲ್ಲವೋ ಅಲ್ಲಿ ದೇವರು ನೆಲೆಸುವುದಿಲ್ಲ ಎಂದರು.
ಶೃಂಗೇರಿ ಮಠ ಧರ್ಮಕ್ಕೆ ಸೀಮಿತ: ಶೃಂಗೇರಿ ಮಠ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಅದು ಧರ್ಮಕ್ಕೆ ಮಾತ್ರ ಸೀಮಿತವಾಗಿದೆ. ನಾನು ಸಹ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಮುಂದಾಗದೆ ಧರ್ಮಕ್ಕೆ ಮಾತ್ರ ಸೀಮಿತವಾಗಿರುವುದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ಶಾಸಕ ಬಿ.ವಿ. ಕರೀಗೌಡ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಸೇರಿದಂತೆ ಜಿಲ್ಲಾಡಳಿತದ ನಾನಾ ಇಲಾಖೆಯ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚನ್ನಮ್ಮ ದೇವೇಗೌಡ, ಶಾಸಕ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

