ತೆಂಗು, ಆಲೂಗಡ್ಡೆ, ಶುಂಠಿ ಬೆಳೆಗಾರರ ಕಡೆಗಣನೆ
ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯ ತೆಂಗು, ಆಲೂಗಡ್ಡೆ
ಹಾಗೂ ಶುಂಠಿ ಬೆಳೆದಿರುವ ರೈತರನ್ನು ಕಡೆಗಣಿಸಿವೆ ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಹೆಚ್. ಯೋಗಾರವುಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯಾಗಿದೆ. ತೆಂಗು ಬೆಳೆಗಾರರ ಬಗ್ಗೆ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸುವಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಕಡೆಗಣಿಸಿದೆ ಎಂದು ಟೀಕಿಸಿದರು.
ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ತೆಂಗು ಪಾರ್ಕ್ ಆರಂಭಿಸಿರುವಂತೆ ಜಿಲ್ಲೆಯಲ್ಲೂ ಪಾರ್ಕ್ ಸ್ಥಾಪಿಸಬೇಕಿತ್ತು. ಸರ್ಕಾರದ ತಾರತಮ್ಯ ನೀತಿಯಿಂದ ಜಿಲ್ಲೆಯ ತೆಂಗು ಬೆಳೆಗಾರರಿಗೆ ಅನ್ಯಾಯವಾಗಿದೆ ಎಂದು ಅವರು ದೂರಿದರು.
ಸ್ಪೈ ಸ್ ಪಾರ್ಕ್ ಸ್ಥಾಪಿಸಿ: ವಾಣಿಜ್ಯ ಬೆಳೆಗಳಾದ ಶುಂಠಿ, ಮೆಣಸು, ಏಲಕ್ಕಿ ಬೆಳೆಗಳಿಗೆ ಸ್ಪೈಸ್ ಪಾರ್ಕ್ ಸ್ಥಾಪಿಸುವ ಅಗತ್ಯವಿದೆ ಮತ್ತು ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆಗಳಲ್ಲಿ ರೈತರಿಗೆ ಶುಂಠಿ ಬೀಜ ಲಭ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಆಗ್ರಹ: ಶುಂಠಿ ಬೆಳೆಯಲು ಇತರೆ ರಾಜ್ಯದವರಿಗೆ ಗುತ್ತಿಗೆ ಜಮೀನನ್ನು ರೈತರು ನೀಡುತ್ತಿದ್ದು, ಅನಧಿಕೃತ ಕಂಪನಿ ಔಷಧಿಗಳನ್ನು ಸಿಂಪಡಿಸಿ ಭೂಮಿ ಮತ್ತು ಜಲವನ್ನು ಹಾಳುಮಾಡಗಿದೆ. ಬಾಡಿಗೆ ಕೊಡುವುದನ್ನು ತಪ್ಪಿಸಿ, ರೈತರೇ ಕೃಷಿ ಮಾಡುವಂತೆ ಮನವೊಲಿಸುವ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕು. ಶುಂಠಿ, ಏಲಕ್ಕಿ, ಮೆಣಸು ಬೆಳೆ ಹಾಸನ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೂ ರೋಗ ಹಾಗೂ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ಇಲ್ಲದೆ ಇರುವುದರಿಂದ ಬೆಳೆಗಳು ನಷ್ಟ ಅನುಭವಿಸುತ್ತಿದೆ. ಕೂಡಲೇ ಸ್ಥಾಪಿಸುವಂತೆ ಅವುಗಳನ್ನು ಸ್ಥಾಪಿಸುವಂತೆ ಆಗ್ರಹಿಸಿದರು.
ದೃಢೀಕೃತ ಬೀಜ ನೀಡಿ: ಆಲೂಗಡ್ಡೆಯು ಜಿಲ್ಲೆಯ ಪ್ರಮುಖ ಬೆಳೆ ಪ್ರಮುಖ ಬೆಳೆಯಾಗಿದೆ. ಅಂಗಮಾರಿ ರೋಗ ಹಾಗೂ ಉತ್ತಮ ಬೀಜ ದೊರೆಯದೆ ನಿರಂತರವಾಗಿ ರೈತರು ಅಲೂ ಬೆಳೆಯಲ್ಲಿ ನಷ್ಟ ಅನುಭವಿಸಲಾಗುತ್ತಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಆಲೂಗಡ್ಡೆ ಮಂಡಳಿ ಸ್ಥಾಪನೆ ಮಾಡಿ, ದೃಢೀಕೃತ ಬೀಜವನ್ನು ಪಂಜಾಬಿನಿಂದ ತರಿಸಿ ಉಚಿತವಾಗಿ ಬರುವಂತೆ ಕ್ರಮ ಜರುಗಿಸಲಿ. ಶಾಶ್ವತವಾಗಿ ಆಲೂಗಡ್ಡೆ ವಿಜ್ಞಾನಿಗಳನ್ನು ಜಿಲ್ಲೆಯಲ್ಲಿ ನೇಮಿಸಬೇಕು ಎಂದು ಆಗ್ರಹಿಸಿದರು.
ಪೊಟ್ಯಾಟೊ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಂ.ಟಿ. ಸತ್ಯನಾರಾಯಣ್, ಮುಖಂಡರಾದ ನಾಗೇಶ್, ಲೋಕೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

