ಗದ್ದಲ, ಗಲಾಟೆ ನಡುವೆ ಬಜೆಟ್
ಕ.ಪ್ರ. ವಾರ್ತೆ ಅರಸೀಕೆರೆ ಫೆ. 15
ಪಟ್ಟಣದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದ್ದ ಶನಿವಾರ ನಡೆದ ಇಲ್ಲಿನ ಪುರಸಭೆ ಸಾಮನ್ಯ ಸಭೆ ಜೆಡಿಎಸ್, ಕಾಂಗ್ರೆಸ್ ಸದಸ್ಯರ ಪರಸ್ಪರ ಕೆಸರೆರಚಾಟದಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣಲಿಲ್ಲ.
ಶಾಸಕ ಕೆ.ಎಂ. ಶಿವಲಿಂಗೇಗೌಡರ ಮಾತಿನ ವಿರುದ್ದ ಸಿಡಿದೆದ್ದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಿದ ಪ್ರಸಂಗ ಪ್ರಥಮ ಬಾರಿಗೆ ನಡೆದಿದ್ದು, ಈ ಎಲ್ಲದರ ನಡುವೆ 59.39 ಲಕ್ಷ ಉಳಿತಾಯ ಬಜೆಟನ್ನು ಪುರಸಭಾಧ್ಯಕ್ಷ ಮೋಹನ್ ಕುಮಾರ್ ಮಂಡಿಸಿ ಅನುಮೋದನೆ ಪಡೆದರು.
ಮಾತಿನ ಚಕಮಕಿ: ಪುರಸಭಾಧ್ಯಕ್ಷ ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಪಕ್ಷೇತರ ಸದ್ಸಯ ಬಿ.ಎನ್. ವಿದ್ಯಾಧರ್ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ಎದುರಾಗಿದ್ದು, ಸಮಸ್ಯೆ ಪರಿಹಾರಕ್ಕೆ ಸಂಬಂದಿಸಿದಂತೆ ಕೇಳಿದ ಪ್ರಶ್ನೆಗೆ ಇಡೀ ಸಭೆಯಲ್ಲಿ ಅಸಮಾಧಾನದ ಗೂಡಾಯಿತು.
ಮುಂದುವರೆದ ಅವರು, ಪ್ರತಿ ತಿಂಗಳು ಸಬೇ ಕರೆದು ನಾಗರಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರ್ಯಾಯ ಮಾರ್ಗೋಪಾಯವನ್ನು ಕಂಡುಕೊಳ್ಳುವುದಾಗಿ ಬರವಸೆ ನೀಡಿದ್ದ ಪುರಸಭಾಧ್ಯಕ್ಷರು ಮಾತಿಗೆ ತಪ್ಪಿ ನಡೆಯುತ್ತಿದ್ದಾರೆ. ಪಟ್ಟಣದ ಜನರ ದಾಹ ತೀರಿಸಬೇಕಾಗಿದ್ದ ಹೇಮಾವತಿ ನೀರು ಕೇವಲ ಮಾರುತಿ ನಗರಕ್ಕೆ ಮಾತ್ರ ಸೀಮಿತವಾಗಿದೆ ಎಂಬ ವಿದ್ಯದಾಧರ್ ಅವರ ಆರೋಪಕ್ಕೆ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿದ್ದರು. ಇದರಿಂದ ಸಭೆಯಲ್ಲಿ ಆರೋಪ ಪ್ರತ್ಯಾರೋಪ ಮಾತಿನ ಚಕಮುಕಿ ನಡೆದು ಸಭೆ ಗೊಂದಲ ಉಂಟಾಯಿತು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷರ ನೆರವಿಗೆ ಧಾವಿಸಲು ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ ಮುಂದಾಗುತ್ತಿದ್ದಂತೆ ನಾಮನಿರ್ದೇಶಿತ ಸದಸ್ಯರಾದ ಉಮಾಶಂಕರ್, ಅಬ್ದುಲ್ ಜಮೀಲ್, ತೀವ್ರ ವಿರೋದ ವ್ಯಕ್ತಪಡಿಸಿ ಪುರಸಭಾಧ್ಯಕ್ಷರ ಅಧಿಕಾರವನ್ನು ಮುಟುಕುಗೊಳಿಸಿ ಸರ್ವಾಧಿಕಾರಿ ಧೋರಣೆ ತೊರುತ್ತಿದ್ದಾರೆಂದು ಆರೋಪಿಸಿದರು.
ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿತ್ತು. ಈ ನಡುವೆ ಮಧ್ಯಪ್ರವೇಶಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಭೆ ಕರೆಯದಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರಲ್ಲದೆ ಮುಂದೆ ವ್ಯತ್ಯಾಸಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸುವುದಾಗಿ ಭರವಸೆ ನೀಡಿದರೂ ಸಹ ಕಾಂಗ್ರೆಸ್ ಸದಸ್ಯರು ಮಾತಿನ ಚಕಮುಕಿ ಮುಂದುವರೆದಿತ್ತು.
ಸಭಾತ್ಯಾಗ: ಸದಸ್ಯರ ಅದಿಕಾರ ಮಟುಕುಗೊಳಿಸಿ ಪ್ರಶ್ನೆ ಕೇಳಲು ಅವಕಾಶ ನೀಡದೆ ನಮ್ಮ ಮಾತಿಗೆ ಮನ್ನಣೆ ನೀಡದೆ ಇರುವ ಸಭೆಯಲ್ಲಿ ಭಾಗವಹಿಸುವ ಅವಶ್ಯಕತೆಯಿಲ್ಲ. ನೀವುಗಳೇ ಸಭೆ ನಡೆಸಿ ಎಂದು ಧಿಕ್ಕಾರ ಕೂಗಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು.
ಬಜೆಟ್ ಮಂಡನೆ: ನಂತರ ಪುರಸಭಾಧ್ಯಕ್ಷ ಮೋಹನ್ ಕುಮಾರ್ 2014-15ನೇ ಸಾಲಿನ ಆಯವ್ಯಯವನ್ನು ಮಂಡಿಸಿ 49 ಕೋಟಿ 39 ಲಕ್ಷದ 79 ಸಾವಿರ ರು., ಆದಾಯ, 48 ಕೋಟಿ 80 ಲಕ್ಷದ 45ಸಾವಿರ ವ್ಯಯ, 59.39 ಲಕ್ಷ ಉಳಿತಾಯ ಬಜೆಟನ್ನು ಮಂಡಿಸಿದರು. ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ, ಉಪಾಧ್ಯಕ್ಷೆ ಭಾಗ್ಯಲತಾ ಮಂಜು, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

