ರು. 25.27 ಕೋಟಿ ನಿರೀಕ್ಷಿತ ಆದಾಯ
ಚನ್ನರಾಯಪಟ್ಟಣ: ಪಟ್ಟಣದ ಪುರಸಭೆಯ 2014-15ನೇ ಸಾಲಿನ 8.61ಲಕ್ಷ ರು.ಗಳ ಉಳಿತಾಯ ಬಜೆಟ್ ಅನ್ನು ಪುರಸಭೆಯ ಅಧ್ಯಕ್ಷ ಮಂಜಣ್ಣ ಮಂಡಿಸಿದರು.
2014-15ನೇ ಸಾಲಿನಲ್ಲಿ 25.27 ಕೋಟಿ ನಿರೀಕ್ಷಿತ ಆದಾಯವನ್ನು ಮುಂದಿಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸಲು ಆಯವ್ಯಯ ಮಂಡಿಸಿದ್ದು, ಅಭಿವೃದ್ಧಿಗಾಗಿ ಪುರಸಭೆಗೆ ಬರುವ ಕಟ್ಟಡ ಬಾಡಿಗೆ, ತೆರಿಗೆ ಹಾಗೂ ಇತರೆ ಮೂಲಗಳಿಂದ ಆದಾಯ ನಿರೀಕ್ಷೆ ಮಾಡಲಾಗಿದೆ.
ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಮತ್ತು ಮುಂಗಡ ಠೇವಣಿಯಿಂದ ಆದಾಯ ನಿರೀಕ್ಷೆ ಮಾಡಲಾಗಿದ್ದು, ವಾಣಿಜ್ಯ ಮಳಿಗೆಗಳ ಬಾಡಿಗೆ ಹಾಗೂ ಮುಂಗಡ ಹಣ ನಿಗದಿಯಾದ ನಂತರದಲ್ಲಿ ಬಂದ ಹಣವನ್ನು ನಗರದ ಸೌಂದರ್ಯೀಕರಣ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದು ಎಂದು ಅಧ್ಯಕ್ಷ ಮಂಜಣ್ಣ ತಿಳಿಸಿದರು.
ನೌಕರರ ವೇತನಕ್ಕಾಗಿ 1.9 ಕೋಟಿ ರು., ಎಸ್ಎಫ್ಸಿಯಿಂದ 3 ಕೋಟಿ ರು., 13ನೇ ಹಣಕಾಸು ಯೋಜನೆಯಿಂದ 1.40 ಕೋಟಿ ರು., ಸಿಎಂಎಸ್ಎಂಟಿಡಿಪಿ ಯೋಜನೆಯಿಂದ 5 ಕೋಟಿ ರು. ಸೇರಿದಂತೆ 13.5 ಕೋಟಿ ರು. ಸರ್ಕಾರದಿಂದ ಆದಾಯ ನಿರೀಕ್ಷೆ ಮಾಡಲಾಗಿದೆ.
25 ಕೋಟಿ ಆದಾಯ ನಿರೀಕ್ಷೆ:ಪುರಸಭೆ ವತಿಯಿಂದ 1.3 ಕೋಟಿ ರು., ಕಟ್ಟಡ ಬಾಡಿಗೆಯಿಂದ 80 ಲಕ್ಷ ರು., ನಲ್ಲಿ ನೀರಿನಿಂದ 40 ಲಕ್ಷ ರು., ಮಾರುಕಟ್ಟೆ ಸುಂಕದಿಂದ 5 ಲಕ್ಷ ರು., ಅಭಿವೃದ್ಧಿ ಶುಲ್ಕದಿಂದ 10 ಲಕ್ಷ ರು., ಕಟ್ಟಡ ಪರವಾನಗಿಗಳಿಂದ 4 ಲಕ್ಷ ರು., ಉಧ್ಯಮ ಪರವಾನಗಿಗಳಿಂದ 8 ಲಕ್ಷ ರು., ಆಸ್ತಿ ತೆರಿಗೆಯಿಂದ ಬಡ್ಡಿ 14.5 ಲಕ್ಷ ರು., ನಲ್ಲಿ ನೀರಿನ ಸಂಪರ್ಕದಿಂದ 5 ಲಕ್ಷ ರು., ಸೇರಿದಂತೆ ಇತರೆ ಮೂಲಗಳಿಂದ 11.77 ಲಕ್ಷ ರು., ಸೇರಿದಂತೆ 25.27 ಕೋಟಿ ರು.ಆದಾಯ ನಿರೀಕ್ಷೆ ಮಾಡಲಾಗಿದೆ.
ಹೊಸ ರಸ್ತೆ ನಿರ್ಮಾಣಕ್ಕಾಗಿ 2.6 ಕೋಟಿ ರು. ಚರಂಡಿ ನಿರ್ಮಾಣಕ್ಕಾಗಿ 1.4 ಕೋಟಿ ರು., ಕಟ್ಟಡ ದುರಸ್ತಿಗಾಗಿ 8 ಲಕ್ಷ ರು., ಕುಡಿಯುವ ನೀರಿನ ಅಭಿವೃದ್ಧಿಗಾಗಿ 45 ಲಕ್ಷ ರು., ತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ 38 ಲಕ್ಷ ರು., ಬೀದಿ ದೀಪ ಅಳವಡಿಸಲು 20 ಲಕ್ಷ ರು., ವಿದ್ಯುತ್ ಶುಲ್ಕ ಪಾವತಿಗಾಗಿ 1.8 ಕೋಟಿ ರು., ಸ್ವಚ್ಛತೆಗಾಗಿ 50 ಲಕ್ಷ ರು., ನೀರು ಸರಬರಾಜಿಗಾಗಿ 25 ಲಕ್ಷ, ವಿದ್ಯುತ್ ನಿರ್ವಹಣೆಗಾಗಿ 18 ಲಕ್ಷ ರು., ನೀರು ಸರಬರಾಜು ನಿರ್ವಹಣೆಗೆ 50 ಲಕ್ಷ ರು., ವಾಹನಗಳ ನಿರ್ವಹಣೆಗೆ 4 ಲಕ್ಷ ರು., ಪರಿಶಿಷ್ಟ ಜಾತಿ ಮತ್ತು ವರ್ಗಗಳ ಶ್ರಯೋಭಿವೃದ್ಧಿಗಾಗಿ 80 ಲಕ್ಷ ರು., ಸಮುದಾಯ ಅಭಿವೃದ್ಧಿಗಾಗಿ 36 ಲಕ್ಷ ರು., ನೌಕರರ ವೇತನಕ್ಕಾಗಿ 1.87 ಕೋಟಿ ರು., ಭೂ ಅರ್ಜನೆ 30 ಲಕ್ಷ ರು., ನೀರು ಸರಬರಾಜು ಸಂಬಂದಿಸಿದ ಯಂತ್ರೋಪಕರಣಗಳ ನಿರ್ವಹಣೆಗಾಗಿ 50 ಲಕ್ಷ ರು., ಒಳ ಚರಂಡಿ ದುರಸ್ತಿಗಾಗಿ 25 ಲಕ್ಷ ರು., ಉದ್ಯಾನವನ ನಿರ್ವಹಣೆಗಾಗಿ 15 ಲಕ್ಷ ರು., ವಾಹನಗಳ ಖರೀದಿಗಾಗಿ 35 ಲಕ್ಷ ರು., ನೀರು ಸರಬರಾಜು ಸಾಮಾಗ್ರಿಗಳ ಖರೀದಿಗಾಗಿ ಹಾಗೂ ಪೈಪ್ಲೈನ್ ದುರಸ್ತಿಗಾಗಿ 25 ಲಕ್ಷ ರು., ಸ್ವಾಗತ ನಾಮಪಲಕ ಮತ್ತು ಇತರೆ ನಾಮಪಲಕಗಳ ಅಳವಡಿಕೆಗಾಗಿ 25 ಲಕ್ಷ ರು., ಆರೋಗ್ಯಕರ ಬಿಕ್ಷುಕರ ಕರ ಗ್ರಂಥಾಲಯ ಕರ 26.5 ಲಕ್ಷ ರು., ಆಶ್ರಯ ಯೋಜನೆಯಡಿ ಅಭಿವೃದ್ಧಿಗಾಗಿ 60 ಲಕ್ಷ ರು.ಗಳು ಸೇರಿದಂತೆ ಇತರೆ ಖರ್ಚಿಗಾಗಿ 10.23 ಲಕ್ಷ ರು.ಗಳನ್ನು ವೆಚ್ಚ ಮಾಡಲು ನಿರೀಕ್ಷೆ ಮಾಡಲಾಗಿದೆ.
ಬಜೆಟ್ ಮಂಡನೆ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಪುರಸಭಾಧ್ಯಕ್ಷ ಮಂಜಣ್ಣ ಅವರು ಉತ್ತಮ ಬಜೆಟ್ ಮಂಡಿಸಿದ್ದು, ಪಟ್ಟಣದ ಅಭಿವೃದ್ಧಿ ಹಾಗೂ ಸೌಂದರ್ಯೀಕರಣಕ್ಕಾಗಿ ತಮ್ಮ ಶಾಸಕರ ಅಭಿವೃದ್ಧಿ ನಿಧಿಯಿಂದ ಹಣ ನೀಡಲಾಗುವುದು ಎಂದು ತಿಳಿಸಿದರು.
ಪುರಸಭೆಯಿಂದ ಈಜುಕೊಳ ನಿರ್ಮಾಣ, ಹಾಗೂ ಕೇಂದ್ರ ಸರ್ಕಾರದಿಂದ ಅಭಿವೃದ್ಧಿಗಾಗಿ 32 ಕೋಟಿ ರು. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಯೋಜನೆ ತಯಾರಿಸಿ ಮನವಿ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಅನುದಾನ ಸದ್ಯದಲ್ಲಿಯೇ ಸಿಗಲಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜೆ. ಸುರೇಶ್ ಮುಖ್ಯಾಧಿಕಾರಿ ಚಂದ್ರಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

