ಹಾಸನ

ತುರ್ತು ಚಿಕಿತ್ಸಾ ವಿಭಾಗದ ಎದುರು ನಿಲ್ಲಿಸುವ ವಾಹನಗಳಿಗೆ ಲಾಕ್, ದಂಡ

Published On :

ಆಲೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹೊರ ಊರುಗಳಿಗೆ  ಹೋಗುವ ಹಾಗೂ ಹೊರ ಊರುಗಳಲ್ಲಿ ಕೆಲಸಗಳಲ್ಲಿರುವವರು ತಮ್ಮ ದ್ವಿಚಕ್ರ  ವಾಹನಗಳನ್ನು ನಿಲ್ಲಿಸಿ ಬಹಳ ತೊಂದರೆಯುಂಟಾಗುತ್ತಿತ್ತು. ಇದನ್ನು ತಪ್ಪಿಸಲು  ಪೊಲೀಸರು ವಾಹನಗಳಿಗೆ ಲಾಕ್ ಮಾಡುತ್ತಿದ್ದು, 100 ರು. ದಂಡ ವಿಧಿಸುತ್ತಿದ್ದಾರೆ.
ಇವರು ಯಾವ ರೀತಿ ವಾಹನ  ನಿಲ್ಲಿಸುತ್ತಿದ್ದರೆಂದರೆ ಹೆರಿಗೆ ಹಾಗೂ ಅಪಘಾತದಂತಹ ಘಟನೆಗಳಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿದ್ದು ಅಂಬ್ಯುಲೆನ್ಸ್‌ನಲ್ಲಿ ಬರುವ ಗಾಯಾಳುಗಳನ್ನು ಆಸ್ಪತ್ರೆಯ ಹೊರಗೆ ನಿಲ್ಲಿಸಿಕೊಂಡು ಆವರಣದಲ್ಲಿ ನಿಲ್ಲಿಸಿರುವ ವಾಹನವನ್ನು ತೆರವುಗೊಳಿಸಿದ ನಂತರ ಗಾಯಾಳುಗಳಿಗೆ ಚಿಕಿತ್ಸೆ ನೀಡಬೇಕಾಗುತ್ತಿತ್ತು. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ರೋಸಿಹೋಗಿದ್ದರು.
ಈಗ ಈ ಸಮಸ್ಯೆಯನ್ನು ನಿವಾರಿಸಲು ಪಟ್ಟಣದ ಪೊಲೀಸರು ಕಳೆದೆರಡು ದಿನಗಳಿಂದ  ಆಸ್ಪತ್ರೆಯ ಆವರಣದಲ್ಲಿ ರೋಗಿಗಳನ್ನು ಕರೆತರುವ ಅಥವಾ ರೋಗಿಗಳ ಭೇಟಿಗೆ  ಬರುವ ವಾಹನಗಳನ್ನು ಹೊರತುಪಡಿಸಿ ಬೇರೆಯವರು ಪಾರ್ಕ್ ಮಾಡುವ ವಾಹನಗಳನ್ನು ಲಾಕ್ ಮಾಡುತ್ತಿದ್ದು, ಹೀಗೆ ಲಾಕ್ ಮಾಡಲಾದ ವಾಹನಗಳಿಗೆ ತಲಾ 100 ರು. ದಂಡ ವಸೂಲಿ ಮಾಡಿ ರಸೀದಿ ನೀಡುತ್ತಿದ್ದಾರೆ.
ಇನ್ನೂ ಕೆಲ ಪ್ರಮುಖ ಸಮಸ್ಯೆಗಳಿವೆ. ಅವನ್ನೂ ಆಸ್ಪತ್ರೆ ಸಿಬ್ಬಂದಿ ಬಗೆಹರಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳನ್ನು ನೋಡಲು ಬರುವ ರೋಗಿಗಳ ಸಂಬಂಧಿಕರು, ರೋಗಿಗಳಿಗೆ ತಿನ್ನಿಸಲು ತರುವ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದನ್ನು ನಿರ್ಬಧಿಸಿಸಬೇಕು ಹಾಗೂ ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡಲು ಗಮನ ನೀಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.