ಹಾಸನ

15,23,224 ಮತದಾರರು

Published On :

ಹಾಸನ: ಚುನಾವಣಾ ಆಯೋಗದ ನಿರ್ದೇಶನದಂತೆ, ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ಸಂಕ್ಷಿಪ್ತ ಸ್ವರೂಪದ ವಿಶೇಷ ಪರಿಷ್ಕರಣೆಯಂತೆ ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ  ಒಟ್ಟು 13,39,906 ಮತದಾರರು ಇದ್ದಾರೆ. ಆದರೆ, ಹಾಸನ ಲೋಕಸಭಾ ಕ್ಷೇತ್ರಕ್ಕೆ  ಕಡೂರು ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಒಟ್ಟು 15,23,524 ಮಂದಿ ಮತದಾರರು ಇದ್ದಾರೆ.
ಒಟ್ಟು ಮತದಾರರಲ್ಲಿ (ಕಡೂರು ಕ್ಷೇತ್ರವೂ ಸೇರಿದಂತೆ) ಪುರುಷರು- 770769, ಮಹಿಳೆಯರು - 752680, ಇತರೆ - 75 ಮಂದಿ ಇದ್ದಾರೆ. ಅರಸೀಕೆರೆ ಕ್ಷೇತ್ರದಲ್ಲಿ ಹೆಚ್ಚು ಮತದಾರರು ಇದ್ದು, ಇಲ್ಲಿಯೇ ಇತರರು ಹೆಚ್ಚಾಗಿದ್ದಾರೆ. ಹಾಸನ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆ ಮತದಾರರು ಹೆಚ್ಚಿದ್ದಾರೆ.
ಕ್ಷೇತ್ರವಾರು ವಿವರ ಹೀಗಿದೆ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ-   ಪುರುಷರು - 96305, ಮಹಿಳೆಯರು - 95675, ಇತರೆ -9 ಮಂದಿ ಸೇರಿದಂತೆ ಒಟ್ಟು 1,91,989  ಮತದಾರರು ಇದ್ದಾರೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರ: ಪುರುಷರು-1 ,00,133, ಮಹಿಳೆಯರು - 99, 893, ಇತರೆ - 19 ಮಂದಿ. ಒಟ್ಟು 2,00,045 ಮತದಾರರು.
ಬೇಲೂರು ವಿಧಾನಸಭಾ ಕ್ಷೇತ್ರ:  ಪುರುಷರು - 90,296, ಮಹಿಳೆಯರು - 86,750,  ಇತರೆ - 5 ಮಂದಿ. ಒಟ್ಟು 1,77,051 ಮತದಾರರು.
ಹಾಸನ ವಿಧಾನಸಭಾ ಕ್ಷೇತ್ರ: ಪುರುಷರು -94,346, ಮಹಿಳೆಯರು - 94,460, ಇತರೆ - 16 ಮಂದಿ. ಒಟ್ಟು 1,88,822 ಮತದಾರರು..
ಹೊಳೆನರಸೀಪುರ ಕ್ಷೇತ್ರ: ಪುರುಷರು - 1,00,627,  ಮಹಿಳೆಯರು -98440, ಇತರೆ- 6 ಮಂದಿ. 1,99,073  ಮತದಾರರು ಇದ್ದಾರೆ.
ಅರಕಲಗೂಡು ವಿಧಾನಸಭಾ ಕ್ಷೇತ್ರ:  ಪುರುಷರು -1,03,408, ಮಹಿಳೆಯರು -96, 386, ಇತರೆ -10. 1,99,804  ಮತದಾರರು..
ಸಕಲೇಶಪುರ ವಿಧಾನಸಭಾ ಕ್ಷೇತ್ರ:  ಪುರುಷರು -91,805, ಮಹಿಳೆಯರು -91,313, ಇತರೆ -4 . ಒಟ್ಟು1,83,122 ಮತದಾರರು..
ಕಡೂರು ವಿಧಾನಸಭಾ ಕ್ಷೇತ್ರ:  ಪುರುಷರು -93, 849, ಮಹಿಳೆಯರು -89,763, ಇತರೆ -ಣ6 ಮಂದಿ. ಒಟ್ಟು 1,83,618 ಮತದಾರರು ಇದ್ದಾರೆ.
ವಿವರ ಲಭ್ಯ: ಮತದಾರರ ಪಟ್ಟಿಗಳ ಪರಿಷ್ಕರಣೆಯು ನಿರಂತರವಾಗಿದ್ದು, ಅರ್ಹ ಮತದಾರರು ಸೇರ್ಪಡೆಗಾಗಿ ನಮೂನೆ-6, ಅನರ್ಹ ಮತ, ವಾಸವಿಲ್ಲದ, ಮತದಾರರ ನಮೂದನ್ನು ಕೈಬಿಡಲು ನಮೂನೆ-7, ತಮ್ಮ ನಮೂದುಗಳ ವಿವರಗಳ ತಿದ್ದುಪಡಿಗಾಗಿ ನಮೂನೆ-8 ಮತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳ, ಮತಗಟ್ಟೆ ಬದಲಾವಣೆಯಾದಲ್ಲಿ ನಮೂನೆ-8ಎ ಅನ್ನು ನೀಡಬಹುದಾಗಿದೆ. ಈ ಅರ್ಜಿಗಳನ್ನು ಆನ್‌ಲೈನ್‌ನಲ್ಲಿಯೂ ಜ್ಛ್ಝ.ಟ್ಝ್ಛಿ.್ಝಟಿ  ಸಲ್ಲಿಸಬಹುದಾಗಿದೆ. ಮತದಾರರ ವಿವರಗಳನ್ನು ಜ್ಛ್ಝ.ಟ್ಝ್ಛಿ.್ಝಟಿ ಛಟಿಜ ್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿ ಢಿಜಛಿಡ್ಝಡಿಜ ನಲ್ಲಿ ನೋಡಬಹುದಾಗಿದೆ.
ಜಿಲ್ಲೆಯ 8 ತಾಲ್ಲೂಕು ಕಚೇರಿ, 2 ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ಈ ಕಚೇರಿಯ ಈ ಕೆಳಕಂಡ ದೂರವಾಣಿಗಳಿಗೆ ಕರೆ ಮಾಡಿ ವಿವರಗಳನ್ನು ಪಡೆಯಬಹುದಲ್ಲದೇ, ಲಿಖಿತ ದೂರು ಸಲ್ಲಿಸಬಹುದು ಎಂದು ಡಿಸಿ ತಿಳಿಸಿದ್ದಾರೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು
ಜಿಲ್ಲಾಧಿಕಾರಿಗಳ ಕಚೇರಿ, ಹಾಸನ     08172-265028
ಉಪವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ    08172-268403
ಉಪವಿಭಾಗಾಧಿಕಾರಿಗಳು, ಸಕಲೇಶಪುರ ಉಪವಿಭಾಗ    0 8173-244003
ತಾಲ್ಲೂಕು ಕಚೇರಿ, ಆಲೂರು    08170-218422
ತಾಲ್ಲೂಕು ಕಚೇರಿ, ಅರಕಲಗೂಡು    08175-221736
ತಾಲ್ಲೂಕು ಕಚೇರಿ, ಅರಸೀಕೆರೆ    08174-234879
ತಾಲ್ಲೂಕು ಕಚೇರಿ, ಬೇಲೂರು    08177-230800
ತಾಲ್ಲೂಕು ಕಚೇರಿ, ಚನ್ನರಾಯಪಟ್ಟಣ    08176-252314
ತಾಲ್ಲೂಕು ಕಚೇರಿ, ಹಾಸನ    08172-260395
ತಾಲ್ಲೂಕು ಕಚೇರಿ, ಹೊಳೆನರಸೀಪುರ    08175-272111
ತಾಲ್ಲೂಕು ಕಚೇರಿ, ಸಕಲೇಶಪುರ    08173-243012

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.