ಕಾಡಾನೆಗಳ ದಾಳಿಗೆ ಅಪರಿಚಿತ ವ್ಯಕ್ತಿ ಬಲಿ
ಸಕಲೇಶಪುರ: ಅಪರಿಚಿತ ವ್ಯಕ್ತಿಯೊಬ್ಬನನ್ನು ಕಾಡಾನೆ ತುಳಿದು ಸಾಯಿಸಿರುವ ಘಟನೆ ಭಾನುವಾರ ತಾಲೂಕಿ ಕೆ. ಮಂಚಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ವೆಂಕಟರಾಮೇಗೌಡ ಎಂಬುವವರ ಪಾಳುಬಿದ್ದ ಕಾಫಿ ತೋಟದಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಭಾನುವಾರ ದನಗಾಯಿಯೊಬ್ಬರಿಂದ ಈ ವಿಚಾರ ಬೆಳಕಿಗೆ ಬಂದಿದೆ. ಸುಮಾರು 55 ವರ್ಷದ ಮೃತ ವ್ಯಕ್ತಿಯ ಎಡಗೈಯಲ್ಲಿ ಕೆಂಚಪ್ಪಗೌಡ ಎಂಬ ಹೆಸರಿದ್ದು, ಈ ವ್ಯಕ್ತಿ ಇಲ್ಲಿಗೆ ಯಾಕೆ ಬಂದಿದ್ದ ಎಂಬುದು ತಿಳಿದು ಬಂದಿಲ್ಲ.
ಸಂಶಯ: ಬೆಂಗಳೂರಿನ ಉದ್ಯಮಿಯೊಬ್ಬರು ಸುಮಾರು ಒಂದು ದಶಕದ ಹಿಂದೆ ಖರೀದಿಸಿರುವ ಈ ಕಾಫಿ ತೋಟವನ್ನು ಪಾಳು ಬಿಟ್ಟಿದ್ದು, ಇಲ್ಲಿ ಯಾವುದೇ ಗ್ರಾಮಸ್ಥರು ಸಂಚರಿಸುವುದಿಲ್ಲ.
ಆದರೆ ಈ ತೋಟದಲ್ಲಿ ಯಥೇಚ್ಛವಾಗಿರುವ ಏಲಗ ಹಾಗೂ ಕುಳೀರುಮಾವಿನ ಚಕ್ಕೆಯನ್ನು ಹೆಚ್ಚಾಗಿ ಕಳ್ಳತನ ನಡೆಸಲಾಗುತ್ತಿದ್ದು, ಕಾಡಾನೆ ತುಳಿದು ಸಾಯಿಸಿರುವ ಈ ವ್ಯಕ್ತಿಯು ಚಕ್ಕೆಯನ್ನು ತೆಗೆಯಲು ಬಂದಿರಬಹುದು ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಮೃತದೇಹವನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಘಟನ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್, ವಲಯ ಅರಣ್ಯಾಧಿಕಾರಿ ಮಹದೇವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಸ್ಥರ ಆರೋಪ
ಕಳೆದ ಹಲವು ದಿನಗಳಿಂದ ಕೆ. ಮಂಚಹಳ್ಳಿ, ಕ್ಯಾನಹಳ್ಳಿ ಸುತ್ತಮುತ್ತಲು ಸಂಚರಿಸುತ್ತಿರುವ 8 ಕಾಡಾನೆ ಹಿಂಡು ವ್ಯಾಪಕ ಪ್ರಮಾಣದಲ್ಲಿ ಬೆಳೆನಾಶದಲ್ಲಿ ತೊಡಗಿದ್ದು, ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ದೂರು ನೀಡಿದ್ದರು ಕಾಡಾನೆಯನ್ನು ಬೇರೆಡೆ ಅಟ್ಟಲು ಯಾವುದೇ ಪ್ರಯತ್ನಗಳನ್ನು ಅರಣ್ಯ ಇಲಾಖೆ ನಡೆಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಡಾನೆಯಿಂದ ಅಪರಿಚಿತನೊಬ್ಬ ಸಾವನ್ನಪ್ಪಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

