ಹಾಸನ

ಮೆಕ್ಕೆಜೋಳ, ರಾಗಿ ಖರೀದಿ ಕೇಂದ್ರಕ್ಕೆ ಉತ್ತಮ ಪ್ರತಿಕ್ರಿಯೆ

Published On :

ಜಾವಗಲ್: ಕೃಷಿ ಉತ್ಪನ್ನ ಉಪಮಾರುಕಟ್ಟೆಯಲ್ಲಿ ತೆರೆಯಲಾಗಿರುವ ಬೆಂಬಲ ಬೆಲೆಯ ಮೆಕ್ಕೆಜೋಳ ಮತ್ತು ರಾಗಿ ಖರೀದಿ ಕೇಂದ್ರಕ್ಕೆ ಸುತ್ತಮುತ್ತಲ ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಫೆ. 15ರವರೆಗೆ 273 ರೈತರಿಂದ 15,446 ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಿದ್ದು, ಒಟ್ಟು 2,23,29,960 ರು. ಈ ಪೈಕಿ 173 ರೈತರ ಬ್ಯಾಂಕ್ ಖಾತೆಗೆ 1,25,61,265 ರು. ಗಳನ್ನು ನೇರವಾಗಿ ಜಮಾ ಮಾಡಲಾಗಿದೆ. ಉಳಿದ 106 ರೈತರಿಗೆ 97,68,695 ರು.ಗಳನ್ನು ಬಾಕಿ ಪಾವತಿ ಮಾಡಲಾಗಿರುತ್ತದೆ ಎಂದು ಕೇಂದ್ರದ ಕೃಷಿ ಅಧಿಕಾರಿ ಡಿ.ಎಸ್. ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ರಾಗಿ ಖರೀದಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು ರೈತರಿಂದ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು. ರಾಜ್ಯ ಮಾರಾಟ ಮಹಾ ಮಂಡಳದ ಜಗದೀಶ್, ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಮೇಲ್ವಿಚಾರಕ ಮಹೇಂದ್ರ ಟಿಎಪಿಸಿಎಂ ಎಸ್. ಕುಮಾರ್ ಉಪಸ್ಥಿತರಿದ್ದರು.
ಜಾವಗಲ್ನ ಭಾನುವಾರದ ಸಂತೆಯಲ್ಲಿ ಕೊಬ್ಬರಿ ಬೆಲೆ 1 ಕ್ವಿಂಟಾಲ್ಗೆ 8 ಸಾವಿರ ರು.ಗಳಿಗೆ ಏರಿಕೆ ಕಂಡುಬಂತು. ತೆಂಗಿನಕಾಯಿ ಬೆಲೆ ಏರಿಕೆ ಕಂಡು ಬಂದು ಕಿಲೋ 1ಕ್ಕೆ 26-28 ರು. ಗಳಾಗಿತ್ತು. 1000 ತೆಂಗಿನಕಾಯಿ ಬೆಲೆ 15,000-16,000 ರು.ಗಳಾಗಿತ್ತು. ಉಳಿದಂತೆ ತರಕಾರಿಗಳ ಬೆಲೆಯಲ್ಲಿ ಅಲ್ಪ ಸ್ವಲ್ಪ ಇಳಿಕೆ ಕಂಡು ಬಂದಿತು. ಗೆಡ್ಡೆಕೋಸು, ಬೀನ್ಸ್, ಕ್ಯಾರೆಟ್ 1 ಕಿಲೋಗೆ 30 ರು. ಆಲೂಗೆಡ್ಡೆ, ಬದನೆ, ಸೀಮೆಬದನೆ, ಹಿರೇಕಾಯಿ ಕಿಲೋ 1ಕ್ಕೆ 20 ರು., ಈರುಳ್ಳಿ ಕಿಲೋ 1ಕ್ಕೆ 10 ರು., ಟೊಮೆಟೋ ಕಿಲೋ 1ಕ್ಕೆ 5 ರು. ಬೆಲೆ ಇತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.