ಹಾಸನ

ಕಳೆದು ಹೋಗಿರುವ ಮೌಲ್ಯಗಳು ಮರುಸ್ಥಾಪನೆ'

Published On :

ಹಾಸನ: ಇಂದಿನ ಯುವ ಪೀಳಿಗೆಯಲ್ಲಿ ಕಳೆದು ಹೋಗಿರುವ ಮೌಲ್ಯಗಳು ಎನ್ಎಸ್ಎಸ್ ಶಿಬಿರಗಳಿಂದ ಮರುಸ್ಥಾಪನೆಯಾಗುತ್ತವೆ ಎಂದು ತಹಸೀಲ್ದಾರ್ ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಕೌಶಿಕ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ತಂಡವು ಏರ್ಪಡಿಸಿರುವ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿ ಮಾತನಾಡಿದ ಅವರು, ಸರ್ಕಾರ ಹಾಗೂ ಜನತೆಯ ನಡುವೆ ಇಂತಹ ಶಿಬಿರಗಳು ಸೇತುವೆಯಂತೆ ಕೆಲಸ ಮಾಡುತ್ತವೆ ಎಂದು ಹೇಳಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಉಪ ಅಧೀಕ್ಷಕ ಮುರಳಿಧರ ಪೂಜಾರ್ ಮಾತನಾಡಿ, ಗ್ರಾಮಸ್ಥರು ಶಿಬಿರ ನಡೆಸಲು ಪೂರ್ಣ ಸಹಕಾರ ನೀಡುವುದರ ಜತೆಗೆ ಶಿಬಿರದ ಸಂಪೂರ್ಣ ಪ್ರಯೋಜನೆ ಪಡೆದುಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಡೀನ್ ಅಡ್ಮಿನಿಸ್ಟ್ರೇಷನ್ ಟಿ.ಬಿ. ತ್ರಿಪಾಠಿ ಮಾತನಾಡಿ, ಸಂಸ್ಥೆಯ ಮುಖ್ಯ ಧ್ಯೇಯವನ್ನು ಶಿಬಿರದ ಮೂಲಕ ಹೇಗೆ ಸಾಕಾರಗೊಳಿಸಬಹುದು ಎಂದು ತಿಳಿಸಿದರು. ಗ್ರಾಮ ಪಂಚಾಯ್ತಿ ಸದಸ್ಯರಾದ ಚಿಗಳ್ಳಿ ಗೌಡಪ್ಪ, ಮಂಜೇಗೌಡ ಚಿಕ್ಕಾಲದಳ್ಳಿ, ಕೆ.ಎನ್. ಬೋರಯ್ಯ ಕಂಚನಳ್ಳಿ, ಮರಿಗೌಡರು ಸಾತೆನಹಳ್ಳಿ, ಬೊರೇಗೌಡ, ರಂಗಸ್ವಾಮಿ ಇದ್ದರು. ಶಿಬಿರಾರ್ಥಿ ಡಾ. ಅಭಿಜ್ಞಾ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮಸ್ಥ ಪ್ರಸನ್ನ ಪ್ರಾರ್ಥಿಸಿದರು.  ಶಿಬಿರಾಧಿಕಾರಿ ಎಂ.ಎನ್. ಪಾಂಡುರಂಗ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಡಾ. ನವೀನ್ ಕುಮಾರ್ ಅವರು ಶಿಬಿರದ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಸಹ ಶಿಬಿರಾಧಿಕಾರಿ ಡಾ. ರಾಜರಾಜೇಶ್ವರಿ ವಂದಿಸಿದರು.
ಭವಿಷ್ಯ ನಿಧಿ ಅಭಿಯಾನ
ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಕಾಯಿದೆಗೆ ಒಳಪಟ್ಟ ಸಂಸ್ಥೆಗಳ ಉದ್ಯೋಗದಾತರುಗಳಿಂದ ವಸೂಲಾತಿಗಾಗಿ ಬಾಕಿ ಇರುವ ಭವಿಷ್ಯ ನಿಧಿ ಮತ್ತು ಇತರೆ ಹಣದ ವಸೂಲಿಗಾಗಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಫೆ.1ರಿಂದ 28ರ ತನಕ ವಿಶೇಷ ವಸೂಲಾತಿ ಅಭಿಯಾನ  ಹಮ್ಮಿಕೊಂಡಿದೆ. ಭವಿಷ್ಯ ನಿಧಿ ಕಾಯಿದೆಯ ಅನುಸಾರ ಪಾವತಿಸಬೇಕಿರುವ ಬಾಕಿಯನ್ನು ಸಂಬಂಧಪಟ್ಟ ಉದ್ಯೋಗದಾತರು ತಕ್ಷಣ ಪಾವತಿಸಿ ಕಾನೂನಿನ ಅನುಸಾರ ಜರುಗಿಸಲಾಗುವ, ತನಿಖೆ, ಬಂಧನ, ಸ್ಥಿರಾಸ್ತಿಯ ಜಪ್ತಿ ಮತ್ತು ಏಲಂ ರೀತಿಯ ಕ್ರಮಗಳಿಂದ ಮುಕ್ತರಾಗುವಂತೆ ಚಿಕ್ಕಮಗಳೂರು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತೆ ಪ್ರಭಾವತಿ ಬಿ. ಜೋಶಿ ಕೋರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.