'ಸಮನ್ವಯತೆಯೇ ಭಾರತದ ಶಕ್ತಿ'
ಹಾಸನ: ಎಲ್ಲಾ ಜಾತಿ, ಜನಾಂಗ ಮತ್ತು ಧರ್ಮಗಳು ಸೇರಿ ಭಾರತ ಆಗಿದೆ. ಸರ್ವಧರ್ಮ ಸಮನ್ವಯತೆಯೇ ಭಾರತದ ಶಕ್ತಿ ಎಂದು ಸಾಹಿತಿ ಬೇಲೂರು ನವಾಬ್ ಹೇಳಿದರು. ಹಾಸನ ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನವನಾಥಯಾಗ ಮಂಟಪದಲ್ಲಿ ಇತ್ತೀಚೆಗೆ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಮಠದ ವ್ಯವಸ್ಥಾಪಕ ಎಚ್.ಕೆ. ಚಂದ್ರಶೇಖರ್ ಮತ್ತು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಶಿಕ್ಷಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು. ಹಾಸನದ ಕಾಲಭೈರವೇಶ್ವರ ಭಜನಾ ಮಂಡಳಿ, ಶೈಲವಲ್ಲಭ ಭಜನಾ ಮಂಡಳಿ, ಶಕ್ತಿ ಯೋಗ ಕೇಂದ್ರ, ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜ ಮತ್ತು ಒಕ್ಕಲಿಗರ ಮಹಿಳಾ ಸಂಘದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಾಧ್ಯಾಪಕ ಲಕ್ಷ್ಮೀನಾರಾಯಣಣ್ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ರಂಗೇಗೌಡ ಸ್ವಾಗತಿಸಿದರು ಮತ್ತು ಪ್ರಾಚಾರ್ಯ ಬೊಮ್ಮೇಗೌಡ ವಂದಿಸಿದರು.
ಕೀರ್ತಿ ತಂದ ಎನ್ಸಿಸಿ ಕೆಡೆಟ್ಗಳು
ಹೊಳೆನರಸೀಪುರ: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ ಕೆಡೆಟ್ಗಳಾದ ಸೀನಿಯರ್ ಅಂಡರ್ ಆಫೀಸರ್ ಕೆ.ಎಸ್. ಸೌಮ್ಯ ಹಾಗೂ ಎಚ್.ಎಸ್.ಪ್ರಜ್ವಲ್ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ. ಇರ್ಷಾದ್ ಹಾಗೂ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಎನ್.ವಿ. ಶ್ರೀನಿವಾಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಭಿನಂದನೆ: ಗಣರಾಜ್ಯೋತ್ಸವ ಪೆರೇಡ್ ಅಲ್ಲದೇ, ಕೆ.ಎಸ್. ಸೌಮ್ಯ ರಾಜ್ಯದ ರಾಜ್ಯಪಾಲರಾದ ಹಂಸರಾಜ್ ಭಾರಧ್ವಾಜ್ ಅವರಿಗೂ ಪೈಲೆಟಿಂಗ್ ಆಗಿ ಕಾರ್ಯನಿರ್ವಹಿಸುವ ಮೂಲಕ ಹೆಚ್ಚಿನ ಪ್ರತಿಭೆಯನ್ನು ತೋರಿ ಕಾಲೇಜಿಗೆ ಹಾಗೂ ಅವರ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಕಾಲೇಜಿನ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳ ಪರವಾಗಿ ಪ್ರಾಂಶುಪಾಲರು ಹಾಗೂ ಎನ್.ಸಿ.ಸಿ. ಅಧಿಕಾರಿಗಳು ಅಭಿನಂದಿಸಿದ್ದಾರೆ.
'ಮಾಸಾಂತ್ಯಕ್ಕೆ ರಸ್ತೆ ಡಾಂಬರೀಕರಣ'
ಅರಕಲಗೂಡು: ಗೊರೂರು ಗಡಿಯಿಂದ ತಾಲೂಕಿನ ಗಡಿಯವರೆಗಿನ ರಸ್ತೆ ದುರಸ್ಥಿಗಾಗಿ 47ಕೋಟಿ ರೂಗಳಿಗೆ ಅನುಮೋದನೆ ದೊರೆತಿದ್ದು, ಈಗಾಗಲೇ 20 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಅಭಿವೃದ್ಧಿಪರ ಬಜೆಟ್: ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಾಸಕ ಎ. ಮಂಜು ಅವರು ಪ್ರತಿ ಕಿಲೋಮೀಟರ್ಗೆ 1 ಕೋಟಿ ರು.ಗಳಂತೆ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಗುತ್ತದೆ. ತಾಲೂಕಿನ 20 ಕಿಲೋ ಮೀಟರ್ ದೂರದ ರಸ್ತೆ ದುರಸ್ತಿ ಕಾಮಗಾರಿ ಫೆಬ್ರವರಿ ಮಾಸಾಂತ್ಯದಲ್ಲಿ ಆರಂಭಗೊಳ್ಳಲಿದೆ ಎಂದು ತಿಳಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಅನ್ನು ಕೆಲವರು ಚುನಾವಣಾ ಬಜೆಟ್ ಎಂದು ಬಣ್ಣಿಸಿದ್ದಾರೆ. ಆದರೆ ಅದು ಚುನಾವಣಾ ಬಜೆಟ್ ಅಲ್ಲ. ಜನಪರವಾದ ಅಭಿವೃದ್ಧಿ ಪರವಾದ ಬಜೆಟ್ ಎಂದು ಅವರು ಪ್ರತಿಪಾದಿಸಿದರು. ರೈತರು, ಶಿಕ್ಷಣ, ಆಶ್ರಯ ಮನೆಗಳಿಗೆ ಒತ್ತು ನೀಡಲಾಗಿದೆ. ರೈತರನ್ನು ಸಂಕಷ್ಟದಿಂದ ಹೊರತರುವ ನಿಟ್ಟಿನಲ್ಲಿ ಸಣ್ಣ ಹಿಡುವಳಿದಾರರಿಗೆ 3 ಲಕ್ಷರು.ಗಳವರೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಒಂದು ಉತ್ತಮ ಪ್ರಯತ್ನ ಎಂದರು. ರೈತರು ಸಾಲ ಮನ್ನಾ ಮಾಡುವ ಬಗೆಗಿನ ಚಿಂತನೆ ಬಿಡಬೇಕು. ಎಂದ ಅವರು ರಾಜ್ಯದಲ್ಲಿ 500 ಪಶು ವೈದ್ಯರ ನೇಮಕ ಕುರಿತ ನಿರ್ಧಾರ ರೈತ ಪರ ಕಾಳಜಿಯಿಂದ ಕೂಡಿರುವುದು ಎಂದರು. ದಲಿತರಿಗೆ ತೋಟಗಾರಿಕೆಯಲ್ಲಿ ಪ್ರೋತ್ಸಾಹ ಧನ, ಹೊಸ 148 ಶಾಲೆಗಳ ಸ್ಥಾಪನೆ, ರೈತರಿಗೆ ನೇರ ಮಾರುಕಟ್ಟೆ ಇವೆಲ್ಲವೂ ಆಶಾದಾಯಕವಾದುದು ಎಂದ ಅವರು, ತಾಲೂಕಿನ ಏತ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳಿಗೂ ಬಜೆಟ್ನಿಂದ ಅನುಕೂಲವಾಗಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

