ಕಾರ್ಮಿಕರ ವಿವರ ಸಲ್ಲಿಸಲು ಕರೆ
ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಮಾರ್ಚ್ 2012ರಿಂದ ಮಾಸಿಕ ವಂತಿಗೆ ಪಾವತಿಯನ್ನು ಗಣಕೀಕೃತ ಮಾಡಿದೆ. ಉದ್ಯೋಗದಾತರು ಫಾರಂ. ನಂ 12 ಎ ಮತ್ತು 3ಎ, 6ಎ ಮಾಸಿಕ, ವಾರ್ಷಿಕ ನಮೂನೆ ಸಲ್ಲಿಸುವ ಅಗತ್ಯವಿಲ್ಲ.
ಎಲ್ಲಾ ಉದ್ಯೋಗದಾರರು ತಮ್ಮ ಕಾರ್ಮಿಕರ ಮೂಲ ವಿವರಗಳನ್ನು ತಂದೆಯ ಹೆಸರು, ಗಂಡನ ಹೆಸರು, ಜನ್ಮ ದಿನಾಂಕ ಇತ್ಯಾದಿ ಸಲ್ಲಿಸಿರುವುದಿಲ್ಲ. ಆದ್ದರಿಂದ ಎಲ್ಲಾ ಮಾಲೀಕರು ತಮ್ಮ ಕಾರ್ಮಿಕರ ವಿವರಗಳನ್ನು ಖಜಢಿಛ ಕ್ಟ್ಠಿಡಿಛಟ ಮೂಲಕ ಅನುಬಂಧ- 2 ರಲ್ಲಿ ಕಡ್ಡಾಯವಾಗಿ ಕಳುಹಿಸಿಕೊಡಬೇಕೆಂದು ಚಿಕ್ಕಮಗಳೂರು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತೆ ಪ್ರಭಾವತಿ ಬಿ. ಜೋಶಿ ತಿಳಿಸಿದ್ದಾರೆ.
ಅನುಮಾಸ್ಪದವಾಗಿ ಗೃಹಿಣಿ ಸಾವು
ಹಾಸನ: ಗೃಹಿಣಿಯೊಬ್ಬಳು ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಚೌಡೇನಹಳ್ಳಿ ಬುಧವಾರ ಬೆಳಕಿಗೆ ಬಂದಿದೆ. ತಾಲೂಕಿನ ಚೌಡೇನಹಳ್ಳಿಯ ವಾಸಿ ನಾಗರಾಜ್ ಎಂಬವರ ಪತ್ನಿ ನಾಗವೇಣಿ (39) ಸಾವನ್ನಪ್ಪಿರುವ ಗೃಹಿಣಿ. ಕಳೆದ 14 ವರ್ಷಗಳ ಹಿಂದೆ ನಾಗವೇಣಿ ಮತ್ತು ನಾಗರಾಜ್ ವಿವಾಹವಾಗಿದ್ದು, ಕೆಲ ದಿನಗಳ ಹಿಂದೆ ಕೌಟುಂಬಿಕ ಕಲಹ ಹೆಚ್ಚಾಗಿತ್ತು ಎನ್ನಲಾಗಿದೆ. ಈಗ ನಾಗವೇಣಿಯ ಮೃತದೇಹ ಮನೆಯ ಸಮೀಪದ ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಲಭ್ಯವಾಗಿದೆ. ಅದಕ್ಕೆ ನಾಗವೇಣಿ ಕುಟುಂಬದವರು ಪತಿ ನಾಗರಾಜ್ ಕೊಲೆ ಮಾಡಿ ನೇಣು ಹಾಕಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಡ್ಡಗಟ್ಟಿ ದರೋಡೆ
ಹಾಸನ: ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೋರ್ವನನ್ನು ನಾಲ್ವರು ದುರ್ಷ್ಕಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ತಳಿಸಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಾಳ್ಳುಪೇಟೆಯ ನಿವಾಸಿ ಯಶವಂತ್ ಎಂಬುವರೆ ಹಲ್ಲೆಗೊಳಗಾಗಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳೆದ ವ್ಯಕ್ತಿ. ಯಶವಂತ್ ಅವರು ಬಾಳ್ಳುಪೇಟೆಯಿಂದ ತನ್ನ ಸ್ನೇಹಿತನನ್ನು ನೋಡಲೆಂದು ಕಾರಿನಲ್ಲಿ ಬರುತ್ತಿದ್ದಾಗ ನಗರದ ಹೊರವಲಯ ರಾಜೀವ್ ಕಾಲೇಜ್ ಬಳಿ ಮೂತ್ರ ವಿಸರ್ಜನೆ ಮಾಡಲೆಂದು ವಾಹನ ನಿಲ್ಲಿಸಿದಾಗ ನಾಲ್ವರು ದರೋಡೆಕೋರರು ಬಂದು ಚಾಕು ತೋರಿಸಿ ಹಲ್ಲೆ ನಡೆಸಿದ್ದಾರೆ. ನಂತರ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಯಶವಂತ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

