ಜನಮನ ಸೂರೆಗೊಂಡ ಕಲಾತಂಡಗಳ ಮೆರವಣಿಗೆ
ಹಾಸನ: ವಿವಿಧ ಕಲಾತಂಡಗಳೊಂದಿಗೆ ನಡೆದ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಜನಮನ ಸೂರೆಗೊಂಡಿತು. ಗೊರೂರಿನ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ಧ್ವಜಾರೋಹಣ ನೆರವೇರಿತು. ನಂತರ ಸಮ್ಮೇಳನಾಧ್ಯಕ್ಷ ಎನ್.ಎಲ್.ಚನ್ನೇಗೌಡರನ್ನು ಮರೆವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.
ಮೆರವಣಿಗೆ ಕಾಲೇಜು ಆವರಣದಿಂದ ಪ್ರಾರಂಭವಾಗಿ ರಥಬೀದಿ ಮುಖಾಂತರ ಪೇಟೆ ಮಾರ್ಗವಾಗಿ ಗೊರೂರು ಮುಖ್ಯರಸ್ತೆ ಮೂಲಕ ಸಮ್ಮೇಳನದ ವೇದಿಕೆ ತಲುಪಿತು. ಈ ಸಂದರ್ಭದಲ್ಲಿ ಡೊಳ್ಳು ಕುಣಿತ, ಕೀಲು ಕುದುರೆ, ಸ್ತಬ್ಧಚಿತ್ರಗಳು, ನೃತ್ಯ ತಂಡಗಳು, ನಾನಾ ಗಣ್ಯರ ವೇಷಧರಿಸಿದ್ದ ಮಕ್ಕಳ ತಂಡ, ಕಳಸ ಹೊತ್ತ ಮಕ್ಕಳು ಸೇರಿದಂತೆ ನಾನಾ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿ ಬಂದು ಜನಮನ ಸೂರೆಗೊಂಡಿತು. ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್, ತಾಲೂಕು ಕಸಾಪ ಅಧ್ಯಕ್ಷ ಕೆ.ಆರ್.ಮಮತೇಶ್, ಡಿಆರ್ಡಿಓ ಹಿರಿಯ ವಿಜ್ಞಾನಿ ಸ್ವಾಮಿ ನಾಯಕ್, ಎಂ.ಆರ್.ಚಂದ್ರಶೇಖರ್, ಶಾಂತಕೃಷ್ಣ, ಸಾಹಿತಿ ಜ.ಹೋ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಮಲ್ಲಿಗೆವಾಳು ದ್ಯಾವಪ್ಪ, ರುದ್ರೇಶ್, ಎಚ್.ಕೆ.ನಾಗರಾಜ್, ಸಂಪತ್ಕುಮಾರ್, ಕೆ.ಪಿ.ಸುರೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

