'ನೀರಾವರಿ ಸೌಲಭ್ಯ ವಂಚಿತ ಪ್ರದೇಶಗಳ ಬಗ್ಗೆ ನಿರ್ಲಕ್ಷ್ಯ'
ಅರಸೀಕೆರೆ: ಕೃಷ್ಣಾ ಕಣಿವೆಯ ನೀರಾವರಿಗಾಗಿ 10 ಕೋಟಿ ಹಣವನ್ನು ಮೀಸಲಿಡುವ ಭರವಸೆ ನೀಡಿದ್ದ ಮುಖ್ಯಮಂತ್ರಿಗಳು ಈ ಆಯವ್ಯಯದಲ್ಲಿ ಒಟ್ಟು ಕೇವಲ 11ಸಾವಿರ ಕೋಟಿ ರು.ಗಳನ್ನು ಮೀಸಲಿರಿಸುವ ಮೂಲಕ ನೀರಾವರಿ ಸೌಲಭ್ಯ ವಂಚಿತ ಪ್ರದೇಶಗಳನ್ನು ಮತ್ತಷ್ಟು ನಿರ್ಲಕ್ಷಿಸಿದ್ದಾರೆ ಎಂದು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿಷಾದಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರತಿ ಬಜೆಟ್ನಲ್ಲಿ ಕನಿಷ್ಠ 25ಸಾವಿರ ಕೋಟಿ ರು.ಗಳನ್ನಾದರೂ ಮೀಸಲಿಡುವ ಅಗತ್ಯವಿದೆ.
ರಾಜ್ಯದ ಜನತೆಯ ಹಿತ ಕಾಯಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಆಶ್ವಾಸನೆಗಳನ್ನು ನೀಡುವ ಕಾರ್ಯದಲ್ಲಿಯೇ ನಿರತರಾಗಿದ್ದಾರೆ ಎಂದು ಟೀಕಿಸಿದರು.
ಮಾತು ತಪ್ಪಿದ್ದಾರೆ: ಕೃಷ್ಣ ಕಣಿವೆಯ ನೀರಾವರಿ ಕಾಮಗಾರಿಗಳಿಗೆ 10 ಸಾವಿರ ಕೋಟಿ ರು. ಮೀಸಲಿರಿಸುವುದಾಗಿ ಇತ್ತೀಚಿಗಷ್ಟೇ ಹೇಳಿಕೆ ನೀಡಿದ್ದರು. ಆದರೆ ರಾಜ್ಯದ ಬಜೆಟ್ನಲ್ಲಿ ಸಮಗ್ರ ನೀರಾವರಿಗಾಗಿ ಕೇವಲ 11 ಸಾವಿರ ಕೋಟಿ ರು. ಮೀಸಲಿರಿಸುವ ಮೂಲಕ ಮಾತು ತಪ್ಪಿದವರಂತೆ ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.
ವ್ಯರ್ಥ ನದಿ ನೀರು ಉಳಿಸಿ: ನೇತ್ರಾವತಿ, ಕಾಳಿ, ಶರಾವತಿ, ಕೃಷ್ಣೆ ನದಿಗಳು ಸೇರಿದಂತೆ ಇತರೆ ನದಿಗಳ 3 ಸಾವಿರ ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ. ಇದರಲ್ಲಿ ಅಲ್ಪ ಪ್ರಮಾಣದ ನೀರನ್ನು ಸದುಪಯೋಗಪಡಿಸಿಕೊಂಡರೆ ಅರಸೀಕೆರೆ, ತಿಪಟೂರು, ತುಮಕೂರು, ಶಿರಾ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆ ಪ್ರದೇಶಗಳಿಗೆ ನೀರು ಹರಿಸಿದರೆ ಈ ರಾಜ್ಯ ಸಮೃದ್ಧವಾಗಲಿದೆ ಎಂದರು.
ತಾವು ಇದೀಗ ಶಿರಾ ತಾಲೂಕಿನ ರೈತರೊಂದಿಗೆ ಹೋರಾಟಕ್ಕಿಳಿದಿದ್ದು ನೀರಾವರಿ ಅನುಷ್ಠಾನ ಸಂಬಂಧ ಮಾ. 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ನೀರಾವರಿ ಸಮಾವೇಶ ನಡೆಸಲಿರುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

