'ಒಳ್ಳೆಯ ಪೋಷಕರು, ಶಿಕ್ಷಕರಿಂದ ಬದುಕು ಉಜ್ವಲ'
ಹೊಳೆನರಸೀಪುರ: ಒಳ್ಳೆಯ ಪೋಷಕರು ಮತ್ತು ಉತ್ತಮ ಶಿಕ್ಷಕರು ದೊರೆತಲ್ಲಿ ವಿದ್ಯಾರ್ಥಿಗಳ ಬದುಕು ಉಜ್ವಲವಾಗುತ್ತದೆ. ಆದರೆ ಸಜ್ಜನರ ಸಹವಾಸ ಮಾತ್ರವೇ ನಮ್ಮ ಎಲ್ಲಾ ಪ್ರಯತ್ನಗಳ ಸಾಕಾರಕ್ಕೂ ನಾಂದಿಯಾಗುತ್ತದೆ ಎಂದು ಎನ್.ಎಸ್.ಎಸ್ ರಾಜ್ಯ ಸಮನ್ವಯಾಧಿಕಾರಿ ಡಾ. ಧನಂಜಯ ಅಭಿಪ್ರಾಯಪಟ್ಟರು.
ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿನ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಗೊಂಡಿರುವ ಏಳು ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಭಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ನಾವು ಎನ್ನುವ ಒಗ್ಗಟ್ಟಿನ ಸಾಮರಸ್ಯದ ಜತೆಗೆ ಯುವ ಸಬಲೀಕರಣವು ಎನ್ಎಸ್ಎಸ್ನ ಪರಿಕಲ್ಪನೆಯಾಗಿದೆ ಎಂದರು.
ಕಾರ್ಯಕ್ರಮಗಳು: ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಮೂಲಕ ನಾನಾ ರಾಜ್ಯಗಳ ಸಾಂಸ್ಕೃತಿಕ ಸೊಬಗು ಮೇಳೈಸುವ ನಿಟ್ಟಿನಲ್ಲಿ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಎಚ್.ಡಿ. ದೇವೇಗೌಡ ಪ್ರಥಮದರ್ಜೆ ಕಾಲೇಜು ಸಾಕ್ಷಿಯಾಯಿತು. ಪಡುವಲಹಿಪ್ಪೆಯಲ್ಲಿ ನಡೆದಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಎರಡನೇ ದಿನವಾದ ಶನಿವಾರ ರಾಜ್ಯದ ಜನಪದ ಪೂಜಾಕುಣಿತ ಸಾಂಪ್ರದಾಯಿಕ ಸ್ವಾಗತ ನೀಡಿತು.
ರಾಜ್ಯದ ಜನಪದ ಪರಂಪರೆಯ ಪ್ರತೀಕವಾಗಿ ಪಡುವಲಹಿಪ್ಪೆ ಕಾಲೇಜಿನ ವಿದ್ಯಾರ್ಥ್ಥಿಗಳು ಏಣಿಮೇಲೆ ಕಳಸ ಹೊತ್ತು ಕುಣಿಯುವ ಮೂಲಕ ನಾನಾ ರಾಜ್ಯಗಳ ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ಬೆರಗು ಮೂಡಿಸಿದರು. ಏಳು ದಿನಗಳ ಕಾಲ ಆಯೋಜಿಸಲಾಗಿರುವ ಶಿಬಿರದಲ್ಲಿ ಉತ್ತರ ಪ್ರದೇಶ, ಆಂಧ್ರ, ಬಿಹಾರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ನಾನಾ ವಿವಿಗಳಿಂದ 150 ಎನ್.ಎಸ್.ಎಸಸ್ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆರಂಭದ ದಿನವಾದ ಫೆ. 21ರಂದು ನಾನಾ ತಂಡಗಳನ್ನು ಪ್ರಾಸ್ತಾವಿಕವಾಗಿ ಪರಿಚಯಿಸುವ ಕಾರ್ಯಕ್ರಮ ನಡೆಸಿ, 22ರಂದು ಶನಿವಾರ ಶಿಬಿರಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಜಿ.ಡಿ. ನಾರಾಯಣ್, ಎನ್ಎಸ್ಎಸ್ ಅಧಿಕಾರಿಗಳಾದ ಕೆ.ವಿ. ಪಾರ್ಥೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

