ವಿಜೃಂಭಣೆಯ ರಂಗಸ್ವಾಮಿ ಕಲ್ಯಾಣೋತ್ಸವ
ಕ.ಪ್ರ.ವಾರ್ತೆ , ಅರಸೀಕೆರೆ , ಜ 16
ತಾಲ್ಲೂಕಿನ ಹಾರನಹಳ್ಳಿ ಸಮೀಪದ ಇತಿಹಾಸ ಪ್ರಸಿದ್ಧವಾದ ಗುತ್ತಿನಕೆರೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಕಲ್ಯಾಣೋತ್ಸವ ಕಾರ್ಯಕ್ರಮ ವೈಭವದಿಂದ ಸಾವಿರಾರು ಭಕ್ತಾಗಳ ಸಮ್ಮುಖದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಬುಧವಾರ ನೆರವೇರಿತು.
ಗುತ್ತಿನಕೆರೆ ಗ್ರಾಮದಲ್ಲಿನ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಪುರಾಣ ಪ್ರಸಿದ್ಧಿಯಾಗಿದ್ದು, ರಾಜ್ಯದ ಅನೇಕ ಭಾಗಗಳಿಂದ ಮಕರ ಸಂಕ್ರಾಂತಿ ಹಬ್ಬದಿಂದ ಆರಂಭವಾಗುವ ಇಲ್ಲಿನ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಗಳು ಭಾಗವಹಿಸುವ ಪ್ರತೀತಿಯಿದೆ. ಹಾರನಹಳ್ಳಿ ಗ್ರಾಮದೇವತೆ ಶ್ರೀಕೊಡಮ್ಮದೇವಿ, ಶ್ರೀ ಮೂಡಲಗಿರಿ ತಿಮ್ಮಪ್ಪ, ಯಳವಾರೆ ಗ್ರಾಮದ ಶ್ರೀಹುಚ್ಚಮ್ಮದೇವಿ, ಹುಲ್ಲೇನಹಳ್ಳಿ ಗ್ರಾಮದ ಶ್ರೀಚಿಕ್ಕಮ್ಮದೇವಿಯವರ ಸಮ್ಮುಖದಲ್ಲಿ ಗುತ್ತಿನಕರೆ ಗ್ರಾಮದಲ್ಲಿ ಜ.15 ರ ಸಂಕ್ರಾಂತಿ ಹಬ್ಬದ ದಿನದಂದು ಅಂಕುರಾರ್ಪಣೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ನೆರವೇರಿದ ನಂತರ ಸಂಜೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಗೆ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು.
ತೀರ್ಥ - ಪ್ರಸಾದ: ಸೇವಾಕರ್ತರಾದ ಗುತ್ತಿನಕೆರೆ ಗ್ರಾಮಸ್ಥರು ಹಾಗೂ ಶೋಭಾ ಮೋಹನ್ ಕೃಷ್ಣ ದಂಪತಿಗಳ ಸಮಕ್ಷಮದಲ್ಲಿ ಬೆಂಗಳೂರಿನ ಕೆಂಗೇರಿ ಶ್ರೀರಾಮಾನುಜಂ ಮಠದ ಪ್ರಧಾನ ಅರ್ಚಕರಾದ ಚಿರಂಜೀವಿ ರಾಮಚಂದ್ರ ಭಟ್ಟಾಚಾರ್ಯ ಮತ್ತು ಸಂಗಡಿಗರು ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ ವಿಧಾನಗಳಂತೆ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ಭಕ್ತಾಗಳಿಗೆ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಸೂರ್ಯಮಂಡಲ ಉತ್ಸವ: ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಮಾಜಿ ಅಧ್ಯಕ್ಷ ಹುಚ್ಚೇಗೌಡ, ತಾಪಂ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹಾಗೂ ನೂರಾರು ಸಂಖ್ಯೆಯಲ್ಲಿನ ಭಕ್ತಾಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಕಲ್ಯಾಣೋತ್ಸವ ಕಾರ್ಯಕ್ರಮ ಮುಗಿದ ನಂತರ ಗ್ರಾಮದಲ್ಲಿ ಉತ್ಸವಮೂರ್ತಿಯ ಸೂರ್ಯಮಂಡಲ ಉತ್ಸವ ನಡೆಯಿತು.
ಜ.16 ರಂದು ಗುರುವಾರ ಮಧ್ಯಾಹ್ನ ಸರ್ಕಾರಿ ಸೇವೆ ಅಂಗವಾಗಿ ಬ್ರಹ್ಮ ರಥೋತ್ಸವ, ನಂತರ ಹೂವಿನ ನಡೆಮುಡಿ ಸೇವೆ. ಸಂಜೆ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಎರ್ಪಡಿಸಲಾಗಿದ್ದು, ಜ.17ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹಗಲು ರಥೋತ್ಸವ, ವಸಂತೋತ್ಸವ, ಉಯ್ಯಾಲೆ ಉತ್ಸವ, ಮಣೇವು ಸೇವೆ, ಸಂಜೆ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

