ಇಂದು, ನಾಳೆ ಕ್ರಿಕೆಟ್ ಪಂದ್ಯಾವಳಿ
ಹೊಳೆನರಸೀಪುರ: ತಾಲೂಕಿನ ಬ್ರಾಹ್ಮಣ ಯುವ ಸಂಘದ ಆಶ್ರಯದಲ್ಲಿ ಜ.18 ಮತ್ತು ಜ.19ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ವಿಪ್ರ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದ ಬಯಲು ರಂಗ ಮಂದಿರ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬ್ರಾಹ್ಮಣ ಯುವ ಸಂಘದ ಪದಾಕಾರಿಯಾದ ಎಚ್.ಎನ್. ವೆಂಕಟೇಶ್ ಹಾಗೂ ಅನಂತ ತಿಳಿಸಿದ್ದಾರೆ. ಪಂದ್ಯಾವಳಿಯನ್ನು ಶಾಸಕ ಎಚ್.ಡಿ. ರೇವಣ್ಣ ಉದ್ಘಾಟಿಸಲಿದ್ದು, ಹಿರಿಯ ವಕೀಲರಾದ ಎ.ತಾಂಡವೇಶ್ವರ, ಕಾವೇರಿ ನೀರಾವರಿ ನಿಗಮದ ಕಿರಿಯ ಅಭಿಯಂತರಾದ ಎಚ್.ಎಸ್.ರಾಜೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಅಮೋಘ ಟಿವಿ ಚಾನೆಲ್ನ ಕೆಪಿಎಸ್ ಪ್ರಮೋದ್, ಪುರಸಭೆ ಮಾಜಿ ಸದಸ್ಯರಾದ ಬಿ.ವಿ. ಶ್ರೀಧರ್, ಬಾ.ರಾ.ಸುಬ್ಬರಾಯ, ತಾಲೂಕು ಬ್ರಾಹ್ಮಣ ಯುವ ಸಂಘದ ಅಧ್ಯಕ್ಷ ಎ. ಶ್ರೀಧರ್, ಡಾ. ಸಾಂಬಶಿವರಾವ್ ಅವರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಎಸ್ಪಿ ವತಿಯಿಂದ ಮಾಯಾವತಿ ಜನ್ಮ ದಿನಾಚರಣೆ
ಸಕಲೇಶಪುರ: ಬಹುಜನ ಸಮಾಜ ಪಕ್ಷದ ಅಧಿನಾಯಕಿ, ಮಾಜಿ ಸಿಎಂ ಮಾಯವತಿಯವರ 57ನೇ ಜನ್ಮ ದಿನಾಚರಣೆಯನ್ನು ಗುರುವಾರ ಪಟ್ಟಣದ ಬಿಎಸ್ಪಿ ಪಕ್ಷದ ಕಚೇರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕೇಕ್ ಕತ್ತರಿಸಿದ ಪಕ್ಷದ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲಾ ಬಿಎಸ್ಪಿ ಮುಖಂಡ ಲಕ್ಷ್ಮಣ್ ಕೀರ್ತಿ ಮಾತನಾಡಿ, ಶತ-ಶತಮಾನಗಳಿಂದ ರಾಜಕೀಯ ಅಧಿಕಾರ ಕಳೆದುಕೊಂಡು ಅನಾಥವಾಗಿದ್ದ ಬಹುಜನ ಸಮಾಜಕ್ಕೆ ರಕ್ತ ನೀಡುವಲ್ಲಿ ಮಾಯವತಿ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು. ಭ್ರಷ್ಟಾಚಾರಕ್ಕಿಂತ ದೊಡ್ಡದಾದದ್ದು ಜಾತೀಯತೆ. ಇದು ಭ್ರಷ್ಟಾಚಾರಕ್ಕೂ ಮೊದಲು ಹುಟ್ಟಿತ್ತು. ಇದರ ವಿನಾಶಕ್ಕೆ ಇಂದು ಯಾರೂ ಮುಂದಾಗುತ್ತಿಲ್ಲ. ಜಾತಿಯ ಹೆಸರಿನಲ್ಲಿ ಬಹುಜನರನ್ನು ಕಡೆಗಣಿಸಲಾಗುತ್ತಿದೆ. ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಮೇಲ್ವರ್ಗದ ಹಿಡಿತದಲ್ಲಿದೆ. ಜಾತಿಯನ್ನು ಕಟ್ಟಿದವರಿಂದ ಜಾತಿ ನಾಶ ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎ.ಕೆ. ಹಸೇನಾ ಇತರರು ಇದ್ದರು.
ಇಂದು ಕ್ಯಾನ್ಸರ್ ತಪಾಸಣೆ ಶಿಬಿರ
ಹಾಸನ: ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು (ಮ್ಯಾಮೊಗ್ರಫಿ) ಜ. 18ರಂದು ನಡೆಯಲಿದೆ ಎಂದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಕ್ಯಾನ್ಸರ್ ರೋಗ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಸ್ತನ ಕ್ಯಾನ್ಸರ್ ವಿಶೇಷ ತಜ್ಞೆ ಡಾ. ಜಯಂತಿ ತುಮ್ಸಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಬೈಲ್ ಆನ್ ಟೈಮ್ ಮ್ಯಮೋಗ್ರಫಿ ಬಸ್ಮಾಮ್ (ಎಂಒಎಂ) ಎಕ್ಸ್ಪ್ರೆಸ್ನ ಹಾಯದೊಂದಿಗೆ ನಾಗರಿಕರ ಸ್ತನ ಕ್ಯಾನ್ಸರ್ ತಪಾಸಣೆಯನ್ನು ಮಾಡಿಸಿಕೊಳ್ಳಬಹುದಾಗಿದೆ.
ಬಿಪಿಎಲ್ ಕಾರ್ಡ್ದಾರರಿಗೆ ಈ ಸೌಲಭ್ಯವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ನಂತರ ಬೆಂಗಳೂರಿನ ಬಿಜೆಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಪಡೆಯಬಹುದಾಗಿದೆ ಎಂದರು.
ಪರೀಕ್ಷೆ ಅಗತ್ಯವಿದೆ: ಆಸ್ಪತ್ರೆಯ ಸಾಂಸ್ಥಿಕ ಹೊಣೆಗಾರಿಕೆ ಅಂಗವಾಗಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ತನ ಕ್ಯಾನ್ಸರ್ ಪುರುಷರು ಮತ್ತು ಮಹಿಳೆಯರನ್ನು ಕಾಡಬಹುದು. ಸ್ತನವನ್ನು ಸಂರಕ್ಷಿಸುವ ಶಸ್ತ್ರ ಚಿಕಿತ್ಸೆ ಕೂಡ ಈಗ ಸಾಧ್ಯವಿದೆ. ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಲ ಮೂತ್ರ ಅಭ್ಯಾಸದಲ್ಲಿ ಬದಲಾವಣೆ, ಬಣ್ಣದಲ್ಲಿ, ಮಲದ ಗಾತ್ರ, ಆಕಾರಗಳಲ್ಲಿ ವ್ಯತ್ಯಾಸ, ಪದೇಪದೇ ಮಲಬದ್ಧತೆ ಮತ್ತು ಬೇಧಿ... ಈ ಎಲ್ಲವೂ ಎಚ್ಚರಿಕೆಯ ಲಕ್ಷಣಗಳು. ಮೂತ್ರದಲ್ಲಿ ರಕ್ತ ಕಂಡು ಬಂದರೆ ವೈದ್ಯರ ಪರೀಕ್ಷೆ ಅಗತ್ಯವಿದೆ. ಇಂತಹ ನಾನಾ ಕಾರಣಗಳಿಂದ ಈ ರೋಗ ಬರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕ್ಯಾನ್ಸರ್ ಫೌಂಡೇಷನ್ ಸುಧಾ, ವೈದ್ಯರಾದ ಡಾ. ಸಾವಿತ್ರಿ, ಸಂಧ್ಯಾ ಪ್ರಸಾದ್ ಇದ್ದರು.
ವಿವೇಕ ವಾಣಿ ಅಳವಡಿಸಿಕೊಳ್ಳಲು ಕರೆ
ಜಾವಗಲ್: ವಿವೇಕಾನಂದರ ವಿವೇಕ ವಾಣಿಗಳನ್ನು ಯುವಕರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಉಪಪ್ರಾಂಶುಪಾಲ ಯೋಗೀಶ್ ವಿದ್ಯಾರ್ಥಿಗಳಿಗೆ ಕರೆನೀಡಿದರು. ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚೆಗೆ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಪ್ರಗತಿಯ ಹಿಂದೆ ಯುವ ಶಕ್ತಿ ಅಡಗಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಚೇತನ ವಿವೇಕಾನಂದ ಎಂದರು. ಭಾರತದ ಆಧ್ಯಾತ್ಮ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟ ಧೀಮಂತ ವ್ಯಕ್ತಿಯಾಗಿದ್ದರು ಎಂದರು.
ಮಾಹಿತಿ: ಶಿಕ್ಷಕಿ ಸವಿತಾ ಮಾತನಾಡಿ, ಭಾರತದ ಧರ್ಮಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿ, ಭಾರತೀಯ ಸಂಸ್ಕೃತಿ, ಧರ್ಮ, ನಾಗರೀಕತೆಯ ಬಗ್ಗೆ ಉಪನ್ಯಾಸ ನೀಡಿದ ಭಾರತೀಯ ಸಂಸ್ಕತಿಯ ರಾಯಭಾರಿಯಾಗಿದ್ದರು ಎಂದರು. ವಿವೇಕಾನಂದರ ಜನನ, ಬಾಲ್ಯ, ವಿದ್ಯಾಭ್ಯಾಸ, ಧರ್ಮಪ್ರಚಾರ ಬಗ್ಗೆ ಮಾಹಿತಿ ನೀಡಿದರು.
ತತ್ವಜ್ಞಾನಿ: ಸೋಮಾರಿತನ ಪ್ರಯೋಜನ ಇಲ್ಲದ್ದು ಅಸೂಯೆ, ಅಹಂಕಾರ ಬಿಡಬೇಕೆಂದರು. ಶಿಕ್ಷಕರಾದ ಕೆ.ಎಂ.ಪುಟ್ಟಶಂಕರಪ್ಪ, ಮರಳುಸಿದ್ದಪ್ಪ, ಮಮತ, ಸುನಂದ ಮಾತನಾಡಿ, ವಿವೇಕಾನಂದರು ಧ್ಯಾನ, ಸಂಗೀತ, ಕ್ರೀಡೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿ, ಕರ್ಮಯೋಗಿ, ಉಜ್ವಲ ದೇಶ ಪ್ರೇಮಿ, ತತ್ವಜ್ಞಾನಿಯಾಗಿದ್ದರು ಎಂದರು. ಜನರಲ್ಲಿ ದೇಶಭಕ್ತಿ, ಅರಿವು, ಚೈತನ್ಯವನ್ನು ತುಂಬಿ ಚಲನಯೇ ಚೇತನದ ಚಿಲುಮೆ ಎಂಬ ತತ್ವವನ್ನು ಸಾರಿದ ಮಹಾನ್ ಆದರ್ಶಸಂತ. ಯುವ ಪ್ರವರ್ತಕ, ಯುವಜನರ ಪ್ರತೀಕವಾಗಿದ್ದರು. ವಿದ್ಯಾರ್ಥಿಗಳಾದ ಅಮೂಲ್ಯ, ಪ್ರಮೋದ್, ಸ್ಕಂದನ್ ಸಿಂಹ ಮಾತನಾಡಿದರು. ಶಿಕ್ಷಕರಾದ ರಾಮಲಿಂಗಯ್ಯ, ಚಂದ್ರೇಗೌಡ, ಶಿವಲಿಂಗ ಮೂರ್ತಿ, ನಂದಾ, ವಿದ್ಯಾ, ಜಯಲಕ್ಷ್ಮೀ ಇದ್ದರು.
ಗ್ರಾಪಂ ಅಧ್ಯಕ್ಷರಾಗಿ ಲೋಕೇಶ್ ಆಯ್ಕೆ
ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ನವಿಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ನವಿಲೆ ಭೋವಿ ಕಾಲೋನಿಯ ಲೋಕೇಶ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಎನ್.ಕೆ. ನಾಗಪ್ಪ ಅವರ ರಾಜೀನಾಮೆಯಿಂದ ತೆರೆವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 12 ಜನ ಸದಸ್ಯರಿದ್ದು, 11 ಜನ ಹಾಜರಿದ್ದರು ಚುನಾವಣಾಧಿಕಾರಿಯಾಗಿ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಮೃತ್ಯುಂಜಯ ಕಾರ್ಯ ನಿರ್ವಹಿಸಿದರು.
'ವಿದ್ಯಾರ್ಥಿಗಳು ಮೊಬೈಲ್, ಟಿವಿಯಿಂದ ದೂರವಿರಬೇಕು'
ಚನ್ನರಾಯಪಟ್ಟಣ: ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿಯಿಂದ ದೂರವಿರಬೇಕು ಎಂದು ರಾಜ್ಯ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಸತ್ಯಮೂರ್ತಿ ಕಿವಿಮಾತು ಹೇಳಿದರು.
ವಿಷಾದ: ಪಟ್ಟಣದ ಸರ್ಕಾರಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್ಗೆ ದಾಸರಾಗುತ್ತಿರುವುದರಿಂದ ವಿದ್ಯೆಯ ಕಡೆಗೆ ನಿರ್ಲಕ್ಷ ತೋರುತ್ತಿದ್ದಾರೆ.
ಇದರ ಜತೆಗೆ ಮನೆಗಳಲ್ಲಿ ದೃಶ್ಯ ಮಾಧ್ಯಮ ವೀಕ್ಷಣೆಗೆ ಹೆಚ್ಚು ಕಾಲ ನೀಡುತ್ತಿರುವುದರಿಂದ ವಿದ್ಯಾಭ್ಯಾಸಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ವಿಷಾದಿಸಿದರು.
ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಅಗತ್ಯವಿದ್ದು, ತಮ್ಮ ಜೀವನದಲ್ಲಿ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯವನ್ನು ಕಾಣಬಹುದು ಎಂದು ತಿಳಿಸಿದರು.
ಉದ್ಯಮಿ ಅಟ್ಟವಾರ ರಾಮದಾಸ್ ಕಾಲೇಜಿಗೆ ಎರಡು ಕಂಪ್ಯೂಟರ್ಗಳನ್ನು ನೀಡಿದರು. ಪ್ರಾಂಶುಪಾಲ ಕುಮಾರ್, ಮನೋಹರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

