ಬಣವೆಗೆ ಬೆಂಕಿ, ಅಪಾರ ನಷ್ಟ
ಕ.ಪ್ರ.ವಾರ್ತೆ , ರಾಮನಾಥಪುರ , ಜ. 17
ಇಲ್ಲಿಗೆ ಸಮೀಪದ ಬನ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಡೆನೂರು ಗ್ರಾಮದಲ್ಲಿ ಗುರುವಾರ ರಾತ್ರಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು, ಸಾಕಷ್ಟು ಹಾನಿಯಾಗಿದೆ. ಇದರಿಂದ ಸಂಬಂಧಪಟ್ಟ ರೈತರು ಕಂಗಾಲಾಗಿದ್ದಾರೆ.
ಚೆಸ್ಕಾಂ ನಿರ್ಲಕ್ಷ್ಯ: ಕೊಣನೂರು ಹೋಬಳಿ, ಬನ್ನೂರು ಗ್ರಾಪಂ ವ್ಯಾಪ್ತಿಗೆ ಬರುವ ಹೊಡೆನೂರು ಗ್ರಾಮದಲ್ಲಿ ತಡರಾತ್ರಿ ಹೊಲದಲ್ಲಿ ಹಾಕಿದ್ದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು, ಸುಮಾರು 11-30ರಲ್ಲಿ ಈ ಗ್ರಾಮದ ಮಹಿಳೆ ಜಯಮ್ಮ ಎಂಬಾಕೆ ಬಹಿರ್ದಸೆಗೆ ಹೋಗಲು ಮನೆಯಿಂದ ಹೊರಬಂದಾಗ ಬೆಂಕಿಯ ಜ್ವಾಲೆ ನೋಡಿ ಗಾಬರಿಗೊಂಡು ಗ್ರಾಮಸ್ಥರನ್ನು ಕೂಗಿ ಕರೆದು ಬರುವ ಹೊತ್ತಿಗೆ ಜ್ವಾಲೆ ಇನ್ನಷ್ಟು ಜೋರಾಗಿತ್ತು. ಬಣವೆಗೆ ಹತ್ತಿದ ಬೆಂಕಿಯನ್ನು ಆರಿಸಲು ಗ್ರಾಮಸ್ಥರು ಪಂಪ್ಸೆಟ್ನಿಂದ ನೀರು ಹೊಡೆಯಲು ಕೊಣನೂರು ಚೆಸ್ಕಾಂ ಕಚೇರಿಗೆ ಫೋನ್ ಮಾಡಿ, ಸಾಕಷ್ಟು ಬಾರಿ ವಿನಂತಿಸಿದರೂ ವಿದ್ಯುತತ್ನೀಡದೆ ಫೋನ್ ಸಂಪರ್ಕ ಕಡಿತಗೊಳಿಸಿದರು ಎಂದು ಆರೋಪಿಸಿದರು.
ಶಿಫಾರಸ್ಸು ಮಾಡುವ ಭರವಸೆ: ತಕ್ಷಣ ಸಮಯಕ್ಕೆ ಧಾವಿಸಿ ಬಂದ ಅಗ್ನಿ ಶಾಮಕ ದಳದವರ ಕಾರ್ಯ ನಿಪುಣತೆಯಿಂದ ಇನ್ನಷ್ಟು ಹುಲ್ಲಿನ ಬಣವೆಗಳಿಗೆ ಬೆಂಕಿ ತಗಲುವ ಸಂಭವವನ್ನು ತಡೆದರು. ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಸೋಮಣ್ಣ ಭೇಟಿ ನೀಡಿ, ಬೆಳೆ ಹಾನಿಗೊಳಗಾದ ರೈತರಿಂದ ಮಾಹಿತಿ ಪಡೆದು ಈ ವಿಚಾರವಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗಿರಿ, ಅಣ್ಣಪ್ಪ, ಮಹೇಶ, ರಾಮೇಗೌಡ, ಪಾರ್ಥೇಗೌಡ, ಎನ್.ಆರ್. ಗಣೇಶ, ಮಂಜು, ವೆಂಕಟೇಶ, ಕೃಷ್ಣಶೆಟ್ಟಿ, ಅರುಣ, ಅವಿನಾಶ, ಪಾರ್ವತಮ್ಮ, ಪ್ರಕಾಶ, ಸ್ವಾಮಿ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

