ಹಾಸನ

ಜಾವಗಲ್ ದರ್ಗಾಕ್ಕೆ ಸಚಿವ ಬೇಗ್ ಭೇಟಿ

Published On :

ಕ.ಪ್ರ.ವಾರ್ತೆ ,  ಜಾವಗಲ್ ,  ಜ. 17
ಜಾವಗಲ್ ದರ್ಗಾಕ್ಕೆ ಯಾತ್ರಿ ನಿವಾಸ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ರಾಜ್ಯದ ವಕ್ಫ್ ಮತ್ತು ಮೂಲಸೌಕರ್ಯ ಸಚಿವ ರೋಶನ್ ಬೇಗ್ ಭರವಸೆ ನೀಡಿದರು.
ಜಾವಗಲ್‌ನ ಪ್ರಸಿದ್ಧ ದರ್ಗಾಕ್ಕೆ ಇತ್ತೀಚೆಗೆ ಭೇಟಿ ನೀಡಿ ಅವರು, ಈ ವಿಚಾರ ತಿಳಿಸಿದರು. ಭೇಟಿಯ ಸಂದರ್ಭದಲ್ಲಿ, ಬಾಬಾ ಸಮಾಧಿಗೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿ, ಬಾಬಾ ಅವರು ವಾಸ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಸೋದ್ಯಮ ಇಲಾಖೆವತಿಯಿಂದ ದರ್ಗಾ ಸುತ್ತಲ ರಸ್ತೆಗಳ ಅಭಿವೃದ್ಧಿ ಮಾಡಿಸುವುದಾಗಿ ತಿಳಿಸಿದರು.  ಗ್ರಾಪಂ ಮಾಜಿ ಸದಸ್ಯ ನರಸಿಂಹಸ್ವಾಮಿ ಮಾತನಾಡಿ, ಬಾಬಾ ಅವರು ವಾಸವಾಗಿದ್ದ ಹಳೆ ಬಸ್ ನಿಲ್ದಾಣದ ಬಡಾವಣೆಯನ್ನು ಅಭಿವೃದ್ಧಿಪಡಿಸಿಕೊಡುವಂತೆ ಮನವಿ ಮಾಡಿದರು.
ಸಚಿವರು ದರ್ಗಾಕ್ಕೆ ಆಗಮಿಸಿದಾಗ ದರ್ಗಾ ಸಮಿತಿ ಅಧ್ಯಕ್ಷ ಇಲಾಹಿ ಭಕ್ಷ್, ಉಪಾಧ್ಯಕ್ಷ ಶಬೀರ್ ಅಹಮದ್, ಶಕೀಲ್, ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯ ಜಹೀರ್ ಅಹಮದ್, ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಸೋಮೇಗೌಡ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಮೀರ್ ಜಾನ್, ಸಂಘಟನಾ ಕಾರ್ಯದರ್ಶಿ ಫೈರೋಜ್ ಗಾಂಧಿ, ಹಾಸನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರವೇಜ್ ಪಾಷ, ಅರಸೀಕೆರೆ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ.ಅಸೀಮ್ ಖಾನ್, ಉಪಾಧ್ಯಕ್ಷ ಗೌಸ್ ಖಾನ್ ಜಿ.ಟಿ.ಎಸ್, ಡಿ.ಸಿ.ಸಿ ಸದಸ್ಯ ಅಬ್ದುಲ್ ಜಮೀರ್,  ಗೋವಿಂದ, ಬಸವರಾಜು, ಕರವೇ ಅಧ್ಯಕ್ಷ ದಯಾನಂದ್, ಜಿ.ಟಿ. ಮಂಜುನಾಥ್ ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.