ಕಲುಷಿತಗೊಳ್ಳುತ್ತಿರುವ ಸಮಾಜ: ದೇವೇಗೌಡ ಆತಂಕ
ಅರಕಲಗೂಡು: ಸಹನೆಯಿಂದ ಮಾತ್ರ ಸಮಾಜದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.ಸಂಘರ್ಷದಿಂದಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ದೊಡ್ಡಮಠ ಹಾಗೂ ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನಸ್ವಾಮಿ 50ನೇ ವರ್ಷದ ಹುಟ್ಟುಹಬ್ಬದ ಸಮಾರಂಭದ ಉದ್ಘಾಟನೆ ನೆರವೇರಿಸಿಮಾತನಾಡಿದ ಅವರು ಧಾರ್ಮಿಕ ಸಮಾರಂಭದಲ್ಲಿ ನಾನು ರಾಜಕೀಯ ಮಾತನಾಡಲು ಬಂದಿಲ್ಲ.ಆದರೆ ಇಂದು ಸಮಾಜ ಇಂದು ತೀವ್ರ ಮಟ್ಟದಲ್ಲಿ ಕಲುಷಿತಗೊಳ್ಳುತ್ತಿದೆ.ಇದೊಂದು ಆತಂಕಕಾರಿ ವಿಷಯ ಎಂದರು.
ತಾಳ್ಮೆ ಕಳೆದುಕೊಂಡರೆ ಸಂಘರ್ಷಕ್ಕೆ ದಾರಿಯಾಗುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು.ವಿಶ್ವದ ವಾತಾವರಣ ಕದಡಿಹೋಗಿದ್ದು,ಅದನ್ನು ಮತ್ತೆ ಪ್ರತಿಷ್ಠಾಪಿಸಲು ಮಠ-ಮಂದಿರಗಳು ಮುಂದಿನ ಪೀಳಿಗೆಗೆ ಶಾಂತಿ ಸಂದೇಶವನ್ನು ನೀಡಬೇಕಿದೆ ಎಂದು ನುಡಿದರು.
ಶಾಸಕ ಹೆಚ್.ಡಿ.ರೇವಣ್ಣ ಅವರು ಮಾತನಾಡಿ ಮಠಾಧೀಶರುಗಳು ಸಮಾಜದಲ್ಲಿ ನೆಮ್ಮದಿ ನೆಲೆಸಲು ಮತ್ತು ಧಾರ್ಮಿಕ ಸಂದೇಶಗಳನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೆಯ್ಯಲು ಮಠ-ಮಾನ್ಯಗಳು ಮುಂದಾಗಬೇಕು.ಎಲ್ಲ ಧರ್ಮಗಳು ಶಾಂತಿ ಸಂದೇಶವನ್ನೇ ಸಾರಿದೆ.ಅವುಗಳ ಅನುಷ್ಠಾನದ ತಿಳುವಳಿಕೆ ನೀಡುವ ಕಾರ್ಯ ಮಠಗಳಿಂದ ಆಗಲಿ ಎಂದು ಹೇಳಿ ದೊಡ್ಡ ಮಠದ ಮಲ್ಲಿಕಾರ್ಜುನ ಸ್ವಾಮಿಗಳ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಅರೆಮಾದನಹಳ್ಳಿ ಶಿವಸುಜ್ಞಾನಸ್ವಾಮಿಗಳು ಮಾತನಾಡಿ ಶ್ರೀಗಳು ಬೆಳೆದು ಬಂದ ದಾರಿಯನ್ನು ಶ್ಲಾಘಿಸಿದರು. ಅಧ್ಯಕ್ಷತೆ ಬೆಟ್ಟದಪುರದ ವಿರಕ್ತ ಮಠದ ಚನ್ನಬಸವದೇಶಿಕೇಂದ್ರ ಸ್ವಾಮಿ ವಹಿಸಿದ್ದರು.
ಚಿಲುಮೆ ಮಠದ ಜಯದೇವಸ್ವಾಮಿ,ಕೊಡ್ಲಿಪೇಟೆ ಕಲ್ಮಠದ ಮಹಾಂತಸ್ವಾಮಿ,ತೇಜೂರು ಮಠದ ಕಲ್ಯಾಣ ಸ್ವಾಮೀಜಿ, ಶಾಸಕ ಎ.ಮಂಜು,ನಾಗರೀಕ ವೇದಿಕೆ ಅಧ್ಯಕ್ಷ ಯೋಗಾರವುಶ್, ಎಸ್.ಎನ್.ಕೆಂಪೇಗೌಡರ್ ಉಪಸ್ಥಿತರಿದ್ದರು.
ಅಕ್ಕನ ಬಳಗದ ಕಾರ್ಯಕರ್ತರು ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬೆಳ್ಳಿಯ ಕಿರೀಟ ಸಮರ್ಪಣೆ ಮಾಡಿದರು.ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದ ವಂಶಸ್ಥರಿಂದ ಸ್ವಾಮೀಜಿಯವರ ತುಲಾಭಾರ ಮಾಡಲಾಯಿತು.ಸಮಾರಂಭದ ಆರಂಭದಲ್ಲಿ ಅಕ್ಕನಬಳಗದವರಿಂದ ಪ್ರಾರ್ಥನೆ ಮತ್ತು ಭಜನೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

