ಅನರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ: ರುದ್ರೇಶ್ಗೌಡ
ಕ.ಪ್ರ.ವಾರ್ತೆ , ಬೇಲೂರು , ಜ.19
ರಾಜ್ಯ ಸರ್ಕಾರ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗಳು ಅರ್ಹತೆ ಇಲ್ಲದವರಿಗೆ ಲಭ್ಯವಾಗುತ್ತಿವೆ. ಪ್ರಶಸ್ತಿಗೆ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಶಿಫಾರಸ್ಸು ಹೆಚ್ಚಾಗಿದೆ ಎಂದು ಶಾಸಕ ವೈ.ಎನ್.ರುದ್ರೇಶಗೌಡ ವಿಷಾದಿಸಿದರು.
ಪಟ್ಟಣದ ಪುಟ್ಟಮ್ಮಚನ್ನಕೇಶವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಬೆಂಗಳೂರಿನ ಡಾ.ಎನ್.ರಾಮರೆಡ್ಡಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಶತನಾಟಕ ಸಾರ್ವಭೌಮ ಸಾಹಿತಿ ಬೇಲೂರು ಕೃಷ್ಣಮೂರ್ತಿಯವರ 100 ನಾಟಕಗಳ ಒಳಗೊಂಡ 10 ಸಂಪುಟಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಬೇಲೂರು ಕೃಷ್ಣಮೂರ್ತಿಯವರು ಸಾಹಿತಿಯಾಗಿ ಅಭಿವ್ಯಕ್ತ 105 ನಾಟಕಗಳನ್ನು ರಚನೆ ಮಾಡಿದ್ದಾರೆ. ಅಲ್ಲದೆ ಹಲವು ಹತ್ತು ಕೃತಿಗಳು ನಗೆಹನಿ ಮತ್ತು ಲೇಖನಗಳನ್ನು ಬರೆದಿದ್ದು, ಇವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಬೇಕಿತ್ತು. ಅದರೆ ಸರ್ಕಾರಗಳು ರಾಜ್ಯೋತ್ಸವ ಪುರಸ್ಕಾರಗಳನ್ನು 250 ರಿಂದ 50 ಇಳಿಸಿ ಉತ್ತಮ ಮಾನದಂಡ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಸಕರ ಅವಧಿಯೊಳಗೆ ಅವರಿಗೆ ಸಲ್ಲುವ ಪುರಸ್ಕಾರ ನೀಡುವ ಭರವಸೆ ನೀಡಿದರು.
ವೈಡಿಡಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ. ಮಠಪತಿ ಮಾತನಾಡಿ, ಹಾಸನ ಜಿಲ್ಲೆ ಅನ್ನಕ್ಕೆ ಮಹತ್ವ ಹೆಚ್ಚು ನೀಡಿದ್ದಾರೆ. ಅದರೆ ಜ್ಞಾನಕ್ಕೆ ಅಂತಹ ಮಹತ್ವ ಇಲ್ಲ ಎಂದ ಅವರು, ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಇರುವ ಸಾಹಿತಿಗಳನ್ನು ಉಳಿಸಿಕೊಳ್ಳುವ ಔದಾರ್ಯ ಸಾಹಿತ್ಯ ಅಭಿಮಾನಿಗಳಲ್ಲಿ ಬರಲಿ ಎಂದರು.
ಸಾಹಿತಿ ಕವಿತಾಕೃಷ್ಣ ಮಾತನಾಡಿ, ಇಂತಹ ಅಗಮ್ಯ ಸಾಧನೆ ಮಾಡಿದ ಬೇಲೂರು ಕೃಷ್ಣಮೂರ್ತಿಯವರ ಹೆಸರನ್ನು ಪಟ್ಟಣದ ವೃತ್ತಕ್ಕೆ ನಾಮಕರಣ ಮಾಡಬೇಕು. ಅವರ ವಿರಚಿತ ತ್ಯಾಗಿ ನಾಟಕ ಇಂದಿನ ಹಲವು ಪ್ರಸಿದ್ಧ ಕಲಾವಿದರ ಬದುಕನ್ನು ಬದಲಾವಣೆ ಮಾಡಿದೆ. ಈ ನಾಟಕ 1000 ಪ್ರದರ್ಶನ ಕಂಡಿದೆ ಎಂದು ತಿಳಿಸಿದರು.
ವೈಡಿಡಿ ಕಾಲೇಜು ಉಪನ್ಯಾಸಕ ಪ್ರೊ.ಜಯಣ್ಣಗೌಡ ಮಾತನಾಡಿ, ಬೇಲೂರು ಕೃಷ್ಣಮೂರ್ತಿ ರಚನೆ ಮಾಡಿದ 105 ನಾಟಕಗಳು ಪಠ್ಯಕ್ರಮಕ್ಕೆ ಅಳವಡಿಸಿದಾಗ ಮಾತ್ರ ಕೃತಿಗಳ ಅಂದ ಚೆಂದ ಹೆಚ್ಚುತ್ತದೆ. ಕುವೆಂಪು ವೈಚಾರಿಕತೆಯನ್ನು ಪೂರ್ಣ ಪ್ರಮಾಣದಲ್ಲಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು.
ವೇಲಾಪುರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್.ಎಂ.ದಯಾನಂದ್, ಶತನಾಟಕ ಸಾರ್ವಭೌಮ ಸಾಹಿತಿ ಬೇಲೂರು ಕೃಷ್ಣಮೂರ್ತಿ, ಸಾಹಿತಿ ಬೇಲೂರು ನವಾಬ್ ಪುಸ್ತಕ ಪ್ರಕಾಶಕರು ಮೈಸೂರು ಮಾನಸ, ವೈ.ಎಸ್.ಸಿದ್ದೇಗೌಡ, ಅಡಿಟರ್ ಕೃಷ್ಣಮೂರ್ತಿ ಕಾರ್ಯದರ್ಶಿ ರಾಜೇಗೌಡ, ಅಂಗವಿಕಲ ಸಂಘದ ಅಧ್ಯಕ್ಷ ಪುರುಷೋತ್ತಮ್, ಶಿಕ್ಷಕ ಕುಮಾರಸ್ವಾಮಿ, ಧರ್ಮಸ್ಥಳ ಯೋಜನಾಧಿಕಾರಿ ಗಾಯಿತ್ರಿ, ನಾಯಕರಹಳ್ಳಿ ಮಂಜೇಗೌಡ, ತೀರ್ಥಂಕರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದೆಯಿಂದ ಭರತನಾಟ್ಯ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

