ನಮೋ ಬ್ರಿಗೇಡ್ ವಿನೂತನ ಪ್ರತಿಭಟನೆ
ಕ.ಪ್ರ.ವಾರ್ತೆ , ಸಕಲೇಶಪುರ , ಜ.19
ಪಟ್ಟಣದಲ್ಲಿ ನಮೋ ಬ್ರಿಗೇಡ್ ಸಂಘಟನೆಯಿಂದ ಸಾರ್ವಜನಿಕರಿಗೆ ಉಚಿತ ಚಹಾ ವಿತರಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಶನಿವಾರ ವಿನೂನತನ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಅಂಗವಾಗಿ ಸಾರ್ವಜನಿಕರಿಗೆ ವಿತರಿಸಿ, ಚಹಾ ಮಾರುವ ವ್ಯಕ್ತಿ ದೇಶ ಪ್ರಧಾನಿ ಆಗಬಾರದೆಂದ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಹೇಳಿಕೆ ಖಂಡಿಸಿದರು.
ನಮೋ ಬ್ರಿಗೇಡ್ ಮುಖಂಡ ದೀಪಕ್ ಮಾತನಾಡಿ, ಕಾಂಗ್ರೆಸ್ ಸಚಿವ ಮಣಿಶಂಕರ್ ಅಯ್ಯರ್ ಸೋನಿಯಾ ಗಾಂಧಿಯನ್ನು ಓಲೈಸಲು ಭವಿಷ್ಯದ ಪ್ರಧಾನಿಯೆಂದೇ ಬಿಂಬಿತರಾಗಿರುವ ನರೇಂದ್ರ ಮೋದಿ ಕೇವಲ ಚಹಾ ಮಾರುವುದಕ್ಕೆ ಲಾಯಕ್ಕು ಎಂದು ಹೇಳುವ ಮೂಲಕ ಚಹಾ ಮಾರುವವರನ್ನೂ ಅವಮಾನಿಸಿದ್ದಾರೆ. ಚಹಾ ಮಾರುವವರು ಈ ದೇಶದ ಪ್ರಧಾನಿಯಾಗಬಾರದೆಂದು ಏನಾದರೂ ನಿಯಮವಿದೆಯೇ ಎಂದು ಪ್ರಶ್ನಿಸಿದರು.
ಬಡತನದಲ್ಲೇ ಬೆಳೆದ ನರೇಂದ್ರ ಮೋದಿ ಚಹಾ ಮಾರಿ ಜೀವನ ಸಾಗಿಸಿದ್ದರು. ಬದುಕಿನ ಕಷ್ಟನಷ್ಟಗಳ ಬಗ್ಗೆ ಮೋದಿ ಅವರಿಗೆ ಅರಿವಿದ್ದು ಇಂತಹ ವ್ಯಕ್ತಿ ಪ್ರಧಾನಿಯಾದರೆ ಮಾತ್ರ ಈ ದೇಶದ ಉಳಿವು ಸಾಧ್ಯ. ದೇಶದ ಎಲ್ಲೆಡೆ ಮೋದಿ ಅಲೆಯಿರುವುದರಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ಆ ಹತಾಶೆಯಲ್ಲಿ ಮೋದಿ ವಿರುದ್ಧ ಈ ರೀತಿಯ ಬಾಲಿಶ ಹೇಳಿಕೆಗಳನ್ನು ನೀಡಿ ಮಾಧ್ಯಮಗಳಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಚಹಾ ಮಾರುವುದು ಒಂದು ಗೌರವಯುತ ವೃತ್ತಿ. ಪ್ರತಿಯೊಬ್ಬರಿಗೂ ಕಾಂಗ್ರೆಸ್ನವರು ಮೊದಲು ಗೌರವ ಕೊಡುವುದನ್ನು ಕಲಿಯಲಿ ಎಂದು ಅವರು ಹೇಳಿದರು.
ಗುಜರಾತ್ ಮುಖ್ಯಮಂತ್ರಿಯ ಸಾಧನೆಯ ಬಗ್ಗೆ ಅರಿವಿಲ್ಲದೆ ಅವರ ಬಡತನದ ಬಾಲ್ಯದ ಬಗ್ಗೆ ಮಾತನಾಡುವ ಕೇಂದ್ರ ಸಚಿವರು ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಿದ ಮನವಿಯನ್ನು ಉಪವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸಿದರು.
ಸಂಘಟನೆಯ ಪ್ರಮುಖರಾದ ಗಿರೀಶ್, ಸಂದೇಶ್ಶೆಟ್ಟಿ, ಜಗದೀಶ, ಕೌಶಿಕ್, ವಿಕ್ರಂ, ಶಿವು,ರಾಮಲಿಂಗಂ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

