ಗೆಜ್ಜಿಗನಹಳ್ಳಿಯಲ್ಲಿ ಮುಸುಕಿನ ಬೆಳೆ ಕ್ಷೇತ್ರೋತ್ಸವ
ಹೊಳೆನರಸೀಪುರ: ಇಲ್ಲಿನ ಕೃಷಿ ಇಲಾಖೆ ವತಿಯಿಂದ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಗೆಜ್ಜಿಗನಹಳ್ಳಿಯ ಗ್ರಾಮದಲ್ಲಿ ಭೂ ಚೇತನ ಯೋಜನೆಯಡಿ ಮುಸುಕಿನ ಜೋಳದ ಬೆಳೆಯ ಕ್ಷೇತ್ರೋತ್ಸವವನ್ನು ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಳ್ಳಿಮೈಸೂರು ಹೋಬಳಿಯ ಕೃಷಿ ಅಧಿಕಾರಿಗಳಾದ ಸೋಮಶೇಖರ, ರೈತರಿಗೆ ಭೂಚೇತನ ಯೋಜನೆಯ ಉದ್ದೇಶಗಳನ್ನು ತಿಳಿಸಿದರಲ್ಲದೇ, ಬೀಜೋಪಚಾರ ಮಾಡುವ ವಿಧಾನಗಳನ್ನು ತಿಳಿಸಿ, ಬೀಜೋಪಚಾರದಿಂದ ಬೆಳೆಗಳಲ್ಲಿ ಬರುವ ರೋಗವನ್ನು ಮುಂಜಾಗ್ರತೆಯಾಗಿ ತಡೆಗಟ್ಟಬಹುದು ಮತ್ತು ಹೆಚ್ಚು ರಾಸಾಯನಿಕ ಔಷಧಗಳನ್ನು ಬಳಸುವುದನ್ನು ಕಡಿತಗೊಳಿಸಬಹುದು ಎಂದು ವಿವರಿಸಿದರು.
ಹೆಚ್ಚಿನ ಲಾಭ: ಕೊಟ್ಟಿಗೆ ಗೊಬ್ಬರದ ಜೊತೆಗೆ ಲಘು ಪೋಷಕಾಂಶಗಳಾದ ಝಿಂಕ್ ಸಲ್ಫೇಟ್, ಬೋರಾಕ್ಸ್ ಮತ್ತು ಜಿಪ್ಸಂಗಳನ್ನು ಬಳಸುವುದರಿಂದ ಕಾಳು ಕಟ್ಟುವುದು, ಮತ್ತು ಕಾಳುಗಳ ಗುಣಮಟ್ಟವನ್ನು ಹೆಚ್ಚಿಸಿಬಹುದು. ಹಾಗೆಯೇ ಹೂವು ಉದುರುವುದನ್ನು ಕಡಿಮೆ ಮಾಡಬಹುದು. ಇಳುವರಿಯಲ್ಲಿಯೂ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದರು. ಗೆಜ್ಜಿಗನಹಳ್ಳಿಯ ಗ್ರಾಮ ಪಂಚಾಯ್ತಿ ಸದಸ್ಯರಾದ ಸೊಮಶೇಖರ, ರೈತ ಕ್ಷೇತ್ರ ಪಾಠ ಶಾಲೆಯ ಶಿಬಿರಾರ್ಥಿಗಳು, ಗ್ರಾಮದ ರೈತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

