ಜಿಲ್ಲಾಸ್ಪತ್ರೆಗೆ ಡಿಸಿ ದಿಢೀರ್ ಭೇಟಿ; ಅವ್ಯವಸ್ಥೆ ಬಗ್ಗೆ ಬೇಸರ
ಹಾಸನ: ನಗರದ ಸರ್ಕಾರಿ ದೊಡ್ಡಾಸ್ಪತ್ರೆಗೆ ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ದಿಢೀರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕಂಡ ಅವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ಕೆಲ ಅವ್ಯವಸ್ಥೆಯನ್ನು ಸರಿಪಡಿಸಲು ಫೆ. 27ರಂದು ಆಸ್ಪತ್ರೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ಕರೆದು ಸುದೀರ್ಘ ಚರ್ಚೆ ನಡೆಸಲು ಸೂಚಿಸಿದರು.
ತಾಕೀತು: ಹೆರಿಗೆ ವಾರ್ಡ್ ಮತ್ತು ಮಕ್ಕಳ ವಾರ್ಡ್ ಕಡಿಮೆ ಇದ್ದು, ವಿಸ್ತರಿಸಲು ಕೊಠಡಿಗಳ ಕೊರತೆ ಇದ್ದಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆ ಕೆಲ ಭಾಗಗಳನ್ನು ಖಾಲಿ ಇದ್ದ ಸ್ಥಳವನ್ನು ಗುರುತಿಸಿ ಈ ಭಾಗದಲ್ಲಿ ಮಕ್ಕಳ ವಾರ್ಡ್ ನಿರ್ಮಿಸಲು ತಾಕೀತು ಮಾಡಿದರು.
ಉದ್ಯಾನ ನಿರ್ಮಿಸಲು ಸೂಚನೆ: ಆಸ್ಪತ್ರೆ ಒಳಗೆ ಖಾಲಿ ಜಾಗವಿರುವ ಭಾಗದಲ್ಲಿ ಕಸ ಕಡ್ಡಿಗಳಿಂದ ಕೊಳಚೆ ಪ್ರದೇಶದಂತೆ ಇದ್ದದ್ದನ್ನು ಕಂಡು ಸಂಬಂಧಪಟ್ಟ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡಿಸಿ, ಆಸ್ಪತ್ರೆ ಆವರಣದಲ್ಲಿ ಉದ್ಯಾನವನ ನಿರ್ಮಿಸಿ ರೋಗಿಗಳು ಕುಳಿತುಕೊಳ್ಳಲು ಉತ್ತಮವಾದ ವಾತಾವರಣ ನಿರ್ಮಿಸಬೇಕು. ಇದಕ್ಕಾಗಿ ತಗಲುವ ಖರ್ಚನ್ನು ಕಾಲೇಜ್ ಫಂಡ್ ಹಾಗೂ ಇತರೆ ಮೂಲಗಳಿಂದ ಭರಿಸಬಹುದು ಎಂದರು.
ನಾಮಫಲಕ ಹಾಕಿ: ಆಸ್ಪತ್ರೆಯ ಪ್ರತಿ ವಾರ್ಡ್ಗಳಿಗೂ ಆಯಾ ಚಿಕಿತ್ಸೆಯ ನಾಮಫಲಕವನ್ನು ಹಾಕಲು ಸೂಚಿಸಿದ ಅವರು, ಸ್ವಚ್ಛತೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಂಕರ್ ಹಾಗೂ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ರಾಚೇಗೌಡರಿಂದ ಮಾಹಿತಿ ಪಡೆದರು.
ಪಟ್ಟಿ ತಯಾರಿಸಲು ಆದೇಶ: ಆಸ್ಪತ್ರೆಯಲ್ಲಿ ಕೆಲ ಕೊಠಡಿಗಳನ್ನು ನಿರ್ಮಿಸಲು, ಉದ್ಯಾನ ನಿರ್ಮಿಸುವುದು ಸೇರಿದಂತೆ ಇತರೆ ವ್ಯವಸ್ಥೆ ಸರಿಪಡಿಸಲು ಪಿಬ್ಲ್ಯೂಡಿ ಎಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್, ನಗರಸಭೆ ಆಯುಕ್ತರು, ಎಸಿ, ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಜ. 27ರಂದು ಬೆಳಿಗ್ಗೆ ಆಸ್ಪತ್ರೆ ಒಳಗೆ ಸಭೆ ಕರೆದು ಖರ್ಚು ವೆಚ್ಚದ ಬಗ್ಗೆ ಚರ್ಚಿಸಲಾಗುವುದು ಎಂದ ಡಿಸಿ, ಅಷ್ಟರೊಳಗೆ ಖರ್ಚಿನ ಬಗ್ಗೆ ಪಟ್ಟಿ ಮಾಡಲು ಆದೇಶಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಡಾ. ಶ್ಯಾಮಲಾದೇವಿ, ಹೆಚ್.ಎಲ್. ಜನಾರ್ಧನ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

