ಹಾಸನ

ಕನಿಷ್ಠ ವೇತನ ರು. 3 ಸಾವಿರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ. ವಾರ್ತೆ ಟಿ ಹಾಸನ ಟಿ ಜು. 1
ಅಕ್ಷರ ದಾಸೋಹ ನೌಕರರ ಕನಿಷ್ಠ ಕೂಲಿ ಮತ್ತು ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ (ಐಎಲ್‌ಸಿ) ಶಿಫಾರಸುಗಳ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆಯ ಮೂಲಕ ತಾಲೂಕು ಪಂಚಾಯ್ತಿ ಆವರಣದಲ್ಲಿ ಧರಣಿ ನಡೆಸಿದರು. ಬಿಸಿಯೂಟ ಯೋಜನೆಯ ಅಭಿವೃದ್ಧಿಗಾಗಿ ಕಳೆದ 11 ವರ್ಷಗಳಿಂದ ಹಗಲಿರುಳು ದುಡಿಯುತ್ತಿರುವ ಅಕ್ಷರ ದಾಸೋಹ ಮಹಿಳೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಬೇಡಿಕೆಗಳು: ಕೇಂದ್ರ ಸರ್ಕಾರ ಘೋಷಿಸಿರುವಂತೆ ಅಕ್ಷರ ದಾಸೋಹ ನೌಕರರಿಗೆ ತಕ್ಷಣ ಒಂದು ಸಾವಿರ ರು. ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಸರ್ಕಾರ ಹೋರಾಟದ ಸಂದರ್ಭದಲ್ಲಿ ಒಪ್ಪಿಕೊಂಡಂತೆ ಹೆಚ್ಚಿಸಿರುವ 500 ರು.ಗಳನ್ನು ಡಿಸೆಂಬರ್ 2013ರಿಂದಲೇ ಜಾರಿ ಮಾಡಬೇಕು. ಕೂಲಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗ ಕೆಲಸದ ಅವಧಿ ಬೆಳಗ್ಗೆ 9ರಿಂದ 3ರವರೆಗೆ ಆಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಅಡುಗೆಯವರ ಗೌರವ ಧನ ದಿನವೊಂದಕ್ಕೆ 150 ರು.ಗಳಷ್ಟಿದೆ. ಹರ್ಯಾಣದಲ್ಲಿ 2500 ರು.ಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವವರಿಗೆ ಈಗ 174 ರು.ಕೊಡಲಾಗುತ್ತಿದೆ.
 ಬಿಸಿಯೂಟ ನೌಕರರಿಗೆ ಕನಿಷ್ಠ 3 ಸಾವಿರ ರು. ವೇತನ ಜಾರಿ ಮಾಡಬೇಕು. ಅಲ್ಲದೆ ಬೇರೆಯವರ ಮನೆಗೆಲಸ ಮಾಡುವವರಿಗೆ ಕನಿಷ್ಠ ಕೂಲಿ ನಿರ್ಧರಿಸಿರುವ ಸರ್ಕಾರ ಅವರಿಗಿಂತ ಹೆಚ್ಚು ಹೊತ್ತು ನೂರಾರು ಮಕ್ಕಳಿಗಾಗಿ ದುಡಿಯುವ ತನ್ನ ಇಲಾಖೆಯ ಅಕ್ಷರ ದಾಸೋಹದವರಿಗೆ ಕನಿಷ್ಠ ಕೂಲಿ ನಿರ್ಧರಿಸಬೇಕು.
ಖಾಸಗೀಕರಣ ಬೇಡ: ಬಿಸಿಯೂಟ ಯೋಜನಯನ್ನು ಖಾಸಗೀಕರಣ ಮಾಡಬಾರದು. ವಿಧಾನ ಪರಿಷತ್ತಿನಲ್ಲಿ ಶಿಕ್ಷಣ ಮಂತ್ರಿಗಳು, ಕಾರ್ಪೊರೇಟ್ ಸಂಸ್ಥೆಗಳಿಗೆ ಬಿಸಿಯೂಟದ ಯೋಜನೆಯನ್ನು ವಹಿಸಿ ಕೊಡುತ್ತೇನೆಂದು ಹೇಳಿಕೆ ನೀಡಿದ್ದಾರೆ. ಸರ್ಕಾರದ ಈ ಖಾಸಗೀಕರಣದ ಎಲ್ಲ ಪ್ರಯತ್ನ ಕೂಡಲೇ ನಿಲ್ಲಬೇಕು.  ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯಡಿಯಲ್ಲಿ ಕಾಯಂ ಮಾಡಬೇಕು. ಇವರನ್ನು ಶಾಲಾ ಸಿಬ್ಬಂದಿಯೆಂದು ನೇಮಿಸಿ, ಆದೇಶ ಪತ್ರ ನೀಡಬೇಕು.    
ಎಲ್ಲ ಬೇಡಿಕೆ ಈಡೇರಿಸಿ: ಪ್ರತೀ ತಿಂಗಳಿಗೆ ವೇತನ ಕೈ ಸೇರುವಂತಾಗಬೇಕು. ಶಿಕ್ಷಕರಿಗೆ ನೀಡುವ ಹಾಗೆ ಬೇಸಿಗೆ ರಜಾ ವೇತನವನ್ನು ಬಿಸಿಯೂಟ ನೌಕರರಿಗೂ ಕೊಡಬೇಕು. ಅಡುಗೆ ತಯಾರು ಮಾಡುವಾಗ ಆಕಸ್ಮಿಕ ಅಪಘಾತವಾಗಿ ಯಾವುದೇ ಸ್ವರೂಪದಲ್ಲಿ ಗಾಯಗಳಾದರೂ ಪರಿಹಾರ ನೀಡಬೇಕು ಎಂಬುದು ಸೇರಿದಂತೆ ಇತರ ಎಲ್ಲ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
 ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಕಲಾ, ಖಜಾಂಚಿ ರಾಧ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ, ಸಿಐಟಿಯು ಉಪಾಧ್ಯಕ್ಷ ಜಿ.ಪಿ.ಸತ್ಯನಾರಾಯಣ್, ಪ್ರಕಾಶ್, ಮಂಜುನಾಥ್ ಹಾಗೂ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.