ಹಾಸನ

ಅಧಿಕಾರ ಸ್ವೀಕಾರ

Published On :

ಹಾಸನ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು ಮತ್ತು ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ.ಸಿ.ಎನ್. ಲೋಕಪ್ಪಗೌಡ ಅವರನ್ನು ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು ಬೇಲೂರಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇವಾ ಹಿರಿತನದ  ಆಧಾರದ ಮೇಲೆ ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದೆ. ಜೂ. 30ರಂದು ಪ್ರಭಾರಿ ಪ್ರಾಂಶುಪಾಲರಾಗಿದ್ದ ಡಿ.ಎಸ್. ರಾಜು ಅವರಿಂದ ಅಧಿಕಾರ ಸ್ವೀಕರಿಸಿದರು. ಲೋಕಪ್ಪಗೌಡ ತಮ್ಮ ಸೇವಾವಧಿಯಲ್ಲಿ ಇತಿಹಾಸದ ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತ, ಮಧ್ಯಕಾಲೀನ ಭಾರತ, ಆಧುನಿಕ ಭಾರತ, ಭಾರತ ಸ್ವಾತಂತ್ರ್ಯ ಚಳವಳಿ, ಆಧುನಿಕ ಕರ್ನಾಟಕ, ಆಧುನಿಕ ಯೂರೋಪ್, ಆಧುನಿಕ ಏಷ್ಯಾ ಹಾಗೂ ಭಾರತ ಮತ್ತು ಸಮಕಾಲೀನ ಪ್ರಪಂಚ ಎಂಬ 8 ಇತಿಹಾಸ ಪುಸ್ತಕಗಳನ್ನು  ಬರೆದಿದ್ದಾರೆ.
ಸಭೆ ನಾಳೆ
ಹಾಸನ: ಬೇಲೂರು ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ವರ್ಗಗಳ ಜನಾಂಗದವರ ಸಮಸ್ಯೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಜು 5ರಂದು  ಬೆಳಗ್ಗೆ 11 ಕ್ಕೆ  ಬೇಲೂರು ತಹಸೀಲ್ದಾರ್ ಅವರ ಕಚೇರಿ ಸಭಾಂಗಣದಲ್ಲಿ ಹಿತರಕ್ಷಣಾ ಸಮಿತಿ ಸಭೆ ಕರೆಯಲಾಗಿದೆ.
 ಸಭೆಯಲ್ಲಿ ಶಾಸಕ  ವೈ.ಎನ್.ರುದ್ರೇಶ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಬೇಲೂರು ತಾಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ತಂಗುದಾಣ ನಿರ್ಮಾಣ
ಹಾಸನ: ಮಲೆನಾಡು ಕೇಂದ್ರ ಸ್ಥಳವಾದ ಸಕಲೇಶಪುರದಲ್ಲಿ ಹಾಲಿ ಇರುವ ಬಸ್ಸು ತಂಗುದಾಣ ದೂರವಿರುವುದರಿಂದ ಅಗತ್ಯವಿರುವ ಕಡೆ ಬಸ್ಸು ತಂಗುದಾಣವನ್ನು ನಿರ್ಮಿಸುವ ಕುರಿತು ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಸಕಲೇಶಪುರ ನಗರದಲ್ಲಿ ಪ್ರಸ್ತುತ ಇರುವ ಕರಾರಸಾ ಸಂಸ್ಥೆಯ ಬಸ್ಸು ನಿಲ್ದಾಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-48ರ ಮಲ್ಲಿಕಾಜುನ ನಗರದಲ್ಲಿದ್ದು, ಈ ಭಾಗದ ಪ್ರಯಾಣಿಕರ ಅವಶ್ಯಕತೆಗೆ ಅನುಗುಣವಾಗಿರುತ್ತದೆ. ಬಸ್ಸು ತಂಗುದಾಣಗಳ ನಿರ್ಮಾಣ ಮತ್ತು ನಿರ್ವಹಣೆ ಕೆಲಸವನ್ನು ಸ್ಥಳೀಯ ನಗರಸಭೆ, ಪುರಸಭೆ ಅಥವಾ ಜಿಲ್ಲಾ ಪಂಚಾಯತ್ ವತಿಯಿಂದ ನಿರ್ವಹಿಸಲಾಗುವುದೆಂದು ತಿಳಿಸಿದರು.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.