ಕ್ರೀಡಾಕೂಟ 7ರಿಂದ
ಹಾಸನ: ಪ್ರಸಕ್ತ ಸಾಲಿನ ಕ್ರೀಡಾ ಸಮಿತಿಯ ನಡಾವಳಿಯನ್ವಯ ವಾರ್ಷಿಕ ಯೋಜನೆಯಂತೆ 14 ಮತ್ತು 17ರ ವಯೋವುತಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ನೇರ ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಈ ಕೆಳಕಂಡ ಶಾಲಾ ಮುಖ್ಯಸ್ಥರು ತಮಗೆ ನಿಗಧಿಪಡಿಸಿರುವ ಕ್ರೀಡಾಕೂಟಗಳನ್ನು ಸಂಘಟಿಸಲು ತಿಳಿಸಿದೆ. ಜು. 7 ರಂದು ಈಜನ್ನು ಸಂತ ಜೋಸೆಫ್ ಪ್ರೌಢಶಾಲೆಯ ವತಿಯಿಂದ ನಗರದ ನಗರ ಈಜುಕೊಳಲ್ಲಿ ಹಾಗೂ ಷಟಲ್ ಪಂದ್ಯವನ್ನು ಯುರೋ ಪಬ್ಲಿಕ್ ಶಾಲೆ ವತಿಯಿಂದ ಹಾಸನ ಕ್ಲಬ್ನಲ್ಲಿ, ಜು. 8 ರಂದು ಯೋಗಾಸನವನ್ನು ಹೋಲಿ ಮದರ್ ಪ್ರೌಢಶಾಲೆ ವತಿಯಿಂದ ರಾಮಕೃಷ್ಣ ವಿದ್ಯಾಲಯದಲ್ಲಿ, ಕ್ರಿಕೆಟ್ ಪಂದ್ಯವನ್ನು ಆನಂದ ಭಾರತಿ ಪ್ರೌಢಶಾಲೆ ವತಿಯಿಂದ ಕಲಾ ಕಾಲೇಜು ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ. ಜು. 9 ರಂದು ಕುಸ್ತಿ ಪಂದ್ಯವನ್ನು ನ್ಯಾಷನಲ್ ಪ್ರೌಢಶಾಲೆ ವತಿಯಿಂದ ಕ್ರೀಡಾಂಗಣದ ಮಿನಿ ಜಿಮ್ನಾಷಿಯಂನಲ್ಲಿ, ಹ್ಯಾಂಡ್ಬಾಲ್ ಪಂದ್ಯ ನಗರದ ಸಂತ ಫಿಲೋಮಿನ ಹಿಪ್ರಾ ಶಾಲೆ ವತಿಯಿಂದ ಜಿಲ್ಲಾ ಕ್ರೀಡಾಂಗಣಲ್ಲಿ ಏರ್ಪಡಿಸಿದೆ.
ಜು. 10 ರಂದು ಚೆಸ್ ಪಂದ್ಯವನ್ನು ಹೇಮಾವತಿ ನಗರದ ಎಲೈಟ್ ಪ್ರೌಢಶಾಲೆ ವತಿಯಿಂದ ಜು. 11 ರಂದು ಟೇಬಲ್ ಟೆನ್ನಿಸ್ ಪಂದ್ಯವನ್ನು ಕುವೆಂಪುನಗರದ ಅರವಿಂದ ಪ್ರೌಢಶಾಲೆಯ ವತಿಯಿಂದ ಶಾಲಾ ಆವರಣದಲ್ಲಿ ಹಾಗೂ ಪುಟ್ಬಾಲಲ್ಪಂದ್ಯವನ್ನು ಶ್ರೀ ಆದಿಚುಂಚನಗಿರಿ ಶಾಲೆ ರಾಮನಕಟ್ಟೆ ವತಿಯಿಂದ ಜಿಲ್ಲಾ ಕ್ರೀಡಾಂಗಣಲ್ಲಿ ಏರ್ಪಡಿಸಲಾಗಿದೆ.ಜು. 14 ರಂದು ಜಿಮ್ನಾಸ್ಟಿಕ್ ಎಪಿಎ ಅಕಾಡೆಮಿ ಶಾಲೆ ವತಿಯಿಂದ ಜಿಲ್ಲಾ ಕ್ರೀಡಾಂಗಣ (ಒಳಾಂಗಣ)ದಲ್ಲಿ ಏರ್ಪಡಿಸಲಾಗಿದೆ. ಜು. 15ರಂದು ನೆಟ್ಬಾಲ್ ಪಂದ್ಯವನ್ನು ಚಿಕ್ಕಹೊನ್ನೇನ ಹಳ್ಳಿಯ ವಿಜಯ ಪ್ರೌಢಶಾಲೆ ಆವರಣದಲ್ಲಿ ಹಾಗೂ ಹಾಕಿ ಪಂದ್ಯವನ್ನು ರವೀಂದ್ರನಗರದ ಸ.ಹಿ. ಪ್ರಾ ಶಾಲೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಜು. 18ರಂದು ಹರ್ಡಲ್ಸ್ ಅನ್ನು ಸಂತೆಪೇಟೆ ಸರ್ಕಾರಿ ಪಪೂ ಕಾಲೇಜಿನ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

