ಹಾಸನ

ಪತಂಜಲಿ ಯೋಗಾಸನ ಉಚಿತ ಶಿಬಿರ 10ರಿಂದ

Published On :

ಹಾಸನ: ನಗರದ ಪತಂಜಲಿ ಯೋಗಾಕೇಂದ್ರ ಹಾಗೂ ಹೋಲಿ ಮದರ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜು. 10 ರಿಂದ 29 ರವರೆಗೆ ಮಹಿಳೆಯರಿಗಾಗಿ  ಉಚಿತ ಯೋಗಾಸನ ಶಿಬಿರವನ್ನು ನಗರದ ಹೋಲಿ ಮದರ್ ಶಾಲೆಯ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.  ಯೋಗಾಭ್ಯಾಸದ  ಮೂಲಕ ಆರೋಗ್ಯ  ವೃದ್ಧಿಸಿಕೊಳ್ಳುವ  ಹಾಗೂ ಮಹಿಳೆಯರ  ದೈಹಿಕ ಮತ್ತು ಮಾನಸಿಕ  ಅನೇಕ ಆರೋಗ್ಯ  ಸಮಸ್ಯೆಗೆ (ಶಾಶ್ವತ) ಪರಿಣಾಮಕಾರಿ  ಪರಿಹಾರವನ್ನು ಕಂಡುಕೊಳ್ಳುವ  ಅವಕಾಶ ಮಾಡಿಕೊಡಲಾಗಿದೆ.  ಮಹಿಳೆಯರ ರಕ್ತದ ಒತ್ತಡ, ಋತುಚಕ್ರ, ಮಧುಮೇಹ, ಥೈರಾಡ್, ಕೀಲು ನೋವು, ಮಾನಸಿಕ ಒತ್ತಡ, ಬೊಜ್ಜು ನಿವಾರಣೆ, ಸೈನ (ತಲೆನೋವು) ಇತರೆ ಸಮಸ್ಯೆಗಳಿಗೆ  ಯೋಗಾಭ್ಯಾಸದ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬಹು ದಾಗಿದೆ.  ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 98443856 32ಅಥವಾ ದೂ.ಸಂ. 08172- 245343 ಸಂಪರ್ಕಿಸಲು ಕೋರಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.