4 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
ಜಾವಗಲ್: ಹೋಬಳಿಯ ದೇವಿಕೆರೆ, ಐದಳ್ಳ, ಅಪ್ಪಿಹಳ್ಳಿ, ಜಾವಗಲ್ ಸೇರಿದಂತೆ 15 ಕೆರೆಕಟ್ಟೆಗಳಿಗೆ ಯಗಚಿ ಜಲಾಶಯದಿಂದ ಕುಡಿಯುವ ನೀರಿಗಾಗಿ ನೆರೆನೀರು ತುಂಬಿಸುವ ಯೋಜನೆಗೆ 79 ಕೋಟಿ ವೆಚ್ಚದ ಎಸ್ಟಿಮೇಟ್ ತಯಾರಿಸಿ ಜಸಂಪನ್ಮೂಲ ಸಚಿವರು ಹಾಗೂ ಮುಖುಮಂತ್ರಿಗಳಿಗೆ ಸಲ್ಲಿಸಿದ್ದು, ಯೋಜನೆಯ ಜಾರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ವೈ.ಎನ್. ರುದ್ರೇಶಗೌಡ ಭರವಸೆ ನೀಡಿದರು. ಎಸ್. ಕಲ್ಲಹಳ್ಳಿಯಲ್ಲಿ ಸಿಆರ್ಎಫ್ ಯೋಜನೆಯ 4 ಕೋಟಿ ವೆಚ್ಚದ ಎಸ್. ಕಲ್ಲಹಳ್ಳಿ- ನೇರ್ಲಿಗೆ-ಜಾವಗಲ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಹಾಗೂ ಎಪಿಎಂಸಿಯಿಂದ 5 ಲಕ್ಷ ವೆಚ್ಚದ ರೈತರ ರಾಶಿಕಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಎಪಿಎಂಸಿ ನಿರ್ದೇಶಕ ಕಲ್ಲಳ್ಳಿ ನಾಗರಾಜು, ಎನ್ಎಚ್ಎಇಇ ಅನಂತರಾಜು, ಮಹದೇವಪ್ಪ, ಆನಂದ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇರ್ಲಿಗೆ ಗ್ರಾಪಂ ಅಧ್ಯಕ್ಷ ಜಗದೀಶ್ ವಹಿಸಿದ್ದರು. ತಾಪಂ ಸದಸ್ಯೆ ರಾಜೇಶ್ವರಿ ಶಿವಾನಂದ್, ಗ್ರಾಪಂ ಸದಸ್ಯೆ ನೀಲಮ್ಮ ಬಸವರಾಜು, ಮಹಾಲಿಂಗಪ್ಪ, ಎಪಿಎಂಸಿ ಸದಸ್ಯರಾದ ಜಿಎಸ್ ಸಿದ್ದಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

