ಹಾಸನ

ಸಮ್ಮೇಳನಾಧ್ಯಕ್ಷ ನಾಗೇಶ್ ಕೌಂಡಿನ್ಯಗೆ ಅಧಿಕೃತ ಆಹ್ವಾನ

Published On :

ಹೊಳೆನರಸೀಪುರ: ತಾಲೂಕಿನಲ್ಲಿ  ಜು.28ರಂದು ನಡೆಯಲಿರುವ 4ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ, ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾದಂಬರಿಕಾರ-ಕಿರುತೆರೆ ಸಾಹಿತಿ ನಾಗೇಶ್ ಕೌಂಡಿನ್ಯ ಅವರಿಗೆ ಕಸಾಪ ತಾಲೂಕು ಘಟಕ ಹಾಗೂ ತಾಲೂಕು ಆಡಳಿತದಿಂದ ಅಧಿಕೃತ ಆಹ್ವಾನವನ್ನು ನೀಡಲಾಯಿತು.
 ಕಸಾಪ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪರಿಷತ್ತಿನ ತಾಲೂಕು ಘಟಕದ ಗೌರವಾಧ್ಯಕ್ಷರೂ ಆದ ತಹಸೀಲ್ದಾರ್ ಎಸ್. ರಾಘವೇಂದ್ರ ಅವರ ನೇತೃತ್ವದಲ್ಲಿ ಸಾಹಿತಿ ನಾಗೇಶ್ ಕೌಂಡಿನ್ಯ ಅವರ ಪಟ್ಟಣದಲ್ಲಿನ ನಿವಾಸಕ್ಕೆ ತೆರಳಿ, ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಗೌರವಿಸಿ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭಾಗವಹಿಸುವಂತೆ ಅಧಿಕೃತ ಆಹ್ವಾನ ನೀಡಲಾಯಿತು.
ತಹಸೀಲ್ದಾರ್ ಎಸ್. ರಾಘವೇಂದ್ರ ಮಾತನಾಡಿ, ಸಮ್ಮೇಳನಗಳು ಸಾಹಿತ್ಯಿಕ ಬೆಳವಣಿಗೆಗೆ ಸಹಕಾರಿಯಾದರೆ, ಸಾಹಿತ್ಯ ಭವನಗಳು ಪರಿಷತ್ತಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆದ್ದರಿಂದಲೇ ಈ ಬಾರಿ ತಾಲೂಕಿನಲ್ಲಿ ನಡೆಯಲಿರುವ 4ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿಯೇ ಶತಮಾನೋತ್ಸವ ಸಾಹಿತ್ಯ ಭವನದ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಲಿರುವುದು ಇಲ್ಲಿನ ಕನ್ನಡಾಭಿಮಾನಿಗಳ ಒತ್ತಾಸೆಗೆ ಸಿಕ್ಕ ಫಲವಾಗಿರುವುದು ಶ್ಲಾಘನೀಯ ಸಂಗತಿ ಎಂದರು.
  ಕಸಾಪ ಘಟಕ ಹಾಗೂ ತಾಲೂಕು ಆಡಳಿತದ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದ ನಾಗೇಶ್ ಕೌಂಡಿನ್ಯ ಅವರು, ನನ್ನ ಜೀವನದಲ್ಲಿ ಸಿಕ್ಕಂತಹ ಅತ್ಯಂತ ಮಹತ್ವಪೂರ್ಣ ಘಟ್ಟ ಇದಾಗಿದ್ದು, ನನಗೆ ಬರೆಯುವುದು ಗೊತ್ತಿತ್ತೇ ಹೊರತು, ಬೆರೆಯುವುದು ಗೊತ್ತಿರಲಿಲ್ಲ, ಸಮ್ಮೇಳನಾಧ್ಯಕ್ಷರ ಪಟ್ಟ ನನ್ನನ್ನು ಹುಡುಕಿಕೊಂಡು ಬಂದಿರುವುದು ಸಂಭ್ರಮ ತಂದಿದೆ ಎಂದರು.
 ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ  ಎಚ್.ಎಸ್. ಪುಟ್ಟಸೋಮಪ್ಪ, ಪರಿಷತ್ತಿನ ಮಾಜಿ ಅಧ್ಯಕ್ಷ ರಾಮಚಂದ್ರ ಪುತ್ತೂರಾಯ ಮಾತನಾಡಿದರು.
 ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಗುಂಜೇವು ಅಣ್ಣಾಜಪ್ಪ, ಬಾ.ರಾ. ಸುಬ್ಬರಾಯ, ಎಚ್.ಡಿ. ಗುರುಪ್ರಸಾದ್, ಕೆ.ಬಿ. ವೆಂಕಟಸ್ವಾಮಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಕೆ.ಸಿ. ಮರಿಯಪ್ಪ, ಕಸಾಪ ಉಪಾಧ್ಯಕ್ಷ ಎಂ.ಎನ್. ಜೈಪ್ರಕಾಶ್, ಕಸಾಪ ಕಾರ್ಯದರ್ಶಿ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಟಿ.ಎನ್. ಕುಮಾರಸ್ವಾಮಿ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು.ಟಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.