ದೇಗುಲ ಹಿಂಭಾಗದ ಮನೆಗಳ ತೆರವು
ಬೇಲೂರು: ಇಲ್ಲಿನ ಚೆನ್ನಕೇಶವ ಸ್ವಾಮಿ ದೇಗುಲ ಹಿಂಭಾಗದಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಸೇರಿದ 12 ಎಕರೆ ಜಾಗದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಯೋಜನೆಗಳನ್ನು ಶೀಘ್ರದಲ್ಲೇ ರೂಪಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಮಧುಕೇಶ್ವರ್ ತಿಳಿಸಿದರು.
ಪಟ್ಟಣದ ಶ್ರೀ ಚೆನ್ನಕೇಶವ ಸ್ವಾಮಿ ದೇಗುಲ ಹಿಂಭಾಗದಲ್ಲಿರುವ 2 ಮನೆಗಳನ್ನು ಮಂಗಳವಾರ ತೆರವು ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿ, 8 ಎಕರೆ ಜಾಗವನ್ನು ಈಗಾಗಲೇ ವಶಪಡಿಸಿಕೊಂಡಿದ್ದು ಒಟ್ಟು 12 ವಿವಾದ ಪ್ರಕರಣಗಳು ಕೋರ್ಟಿನ ಮೆಟ್ಟಿಲೇರಿದ್ದು ಅವುಗಳನ್ನು ತ್ವರಿತವಾಗಿ ವಿಚಾರಣೆ ಮಾಡಿ ಪೂರ್ಣ12 ಎಕರೆ ಜಾಗವನ್ನು ವಶ ಪಡಿಸಿ ಕೊಳ್ಳಲಾಗುವುದು. ಈ ಜಾಗದಲ್ಲಿ ಮೆಘಾ ಪ್ರಾಜೆಕ್ಟ್ ರೂಪಿಸಿದ್ದು ಹೈಟೆಕ್ ಶೌಚಾಲಯ, ವಾಹನ ನಿಲುಗಡೆ ಸೇರಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಸುಧೀಂದ್ರ ಅವರ ಮನೆಯನ್ನು ತೆರವು ಮಾಡಿಸುತ್ತಿದ್ದು ಮನೆಗೂ, ಅವರಿಗೂ ಇರುವ ಒಡನಾಟದ ಭಾಂದವ್ಯದ ಅರಿವು ನಮಗೂ ಇದೆ. ಅಲ್ಲದೆ ಕೆಲವರಿಗೆ ಕೊಟ್ಟಿರುವ ಪರಿಹಾರದ ಬಗ್ಗೆ ಅಪಸ್ವರವಿದೆ. ಸುಧೀಂದ್ರ ಅವರಿಗೆ ಕೊಟ್ಟಿರುವ ಪರಿಹಾರ ಕಡಿಮೆಯಾಗಿದ್ದಲ್ಲಿ ಅವರು ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ಸೂಕ್ತ ಪರಿಹಾರ ಪಡೆಯಲು ಹೋರಾಟ ನಡೆಸಬಹುದು. ತಾವು ವಾಸವಿದ್ದ ಮನೆಯನ್ನು ಸಂತೋಷದಿಂದ ತೆರವು ಮಾಡುತ್ತಿದ್ದು ಅವರ ಮನೋಭಾವ ಇತರರಿಗೆ ಮಾದರಿಯಾಗಲಿ ಎಂದರು. ತಹಸೀಲ್ದಾರ್ ಜಗದೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯ ನಿರ್ದೇಶಕ ಎಂ, ಆರ್. ಪ್ರಕಾಶ್, ತಮ್ಮಣ್ಣಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

