ಹಾಸನ

ಪತ್ರಕರ್ತೆ ಮೊಬೈಲ್ ಕದ್ದವನ ಬಂಧನ

Published On :

ಸಕಲೇಶಪುರ: ಪತ್ರಕರ್ತರೊಬ್ಬರ ಮೊಬೈಲ್ ಮತ್ತು ಹಣ ದೋಚಿದ ವ್ಯಕ್ತಿಯನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೇ 21ರಂದು ಬೆಂಗಳೂರಿನ ಪತ್ರಕರ್ತೆ ಸುಮಲತಾ ಅವರು ಸ್ನೇಹಿತರೊಂದಿಗೆ ತಾಲೂಕಿನ  ಭೀಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ್ದರು. ದೇವಾಲಯ ಸಮೀಪದ ನದಿ ತೀರದಲ್ಲಿ ಬ್ಯಾಗುಗಳನ್ನು ಇಟ್ಟು ಸ್ನಾನಕ್ಕೆ ಇಳಿದ ವೇಳೆ ಸಮೀಪ ಜಂಬರಡಿ ಗ್ರಾಮದ ಅನುಕುಮಾರ್ ಹಣ, ಮೊಬೈಲ್ ಸಮೇತ ಬ್ಯಾಗ್ ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಎರಡು ಮೊಬೈಲ್, 10000 ನಗದು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಹಕರಿಸಿದ ಅನುಕುಮಾರ್ ಗೆಳೆಯರನ್ನೂ ಬಂಧಿಸಲಾಗಿದೆ.
ತಾಯಿ, ಮಗು ನಾಪತ್ತೆ
ಸಕಲೇಶಪುರ: ತಾಲೂಕಿನ ಕಜಾಡುಮನೆ ಟೀ ಎಸ್ಟೇಟ್ನ ಕೂಲಿ ಕಾರ್ಮಿಕ ಸಂತೋಷ್ ಎಂಬವರ ಪತ್ನಿ ಜಯಂತಿ (21) ಜು.8 ರಂದು ಒಂದೂವರೆ ವರ್ಷದ ಮಗು ಭರತ್ನ್ನು ಕರೆದುಕೊಂಡು ಕಾಡುಮನೆಯಲ್ಲಿರುವ  ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲ. ಮನೆಯಿಂದ ಹೋಗುವ ವೇಳೆ ಮಹಿಳೆ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದರು. ಇವರ ಕುರಿತು ಮಾಹಿತಿ ಸಿಕ್ಕರೆ ಮೊ.9480804761 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಸಕಲೇಶಪುರ ಗ್ರಾಮಾಂತರ ಠಾಣಾ ಪಿಎಸೈ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.