ಹಾಸನ

ಆಗಬೇಕಾದ ಕನ್ನಡದ ಕೆಲಸ ಸಾಕಷ್ಟಿದೆ

Published On :

ಕನ್ನಡಪ್ರಭ ವಾರ್ತೆ, ಆಲೂರು, ಜು 15
ಕನ್ನಡಿಗರು ವಿಶ್ವ ಮಾನ್ಯತೆ ಪಡೆವ ನಿಟ್ಟಿನಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು. ಇನ್ನು ಮುಂದೆಯೂ ಸಹ ಆಗಬೇಕಾದ ಕೆಲಸ ಸಾಕಷ್ಟಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ಕೆ. ಹೊಸಕೋಟೆ ಹೋಬಳಿ ಹರಿಹಳ್ಳಿ ಕೆಂಚಾಂಬ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ನೆಲ-ಜಲ ರಕ್ಷಣೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆ ಸಾಹಿತ್ಯ ಕ್ಷೇತ್ರದತ್ತ ಹೆಚ್ಚಿನ ಒಲವು ತೋರುತ್ತಿರುವುದು. ಉತ್ತಮ ಬೆಳವಣಿಗೆಯಾಗಿದೆ. ಹರಿಹಳ್ಳಿಯಂತಹ ಹೋಬಳಿ ಕೇಂದ್ರಗಳಲ್ಲಿ ತಾಲೂಕು ಮಟ್ಟದ ಸಮಾವೇಶವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ನಿರ್ಲಕ್ಷ್ಯ ಸಲ್ಲದು: ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಜ.ಹೋ. ನಾರಾಯಣಸ್ವಾಮಿ, ಸರ್ಕಾರದ ಸಂಕಲ್ಪದ ಕೊರತೆ ಹಾಗೂ ಕನ್ನಡಿಗರ ನಿರ್ಲಕ್ಷ್ಯ ಭಾವನೆಯಿಂದ ಕನ್ನಡಕ್ಕೆ ಧಕ್ಕೆ ಉಂಟಾಗಿದೆ. ಕನ್ನಡ ಭಾಷೆಗಿರುವ ಗೌರವ ಯಾವುದೇ ಭಾಷೆಗಿಲ್ಲ. ಕನ್ನಡವನ್ನು ಶ್ರೀಮಂತಗೊಳಿಸಲು ಪ್ರತಿಯೊಬ್ಬ ಕನ್ನಡಿಗನು ಪಣ ತೊಡಬೇಕಾಗಿದೆ ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಜನಾರ್ದನ್ ಮಾತನಾಡಿ, ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕಿದೆ ಎಂದರು. ಸಮ್ಮೇಳನಾಧ್ಯಕ್ಷ ಡಾ.ವಳಗರಳ್ಳಿ ವಿಶ್ವನಾಥ್ ಮಾತನಾಡಿ, ಕೆರಳಿಸುವ ದೃಶ್ಯ ಮಾಧ್ಯಮಗಳಿಗಿಂತ ಅರಳಿಸುವ ಸಾಹಿತ್ಯ ಓದಿನ ಖುಷಿ ಎಂಬುದನ್ನು ತಿಳಿಸುತ್ತದೆ ಎಂದರು.
ಹಾಸನ ಎವಿಕೆ ಕಾಲೇಜು ಪ್ರಾಧ್ಯಾಪಕ ಡಾ. ಯತೀಶ್, ವಿ.ಪಿ. ಹೆಗಡೆ, ಪ್ರೊ. ಮಂಜಯ್ಯ, ತಾಪಂ ಅಧ್ಯಕ್ಷ  ಎಸ್.ಸಿ. ಕಾಂತರಾಜ್, ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಮಂಜೇಗೌಡ ಮಾತನಾಡಿದರು. ಸಾಹಿತಿ ಹೊಸಳ್ಳಿ ರಾಜೇಗೌಡ, ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಕಳೇ ಆಲೂರು ನಾಗರಾಜು, ತಾಪಂ ಸದಸ್ಯ ಕೆ.ಎನ್. ಕಾಂತರಾಜ್, ಯಶೋಧ ಹರೀಶ್, ನಾಯಕರಳ್ಳಿ ಮಂಜೇಗೌಡ, ಎ.ಎಸ್. ಶಿವಮೂರ್ತಿ ಇತರರಿದ್ದರು. ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಚ್.ಆರ್. ಮಂಜಪ್ಪಗೌಡ, ಎಸ್.ಎಚ್. ಕಾಂತರಾಜು, ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್, ಕಲಾವಿದ ಕೆಂಚಯ್ಯ, ವೇದಾವತಿ, ಸಾಹಿತಿ ಯೋಗೇಶ್, ಹಾಗೂ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮೆರವಣಿಗೆ: ಗ್ರಾಪಂ ಅಧ್ಯಕ್ಷ ಕೆ.ಕೆ. ಚಂದ್ರಶೇಖರ್ ರಾಷ್ಟ್ರಧ್ವಜ, ಹೋಬಳಿ ಅಧ್ಯಕ್ಷ ಸೋಮೇಶ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ಸಮ್ಮೇಳನಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಕೆಂಚಾಂಬ ದೇವಸ್ಥಾನದಿಂದ ಸಮುದಾಯ ಭವನದವರೆಗೂ ಮೆರವಣಿಗೆಯಲ್ಲಿ ಕರೆತರಲಾಯಿತು. ಒಟ್ಟಾರೆ ಆಲೂರು ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.