ಶುಶ್ರೂಷಕರದ್ದು ಮಹತ್ವದ ಪಾತ್ರ
ಹಾಸನ: ಶೂಶ್ರುಷಕರು ಯಾವುದೇ ಚಿಕಿತ್ಸಾ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಸಕ್ರಿಯವಾಗಿಯೂ ಹಾಗೂ ಪ್ರಗತಿಯುತವಾಗಿ ಸೇವೆ ಸಲ್ಲಿಸಲು ಪುನಶ್ಚೇತನ ತರಬೇತಿಗಳು ಅವಶ್ಯಕ. ಇದರಿಂದ ಅವರು ಚಿಕಿತ್ಸಾ ಕ್ರಮಗಳಲ್ಲಿನ ಹೊಸ ಅವಿಷ್ಕಾರಗಳು, ಇತ್ತೀಚಿನ ಬೆಳವಣಿಗೆಗಳ ಕುರಿತು ಜ್ಞಾನ ಪಡೆಯಲು ಸಹಕಾರಿಯಾಗುತ್ತದೆ ಎಂದು ನಗರದ ರತ್ನಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಎಂ. ಸೆಲ್ವಿ ಅಭಿಪ್ರಾಯಪಟ್ಟರು.
ಪ್ರಶಿಕ್ಷಣ: ನಗರದ ಎಸ್ಡಿಎಂ ಆಯುರ್ವೇದ ಕಾಲೇಜಿನಲ್ಲಿ ಭಾರತ ಸರ್ಕಾರದ ಆಯುಷ್ ನಿರ್ದೇಶನಾಲಯದ ಪ್ರಾಯೋಜಕತ್ವ ಹಾಗೂ ನವದೆಹಲಿಯ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಸಂಯೋಜಕತ್ವದಲ್ಲಿ ನಡೆಯುತ್ತಿರುವ ಆಯುಷ್ ಶೂಶ್ರೂಷಕರ ಆರು ದಿನಗಳ ರಾಷ್ಟ್ರಮಟ್ಟದ ನಿರಂತರ ಪ್ರಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕ ಡಾ. ಮುರಲೀಧರ್ ಪೂಜಾರ್ ಮಾತನಾಡಿ, ಆಯುರ್ವೇದ ವಿಜ್ಞಾನದಲ್ಲಿ ಸಹಸ್ರಾರು ವರ್ಷಗಳ ಹಿಂದೆಯೇ ಶುಶ್ರೂಷಕರ ಮಹತ್ವ ಕುರಿತು ವಿವರಿಸಲಾಗಿದೆ. ಚಿಕಿತ್ಸಾ ಪ್ರಕ್ರಿಯೆಯಲ್ಲಿ ವೈದ್ಯ, ಔಷಧ, ಉಪಸ್ಥಾತ(ಶುಶ್ರೂಷಕ) ಮತ್ತು ರೋಗಿ ಇವು ನಾಲ್ಕು ಆಧಾರ ಸ್ತಂಭಗಳಾಗಿವೆ. ಆದ್ದರಿಂದ ಶುಶ್ರೂಷಕರಿಗೆ ತರಬೇತಿ ನೀಡಿ ಅವರ ಜ್ಞಾನವರ್ಧನೆ ಮಾಡುವುದು ಚಿಕಿತ್ಸೆ ಯಶಸ್ಸಿಗೆ ಪೂರಕವಾಗುತ್ತದೆ ಎಂದರು.
ತರಬೇತಿ: ಆರುದಿನಗಳ ಕಾರ್ಯಾಗಾರದಲ್ಲಿ ಭಾರತದ 8 ರಾಜ್ಯಗಳಿಂದ ಆಯುಷ್ ವಿಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 30 ಜನ ಶುಶ್ರೂಷಕರು ಭಾಗವಹಿಸಿ ಶುಶ್ರೂಷಕರ ಸೇವಾ ಕೌಶಲ್ಯದ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯಲಿದ್ದಾರೆ. ಈ ತರಬೇತಿ ಪ್ರಶಿಕ್ಷಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಂಯೋಜಕರಾದ ಡಾ. ನವೀನ್ ಕೊಡ್ಲಾಡಿ ಇದ್ದರು. ಶುಶ್ರೂಷಕ ಅಧೀಕ್ಷಕ ಸೋಮಶೇಖರ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನು ಆಡಿದರು. ಗಾಯಿತ್ರಿ ಪ್ರಾರ್ಥಿಸಿದರು. ಡಾ. ಗುರುಬಸವರಾಜ್ ಯಲಗಚ್ಚಿನ ಕಾರ್ಯಕ್ರಮ ನಿರೂಪಿಸಿ, ಶುಶ್ರೂಷಕಿ ಪುಷ್ಪಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

