'ಧ್ಯಾನದಿದ ದೈಹಿಕ, ಮಾನಸಿಕ ಆರೋಗ್ಯ'
ಕ.ಪ್ರ. ವಾರ್ತೆ, ಹೊಳೆನರಸೀಪುರ, ಜು.20
ಧ್ಯಾನವೆಂಬುದು ವೈಜ್ಞಾಕವಾಗಿ ಮನಸ್ಸನ್ನು ಶೂನ್ಯಗೊಳಿಸುವ ಮತ್ತು ಆತ್ಮವನ್ನು ಚೇತನಗೊಳಿಸುವ ಶಾಸ್ತ್ರವಾಗಿದ್ದು, ನಾವು ಹೆಚ್ಚು ಧ್ಯಾನ ಮಾಡಿದಂತೆ ಭೌತಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ ಜೀವನದಲ್ಲಿ ದೃಢತೆ ಹೆಚ್ಚುತ್ತದೆ ಎಂದು ಬೆಂಗಳೂರಿನ ಪಿರಮಿಡ್ ಸ್ಪಿರಿಚ್ಯುಯೆಲ್ ಸೊಸೈಟಿ ಮೂವ್ಮೆಂಟ್ನ ದಿವ್ಯಶ್ರೀ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅವರು ಪಟ್ಟಣದ ಕೆಎನ್ಎ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣದಲ್ಲಿ ಧ್ಯಾನದ ಮಹತ್ವ ಎಂಬ ವಿಷಯದ ಕುರಿತಾದ ಮಾಹಿತಿ ಸಂಕಿರಣದಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳು ಪಿರಮಿಡ್ನಲ್ಲಿ ಧ್ಯಾನ ಮಾಡುವುದರಿಂದ ಏಕಾಗ್ರತೆ, ಜ್ಞಾಪಕ ಶಕ್ತಿ, ಆತ್ಮವಿಶ್ವಾಸ, ಶಾರೀರಿಕ ಆರೋಗ್ಯ, ಮಾನಸಿಕ ಪರಿಪಕ್ವತೆ ಮತ್ತು ಮೇಧಾಶಕ್ತಿಗಳು ಬಹಳಷ್ಟು ವೃದ್ಧಿಸುತ್ತವೆ ಎಂದು ಹೇಳಿದರು.
ಧ್ಯಾನದಿಂದ ಆರೋಗ್ಯ: ವ್ಯಕ್ತಿ ತನ್ನಲ್ಲಿ ನಡೆಯುತ್ತಿರುವ ಸಹಜವಾದ ಉಸಿರಾಟದ ಪ್ರಕ್ರಿಯೆ ಮೇಲೆಯೇ ತನ್ನ ಗಮನವನ್ನು ಮತ್ತು ಅರಿವನ್ನು ಸಂಪೂರ್ಣವಾಗಿ ಇರಿಸುವುದನ್ನು ಧ್ಯಾನ ಎನ್ನುತ್ತೇವೆ. ಧ್ಯಾನದಿಂದ ಉತ್ತಮವಾದ ದೈಹಿಕ ಆರೋಗ್ಯವನ್ನು ಹೊಂದುವ ಜೊತೆಯಲ್ಲಿಯೇ, ಒತ್ತಡರಹಿತ, ಆನಂದ ಮತ್ತು ಉಲ್ಲಾಸಭರಿತ ಜೀವನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮೂವ್ಮೆಂಟ್ನ ಪದಾಧಿಕಾರಿಗಳು ಹಾಗೂ ಕೆಎನ್ಎ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಸಂಸ್ಥಾಪಕರಾದ ಕೆ.ಎ.ವೆಂಕಟೇಶ್ ಬಾಬು ದಂಪತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

