ಕಟ್ಟುನಿಟ್ಟಿನ ಕಾನೂನು ಅಗತ್ಯ: ಭಾರತೀಗೌಡ
ಬೇಲೂರು: ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರಗಳು ಕಡಿಮೆಯಾಗಬೇಕೆಂದರೆ ಕಟ್ಟುನಿಟ್ಟಿನ ಕಾನೂನು ರಚನೆಯಾಗಬೇಕು ಎಂದು ಕರವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೈ.ಆರ್. ಭಾರತೀಗೌಡ ಆಗ್ರಹಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಕರವೇ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಅತ್ಯಾಚಾರದ ಬಗ್ಗೆ ಕಾನೂನು ವ್ಯವಸ್ಥೆ ವಿಫಲವಾಗಿ ಹೆಣ್ಣು ಮಕ್ಕಳು ಭಯಭೀತರಾಗಿ ಓಡಾಡುವಂತಾಗಿದೆ. ಕಾನೂನಿನ ದೌರ್ಬಲ್ಯದಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಸೂಕ್ತ ಕ್ರಮ ತುರ್ತಾಗಿ ಕೈಗೊಳ್ಳಬೇಕಾಗಿದೆ ಎಂದರು.
ಅತ್ಯಾಚಾರ ಪ್ರಕರಣಗಳಲ್ಲಿ ಸಾಕ್ಷಿ ಪುರಾವೆಗಳು ದೊರೆತು ತೀರ್ಪು ಹೊರಬೀಳಲು ಹಲವಾರು ವರ್ಷಗಳೇ ಬೇಕು, ಆ ವೇಳೆಗೆ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಜೀವ ನೊಂದು ಬೆಂದು ಸಮಾಜಕ್ಕೆ ತಿರಸ್ಕಾರಕ್ಕೆ ಒಳಗಾಗಿ, ಅವಿವೇಕಿಗಳ ಚುಚ್ಚುಮಾತುಗಳಿಗೆ ಬಲಿಯಾಗಿ ಸರಿಯಾದ ನ್ಯಾಯ ದೊರೆಕದೆ ಕೇಸು ಖುಲಾಸೆಯಾಗುತ್ತದೆ ಎಂದು ಹೇಳಿದರು. ನಗರಾಧ್ಯಕ್ಷೆ ಭಾಗ್ಯ, ನಾಗಮ್ಮ, ಇಂದಿರಮ್ಮ, ತೀರ್ಥಮ್ಮ, ಮಲ್ಲಿಗೆ, ವಿಶಾಲಾಕ್ಷಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

