ಹಾಸನ

ಸೌಲಭ್ಯ ಇಲ್ಲದೆ ವ್ಯಾಪಾರಿಗಳ ಪರದಾಟ

Published On :

ಹೊಳೆನರಸೀಪುರ: ಮಳೆಗಾಲ ಬಂತೆಂದರೆ ಬೀದಿಯ ತುಂಬೆಲ್ಲಾ ನಿಂತಿರುವ ಕೊಳಚೆ ನೀರಿನ ಮಧ್ಯೆಯೇ ಸೊಪ್ಪು ತರಕಾರಿಗಳನ್ನು ಮಾರುವ ಅನಿವಾರ್ಯತೆ ಇಲ್ಲಿನ ವ್ಯಾಪಾರಿಗಳದ್ದಾದರೆ, ಕೊಚ್ಚೆ ಹಾಗೂ ಅನೈರ್ಮಲ್ಯದ ಸ್ಥಳದಲ್ಲಿ ಮಾರುವ ತರಕಾರಿ ಕಾಯಿ ಪಲ್ಲೆಗಳನ್ನು ಕೊಳ್ಳುವ ಅನಿವಾರ್ಯತೆ ಗ್ರಾಹಕರದ್ದಾಗಿದೆ.
 ಎಷ್ಟೇ ಮುಂದುವರೆದರೂ ದಶಕಗಳೇ ಕಳೆದರೂ ಇಲ್ಲಿನ ಬೀದಿ ಬದಿಯ ವ್ಯಾಪಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸಿಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಇಲ್ಲಿನ ಪುರಸಭೆಯ ಆಡಳಿತದಿಂದಾಗಿ, ಮಳೆಗಾಲದಲ್ಲಿ ಕೊಚ್ಚೆಯ ನಡುವೆ ತರಕಾರಿ ವ್ಯಾಪಾರ ನಡೆದರೆ, ಬೇಸಿಗೆಯಲ್ಲಿ ಬಿಸಿಲು ಧೂಳಿನಿಂದ ಕೂಡಿದ ತರಕಾರಿ ಕಾಯಿ ಪಲ್ಲೆಗಳನ್ನು ಕೊಳ್ಳುವ ಅನಿವಾರ್ಯತೆ ಇಲ್ಲಿನ ನಾಗರಿಕರದ್ದಾಗಿದೆ.
ಕೊಳಚೆ ಮಾರುಕಟ್ಟೆ: ಇಡೀ ಜಿಲ್ಲೆಯಲ್ಲಿಯೇ ಇಲ್ಲಿನ ಸಮೃದ್ಧವಾದ ಸೊಪ್ಪು-ತರಕಾರಿ-ಹೂವು-ಬೆಣ್ಣೆ-ಅಕ್ಕಿಗೆ ವಿಶೇಷವಾದ ಸ್ಥಾನವಿದೆ. ಆದರೆ ಇವೆಲ್ಲಾ ಇಲ್ಲಿ ಸ್ವಚ್ಛತೆ ಇಲ್ಲದ ಬೀದಿಯಲ್ಲಿ ಮಾರಾಟವಾಗುತ್ತಿರುವುದು ಇಲ್ಲಿನ ಜನರ ವ್ಯಾಪಾರಿಗಳ ಹಾಗೂ ಕೊಳ್ಳುವ ಗ್ರಾಹಕರ ದೌರ್ಭಾಗ್ಯವಾಗಿದೆ. ಮಳೆ ಬಂತೆಂದರೆ ಇಲ್ಲಿನ ತರಕಾರಿ ಮಾರುಕಟ್ಟೆಯು ನಿಜಕ್ಕೂ ಕೊಳಚೆ ಪ್ರದೇಶವಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ತಿರುಗಾಡಲೂ ಅಸಹ್ಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಬೀದಿ ಬದಿಯ ವ್ಯಾಪಾರಿಗಳಿಂದ ತಪ್ಪದೇ ಸುಂಕ ವಸೂಲು ಮಾಡುವ ಇಲ್ಲಿನ ಪುರಸಭೆಗೆ ಪಡೆದ ತೆರಿಗೆ ಹಾಗೂ ಸುಂಕಕ್ಕೆ ಕನಿಷ್ಠ ಸವಲತ್ತನ್ನಾದರೂ ಕಲ್ಪಿಸಬೇಕೆನ್ನುವ ಕಾಳಜಿಯಿಲ್ಲ.  ಹೋಗಲಿ ಇದೇ ಜನರಿಂದ ಆರಿಸಿ ಹೋಗಿರುವ ಪುರಸಭೆಯ ಸದಸ್ಯರುಗಳಿಗೂ ಈ ಕುರಿತು ಕಾಳಜಿಯಿಲ್ಲ ಎಂಬುದು ಇಲ್ಲಿನ ನಾಗರಿಕರು ಹಾಗೂ ಬೀದಿ ಬದಿಯ ಬಡ ವ್ಯಾಪಾರಿಗಳ ದೂರಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.